Advertisement

ದಾವೂದ್‌ ಸಹೋದರ ಕಸ್ಕರ್‌ ಆಸ್ಪತ್ರೆಯಿಂದ ಮರಳಿ ಜೈಲಿಗೆ

11:26 AM May 29, 2018 | Team Udayavani |

ಮುಂಬಯಿ : ನಿನ್ನೆ ಸೋಮವಾರ ರಾತ್ರಿ ಹಠಾತ್‌ ಅನಾರೋಗ್ಯದ ಕಾರಣಕ್ಕೆ ಜೆ ಜೆ ಆಸ್ಪತ್ರೆಗೆ ಒಯ್ಯಲ್ಪಟ್ಟಿದ್ದ ದಾವೂದ್‌ ಇಬ್ರಾಹಿಂ ನ ಸಹೋದರ ಇಕ್ಬಾಲ್‌ ಕಸ್ಕರ್‌ ನನ್ನು ಇಂದು ಮಂಗಳವಾರ ಥಾಣೆಯ ಕೇಂದ್ರೀಯ ಬಂಧೀಖಾನೆಗೆ ಮರಳಿ ತರಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

Advertisement

ನಿನ್ನೆ ರಾತ್ರಿ ಕಸ್ಕರ್‌ ತನಗೆ ಜೋರಾಗಿ ಎದೆ ನೋಯುತ್ತಿದೆ; ತಲೆ ಸುತ್ತಿ ಬರುತ್ತಿದೆ ಎಂದು ಜೈಲು ಅಧಿಕಾರಿಗಳಲ್ಲಿ ಹೇಳಿಕೊಂಡಿದ್ದ. ಅಂತೆಯೇ ಆತನನ್ನು ಕೂಡಲೇ ರಾತ್ರಿ 10 ಗಂಟೆಯ ವೇಳೆಗೆ ಮುಂಬಯಿಯ ಬೈಕುಲಾದಲ್ಲಿನ ಸರಕಾರಿ ಜೆ ಜೆ ಆಸ್ಪತ್ರೆಗೆ ಒಯ್ಯಲಾಯಿತು.ವೈದ್ಯರು ಆತನಿಗೆ ಅಗತ್ಯ ಚಿಕಿತ್ಸೆಯನ್ನು ನೀಡಿದರು. 

ಚಿಕಿತ್ಸೆಯ ಬಳಿಕ ಕಸ್ಕರ್‌ ಆರೋಗ್ಯ ಸುಧಾರಿಸಿರುವುದಾಗಿ ವೈದ್ಯರು ದೃಢೀಕರಿಸಿದರು. ಆ ಪ್ರಕಾರ ಇಂದು ಆತನನ್ನು ಮರಳಿ ಜೈಲಿಗೆ ತರಲಾಯಿತು ಎಂದು ಅಧಿಕಾರಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next