Advertisement
ಪ್ರಕರಣ ಸಂಬಂಧ ಕೆಂಗೇರಿ ಉಪವಿಭಾಗ ಎಸಿಪಿ ಕೋದಂಡರಾಮಯ್ಯ ಅವರು ಪಿಎಸ್‌ಐ ವಿರುದ್ಧ ತನಿಖೆ ನಡೆಸಿ ಮಧ್ಯಂತರ ವರದಿ ನೀಡಿದ್ದಾರೆ. ಈ ವರದಿಯ ನ್ನಾಧರಿಸಿ ಹರೀಶ್ ಅವರನ್ನು ಕರ್ತವ್ಯಲೋಪ, ಬೇಜಬ್ದಾರಿ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ.
Related Articles
Advertisement
ಕೆಲ ತಿಂಗಳ ಹಿಂದೆ ಮದ್ಯ ಸೇವಿಸಿ ಕರ್ತವ್ಯ ನಿರ್ವಹಿಸಿದ ಆರೋಪದ ಮೇಲೆ ಹೆಡ್‌ಕಾನ್‌ಸ್ಟೇಬಲ್ ಮಂಜುನಾಥ್ ಅವರನ್ನು ಹಿರಿಯ ಅಧಿಕಾರಿಗಳಿಗೆ ಹೇಳಿ ಪಿಎಸ್‌ಐ ಹರೀಶ್ ಅಮಾನತು ಮಾಡಿಸಿದ್ದರು. ಅದರಿಂದ ಖನ್ನತೆಗೊಳಗಾಗಿರುವ ಮಂಜುನಾಥ್, ಇದೀಗ ಪಿಎಸ್‌ಐ ಹರೀಶ್ ದೌರ್ಜನ್ಯವನ್ನು ಆಡಿಯೋ ಮೂಲಕ ವೈರಲ್ ಮಾಡಿದ್ದಾರೆ.
ಪಿಎಸ್‌ಐ ಹರೀಶ್ ತನ್ನ ಕೆಳ ಹಂತದ ಸಿಬ್ಬಂದಿಯಿಂದ ಪ್ರಗ್ನೆನ್ಸಿ ಹಾಗೂ ಅಬಾಷನ್ ಕಿಟ್ ಹಾಗೂ ಇತರೆ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಿರು ಮಂಜು ನಾಥ್, ಕೆಲ ಹಂತದ ಸಿಬ್ಬಂದಿಯನ್ನು ಬಳಸಿಕೊಳ್ಳಿ. ಆದರೆ, ಇಷ್ಟು ಕೀಳುಮಟ್ಟಕ್ಕೆ ಬಳಸಿಕೊಳ್ಳಬಾರದು. ಇದು ಅಸಹ್ಯ. ಇಲಾಖೆಗೆ ನಿನ್ನೊಬ್ಬ ಅನ್ಫಿಟ್.
ನೀನು ಕಾನ್‌ಸ್ಟೇಬಲ್ ಆಗಿ ಇದೇ ಠಾಣೆ ಯಲ್ಲಿ ಕೆಲಸ ಮಾಡುತ್ತಿದ್ದವನು. ಕಾನ್‌ಸ್ಟೇಬಲ್ ಸಮಸ್ಯೆ ಏನೆಂಬುದು ನಿನಗೆ ಗೊತ್ತಿತ್ತು. ಆದರೂ ಈ ರೀತಿ ಅನ್ಯಾಯ ಮಾಡಬಾರದಿತ್ತು. ಹಿರಿಯ ಅಧಿಕಾರಿಗಳ ಬಳಿ ನಿಮ್ಮ ಬಗ್ಗೆ ಹೇಳಿಕೊಂಡಿದಕ್ಕೆ, ಇಲ್ಲದ ವಿಚಾರಗಳನ್ನು ಹೇಳಿ ನಮ್ಮಂತವರ ಹೊಟ್ಟೆ ಮೇಲೆ ಹೊಡೆದರೆ, ಒಳ್ಳೆಯದ್ದು ಮಾಡಲ್ಲ. ಎಂಥ ಸ್ಥಿತಿ ಬರುತ್ತದೆ ನೋಡುತ್ತಿರಿ? ಟಾರ್ಚರ್ ಕೊಟ್ಟಿ ಕೆಲಸದಿಂದ ಅಮಾನತು ಮಾಡಿಸಿದ್ದಿಯಾ ಎಂದೆಲ್ಲ ನೋವು ಹೇಳಿಕೊಂಡಿದ್ದಾರೆ.
ಈ ಆಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಹರೀಶ್ ದೌರ್ಜನ್ಯದ ಬಗ್ಗೆ ಈಗ ಆಡಿಯೋ ಬಿಡುಗಡೆ ಮಾಡುವ ಬದಲು, ಈ ಹಿಂದೆಯೇ ತಮ್ಮ ಬಳಿ ದೂರು ನೀಡಿ ದ್ದರೆ, ಕಾನೂನು ಕ್ರಮಕೈಗೊಳ್ಳುತ್ತಿದ್ದೇವು. ಈಗ ಯಾವ ಕಾರಣಕ್ಕೆ ಆಡಿಯೋ ವೈರಲ್ ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.