ಟೆಹ್ರಾನ್: ಇರಾನ್‌ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆ ಮುಂದುವರಿದಿರುವಂತೆಯೇ, ದೇಶದ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ವಿರುದ್ಧವೇ ತಿರುಗಿಬಿದ್ದಿರುವ ಅವರ ಸೋದರ ಸೊಸೆ ಮೊರಾದ್‌ಖನಿ ಅವರನ್ನು ಶನಿವಾರ ಬಂಧಿಸಲಾಗಿದೆ.
“ಇದೊಂದು ಹತ್ಯೆಕೋರ ಮತ್ತು ಮಕ್ಕಳನ್ನು ಕೊಲೆಗೈಯ್ಯುವ ಸರ್ಕಾರ’ ಎಂದು ಆಕೆ ತನ್ನ ಸೋದರಮಾವನ ಆಡಳಿತವನ್ನು ಖಂಡಿಸಿ ಟ್ವೀಟ್ ಮಾಡಿದ್ದರು. ಜತೆಗೆ, “ಇಡೀ ಜಗತ್ತು ಇರಾನ್ ಜತೆಗಿನ ಸಂಬಂಧವನ್ನು ಕಡಿದುಕೊಳ್ಳಬೇಕು’ ಎಂದೂ ಹೇಳಿದ್ದ ಅವರು ಖಮೇನಿಯನ್ನು ಹಿಟ್ಲರ್‌ಗೆ ಹೋಲಿಸಿದ್ದರು.
ಇದರ ಬೆನ್ನಲ್ಲೇ ಆಕೆಯನ್ನು ಅರೆಸ್ಟ್ ಮಾಡಲಾಗಿದೆ. ಇನ್ನೊಂದೆಡೆ, ಹಿಜಾಬ್ ಧರಿಸದೇ ಬ್ಯಾಂಕಿಗೆ ಬಂದಿದ್ದ ಗ್ರಾಹಕಿಯೊಬ್ಬರಿಗೆ ಸೇವೆ ನೀಡಿದ್ದಾರೆ ಎಂಬ ಆರೋಪದ ಮೇರೆಗೆ ಬ್ಯಾಂಕ್ ಮ್ಯಾನೇಜರ್‌ವೊಬ್ಬರನ್ನು ವಜಾ ಮಾಡಲಾಗಿದೆ.