Advertisement

ಐಪಿಎಸ್‌ ರೂಪಾ ಮೊಬೈಲ್‌ ಕಳವು: ಎಫ್ಐಆರ್‌ ರದ್ದು

05:52 AM Jan 31, 2019 | |

ಬೆಂಗಳೂರು: ರಾಜ್ಯ ಗೃಹರಕ್ಷಕ ದಳದ ಐಜಿಪಿ ಡಿ.ರೂಪಾ ಅವರ ಮೊಬೈಲ್‌ ಕಳವು ಮಾಡಿದ್ದ ಆರೋಪದಲ್ಲಿ ಆರೋಗ್ಯ ಇಲಾಖೆ ನಿರೀಕ್ಷಕ ರಾಮಪ್ಪ ವಿರುದ್ಧ ಬಿಡದಿ ಠಾಣೆ ಪೊಲೀಸರು ದಾಖಲಿಸಿದ್ದ ಎಫ್ಐಆರ್‌ ರದ್ದುಪಡಿಸಿ ಬುಧವಾರ ಆದೇಶಿಸಿದ ಹೈಕೋರ್ಟ್‌, ಐಪಿಎಸ್‌ ಅಧಿಕಾರಿಯಾಗಿದ್ದುಕೊಂಡು ಘಟನೆ ನಡೆದ ಒಂದು ದಿನದ ನಂತರ ದೂರು ದಾಖಲಿಸಿದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದೆ.

Advertisement

ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಫ್ಐಆರ್‌ ರದ್ದುಪಡಿಸುವಂತೆ ಕೋರಿ ಹಾಸನ ಜಿಲ್ಲೆಯ ಗಂಡಸಿ ಗ್ರಾಮದ ನಿವಾಸಿ, ಆರೋಗ್ಯ ಇಲಾಖೆ ನಿರೀಕ್ಷಕ ರಾಮಪ್ಪ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾ. ಅರವಿಂದ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ತಮ್ಮ ಮೊಬೈಲ್‌ ಕಳುವಾಗಿದೆ ಎಂದು ರೂಪಾ ಅವರು ದೂರಿನಲ್ಲಿ ಹೇಳಿದ್ದಾರೆ. ಆದರೆ, ಅರ್ಜಿದಾರ ರಾಮಪ್ಪ, ತಾವು ಮೊಬೈಲ್‌ ಕಳವು ಮಾಡಿಲ್ಲ. ಇನ್ನೋವೇಟಿವ್‌ ಫಿಲ್ಮ್ ಸಿಟಿಯಲ್ಲಿ ರೂಪಾ ಅವರ ಮೊಬೈಲ್‌ ಸಿಕ್ಕಿತ್ತು ಎಂದು ಪೊಲೀಸ್‌ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. ಅಲ್ಲದೆ, ರಾಮಪ್ಪ ಈಗಾಗಲೇ ಮೊಬೈಲ್‌ ಅನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆದ್ದರಿಂದ ಪ್ರಕರಣ ಮುಂದುವರಿಸುವ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್‌, ರಾಮಪ್ಪ ವಿರುದ್ಧದ ಮೊಬೈಲ್‌ ಕಳವು ಆರೋಪದಲ್ಲಿ ಬಿಡದಿ ಠಾಣಾ ಪೊಲೀಸರ ದಾಖಲಿಸಿದ್ದ ಎಫ್ಐಆರ್‌ ರದ್ದುಪಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next