Advertisement

ನಾರದ ಸ್ಟಿಂಗ್ ಆಪರೇಶನ್ ಕೇಸ್; ಐಪಿಎಸ್ ಅಧಿಕಾರಿ ಮಿರ್ಜಾ ಸಿಬಿಐ ಬಲೆಗೆ

09:25 AM Sep 27, 2019 | Team Udayavani |

ನವದೆಹಲಿ: ನಾರದ ಸ್ಟಿಂಗ್ ಆಪರೇಶನ್(ಕುಟುಕು ಕಾರ್ಯಾಚರಣೆ) ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಗುರುವಾರ ಸೇವೆಯಿಂದ ಅಮಾತತುಗೊಂಡಿದ್ದ ಐಪಿಎಸ್ ಅಧಿಕಾರಿ ಎಎಂಎಚ್ ಮಿರ್ಜಾ ಅವರನ್ನು ಬಂಧಿಸಿದೆ.

Advertisement

ನಾರದ ನ್ಯೂಸ್ ಪೋರ್ಟಲ್ 2016ರಲ್ಲಿ ನಡೆಸಿದ್ದ ಸ್ಟಿಂಗ್ ಆಪರೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿರ್ಜಾ ಮೊದಲ ಬಂಧಿತ ವ್ಯಕ್ತಿಯಾಗಿದ್ದಾರೆ. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಇತರರು ನಗದನ್ನು ಸ್ವೀಕರಿಸಿದ್ದಾರೆಂದು ಕುಟುಕು ಕಾರ್ಯಾಚರಣೆ ಮೂಲಕ ನಾರದ ನ್ಯೂಸ್ ಪೋರ್ಟಲ್ ಬಯಲು ಮಾಡಿತ್ತು.

ಈ ಸಂದರ್ಭದಲ್ಲಿ ಮಿರ್ಜಾ ಕೂಡಾ ನಗದು ಪಡೆದುಕೊಂಡಿದ್ದು ಸ್ಟಿಂಗ್ ಆಪರೇಶನ್ ನಲ್ಲಿ ಬೆಳಕಿಗೆ ಬಂದಿತ್ತು. ಬಂಧಿತ ಮಿರ್ಜಾರನ್ನು ಸಿಬಿಐ ಅಧಿಕಾರಿಗಳು ಕೋರ್ಟ್ ಗೆ ಹಾಜರುಪಡಿಸಿದ್ದು, ಐದು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ ಎಂದು ವರದಿ ವಿವರಿಸಿದೆ.

ಕುಟುಕು ಕಾರ್ಯಾಚರಣೆಯಲ್ಲಿ ಹಣ ಪಡೆದಿದ್ದರ ಕುರಿತು ವಿಚಾರಣೆ ನಡೆಸಿದ್ದ ಸಂದರ್ಭದಲ್ಲಿ ಮಿರ್ಜಾ ಸಿಬಿಐ ಅಧಿಕಾರಿಗಳಿಗೆ ಸಮಾಧಾನಕರವಾದ ಉತ್ತರ ನೀಡಿಲ್ಲ ಎಂದು ವರದಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗಾಗಿ ಮಿರ್ಜಾರನ್ನು ಬಂಧಿಸಿ ವಿಚಾರಣೆಗೊಳಪಡಿಸಲು ಸಿಬಿಐ ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next