Advertisement

ಆರು ಐಪಿಎಸ್‌ಗೆ ಮುಂಬಡ್ತಿ

12:30 AM Jan 01, 2019 | |

ಬೆಂಗಳೂರು:ಹಿರಿಯ ಐಪಿಎಸ್‌ ಅಧಿಕಾರಿ ಎಚ್‌.ಎಸ್‌ ರೇವಣ್ಣ ಸೇರಿದಂತೆ ಆರು ಐಪಿಎಸ್‌ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

Advertisement

ಅಗ್ನಿಶಾಮಕ ದಳದ ಡಿಐಜಿ ಆಗಿದ್ದ ಎಚ್‌.ಎಂ ರೇವಣ್ಣ ಅವರಿಗೆ ಐಜಿಪಿಯಾಗಿ ಮುಂಬಡ್ತಿ ನೀಡಿ ಬೆಳಗಾವಿ ಉತ್ತರ ವಲಯಕ್ಕೆ ನಿಯುಕ್ತಿಗೊಳಿಸಿದೆ.ದಕ್ಷಿಣ ಕನ್ನಡ ಎಸ್ಪಿ ಆಗಿದ್ದ  ಡಾ. ಬಿ.ಆರ್‌ ರವಿಕಾಂತೇಗೌಡ ಅವರನ್ನು ಅಗ್ನಿಶಾಮಕ ದಳದ ಡಿಐಜಿ ಆಗಿ ವರ್ಗಾವಣೆ ಮಾಡಲಾಗಿದೆ.ಐಎಸ್‌ಡಿ ಎಸ್ಪಿ  ಆರ್‌.ದಿಲೀಪ್‌ ಅವರಿಗೆ ಡಿಐಜಿ ಹುದ್ದೆ  ಮುಂಬಡ್ತಿ ನೀಡಿ ಕೇಂದ್ರ ಕಚೇರಿಗೆ ವರ್ಗಾಯಿಸಲಾಗಿದೆ. ಐಎಸ್‌ಡಿ ಎಸ್ಪಿ ಎಸ್‌.ಎನ್‌ ಸಿದ್ದರಾಮು ಅವರನ್ನು ಡಿಐಜಿ ಹುದ್ದೆ ಮುಂಬಡ್ತಿ ನೀಡಿ ಅದೇ ಸ್ಥಾನದಲ್ಲಿ ಮುಂದುವರಿಸಲಾಗಿದೆ.

ಕೇಂದ್ರ ಗುಪ್ತಚರ ದಳದ ಜಂಟಿ ನಿರ್ದೇಶಕ( ದೆಹಲಿ)ರಾಗಿದ್ದ ಕೌಶಲೇಂದ್ರ ಕುಮಾರ್‌,ಬೆಂಗಳೂರು ಇ.ಡಿ ಘಟಕದ ಜಂಟಿ ನಿರ್ದೇಶಕ ರಮಣ ಗುಪ್ತಾ, ಕೊಚ್ಚಿ  ಘಟಕದ ಜಂಟಿ ನಿರ್ದೇಶಕ ಅಭಿಷೇಕ್‌ ಗೋಯಲ್‌ ಅವರಿಗೆ ಡಿಐಜಿ ಹುದ್ದೆಗೆ ಮುಂಬಡ್ತಿ ನೀಡಲಾಗಿದ್ದು, ಅದೇ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

ಸಿಐಡಿ ಎಸ್‌ಪಿ ಡಾ. ಚಂದ್ರಗುಪ್ತ, ಲೋಕಾಯುಕ್ತ ಎಸ್‌.ಪಿ ಡಾ. ಕೆ ತ್ಯಾಗರಾಜನ್‌ ಅವರಿಗೆ ಹೆಚ್ಚುವರಿ ವೇತನಕ್ಕೆ ಆದೇಶ ಮಾಡಲಾಗಿದೆ. ಅದೇ ರೀತಿ ದಕ್ಷಿಣ ಕನ್ನಡ ಎಸ್ಪಿ  ಆಗಿ ಬಿ.ಎಂ ಲಕ್ಷ್ಮೀ ಪ್ರಸಾದ್‌ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಿದೆ.

2015ರ ನಾಲ್ವರು ಐಪಿಎಸ್‌ ಅಧಿಕಾರಿಗಳಿಗೆ ಅಸಿಸ್ಟೆಂಟ್‌ ಸೂಪರಿಡೆಂಟ್‌ ಆಪ್‌ ಪೊಲೀಸ್‌ (ಎಎಸ್‌ಪಿ) ಹುದ್ದೆಗಳಿಂದ ಸೂಪರಿಡೆಂಟ್‌ ಆಫ್ ಪೊಲೀಸ್‌ (ಎಸ್ಪಿ) ಹುದ್ದೆಗೆ ಬಡ್ತಿ ನೀಡಿದು ವರ್ಗಾವಣೆ ಗೊಳಿಸಿದೆ. ಅರುಣಾಗುÒ ಗಿರಿ ( ನಕ್ಸಲ್‌ ನಿಗ್ರಹ ಪಡೆ ಎಸ್ಪಿ, ಕಾರ್ಕಳ) ಸೋನವಾನೆ ರಿಷಿಕೇಶ್‌ ಭಗವಾನ್‌ ( ಎಸಿಬಿ ಬೆಂಗಳೂರು ಘಟಕ), ನಾಗೇಶ್‌ ಡಿ.ಎಲ್‌ ( ಸಿಐಡಿ ಎಸ್ಪಿ) , ಲೋಕೇಶ್‌ ಭರಮಪ್ಪ ಜಗಲಾಸರ್‌ ( ಐಸ್‌ಡಿ ಎಸ್ಪಿ ಬೆಂಗಳೂರು)

Advertisement

ಹೊಸದಾಗಿ ನಾಲ್ವರು ಎಎಸ್ಪಿಗಳ ನೇಮಕ
2016 ಬ್ಯಾಚ್‌ನ ತರಬೇತಿ ಪೂರ್ಣಗೊಳಿಸಿರುವ ನಾಲ್ವರು ಐಪಿಎಸ್‌ ಅಧಿಕಾರಿಗಳನ್ನು ಎಎಸ್ಪಿ ಹುದ್ದೆಗಳಿಗೆ ನೇಮಿಸಲಾಗಿದೆ. ಕ್ಷಮಾ ಮಿಶ್ರಾ ( ಮೈಸೂರು ಗ್ರಾಮಾಂತರ) ಯತೀಶ್‌ ಎನ್‌. ( ಸಾಗರ) ಸೈದುಲ್ಲಾ ಅದಾವತ್‌ ( ಬಂಟ್ವಾಳ ಉಪವಿಭಾಗ)

Advertisement

Udayavani is now on Telegram. Click here to join our channel and stay updated with the latest news.

Next