Advertisement

ದಾಂಡೇಲಿ: ಐಪಿಎಂ ಕಾಲೋನಿಯ ನಿವಾಸಿಗಳಿಗೆ ತಪ್ಪದ ಸಂಕಷ್ಟ

12:34 PM Dec 23, 2021 | Team Udayavani |

ದಾಂಡೇಲಿ: ಒಂದು ಕಾಲದಲ್ಲಿ ಗತವೈಭವವನ್ನು ಕಂಡಿದ್ದ ದಾಂಡೇಲಿ ನಗರದ ಐಪಿಎಂ ಕಾಲೋನಿ, ಯಾವಾಗ ಐಪಿಎಂ ಕಾರ್ಖಾನೆ ಸ್ಥಗಿತಗೊಂಡಿತೊ ದಿನಗಳು ಉರುಳಿದಂತೆ ಐಪಿಎಂ ಕಾಲೋನಿಯೂ ತನ್ನ ಜೀವ ಕಳೆಯನ್ನು ಕಳೆದುಕೊಂಡಿತು. ಇಂದಲ್ಲ ನಾಳೆಯಾದರೂ ಮತ್ತೇ ಐಪಿಎಂ ಕಾರ್ಖಾನೆ ಪುನರಾರಂಭವಾಗಬಹುದು ಇಲ್ಲವೇ ಪರ್ಯಾಯ ಕಾರ್ಖಾನೆ ಆರಂಭವಾಗಬಹುದೆಂಬ ಕನಸು ಮಾತ್ರ ಸದ್ದಿಲ್ಲದೇ ನುಚ್ಚು ನೂರಾಗಿದೆ. ಕ್ಷೇತ್ರದ ಶಾಸಕರೆ ಕೈಗಾರಿಕಾ ಸಚಿವರಾಗಿದ್ದರೂ ಆಗದೆ ಇರುವುದರಿಂದ ಇನ್ನಾದು ಖಂಡಿತ ಸಾಧ್ಯವಿಲ್ಲ ಎಂಬುವುದನ್ನು ನಗರದ ಜನತೆ ತಿಳಿದುಕೊಂಡಿದ್ದರಿಂದಲೇ ಕಾರ್ಖಾನೆ ಆರಂಭದ ಮಾತುಗಳನ್ನೆ ಮರೆತಿದ್ದಾರೆ.

Advertisement

ಅದೀರಲಿ, ಕಳೆದ 50 ವರ್ಷಗಳಿಗಿಂತಲೂ ಅಧಿಕ ವರ್ಷಗಳಿಂದ ಐಪಿಎಂ ಕಾಲೋನಿಯಲ್ಲಿ ಸರಿ ಸುಮಾರು 60 ಕುಟುಂಬಗಳು ಸಂಕಷ್ಟದಲ್ಲೆ ದಿನ ದೂಡುವ ಸ್ಥಿತಿಯಲ್ಲಿದ್ದಾರೆ. ಹರುಕು ಮುರುಕು ಗುಡಿಸಲು ಮನೆಗಳನ್ನು ತಮ್ಮಷ್ಟಕ್ಕೆ ತಾವೆ ತಕ್ಕಮಟ್ಟಿಗೆ ಸರಿ ಪಡಿಸಿಕೊಂಡು ದಿನ ಕಳೆಯುತ್ತಿದ್ದಾರೆ. ಇಲ್ಲಿ ಇದ್ದಿರುವ ಮನೆಗಳನ್ನು ದುರಸ್ತಿ ಮಾಡಲು ಐಪಿಎಂ ಕಾರ್ಖಾನೆಯವರು ಅವಕಾಶ ಮಾಡಿಕೊಡುತ್ತಿಲ್ಲ. ದುರಸ್ತಿಗೆ ಅವಕಾಶ ನೀಡಿ ಎಂದರೇ ಇಲ್ಲಿಂದ ಖಾಲಿ ಮಾಡಿ ಹೋಗಿ ಎಂದು ಹೆದರಿಸುತ್ತಾರಂತೆ. ಹೆದರಿ ಹೆದರಿ ದಿನಗಳನ್ನು ಏಣಿಸುತ್ತಾ ಜೀವನ ನಡೆಸುವ ಸಂದಿಗ್ದತೆಯಲ್ಲಿದ್ದಾರೆ.

ರಾಜ್ಯದ ಮುತ್ಸದ್ದಿ ಜನನಾಯಕನ ಕ್ಷೇತ್ರದಲ್ಲಿರುವ ಐಪಿಎಂ ಕಾಲೋನಿಯ ಜನತೆಗೆ ಸರಿಯಾಗಿ ಕುಡಿಯುವ ನೀರಿನ ಪೊರೈಕೆಯಾಗುತ್ತಿಲ್ಲ. ಬೀದಿ ದೀಪಗಳ ವ್ಯವಸ್ಥೆ ಸಮರ್ಪಕವಾಗಿಲ್ಲ. ಮೊದಲೆ ಕಾಡಿನಂಚಿನಲ್ಲಿರುವ ಈ ಪ್ರದೇಶದಲ್ಲಿ ಹಾವುಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದು ಸ್ಥಳೀಯ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಇದೇ ಐಪಿಎಂ ಕಾರ್ಖಾನೆಯವರು ಕಾರ್ಖಾನೆಯ ಕಟ್ಟಡಗಳನ್ನು ಹೋಂ ಸ್ಟೇ ಮಾಡಲು ಭರ್ಜರಿ ಬಾಡಿಗೆ ಕೊಟ್ಟು ಅದನ್ನು ದುರಸ್ತಿ, ನವೀಕರಣ ಮಾಡಲು ಅವಕಾಶ ನೀಡುತ್ತಾರೆ. ಆದರೆ ಬಡವರ ಸೂರುಗಳ ದುರಸ್ತಿಗೆ ಅವಕಾಶವಿಲ್ಲ. ಒಟ್ಟಿನಲ್ಲಿ ಒಂದು ಕಾಲದಲ್ಲಿ ಕಾರ್ಖಾನೆಗಾಗಿ ಬೆವರು ಸುರಿಸಿದ್ದ ಕಾಮರ್ಿಕರಿಗೆ ಈಗ ಕಾರ್ಖಾನೆಯಿಂದ ಕಣ್ಣೀರೆ ಕೊಡುಗೆಯಾಗಿದೆ.

ಇಲ್ಲಿಯ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ. ಮುತ್ಸದ್ದಿ ಜನನಾಯಕರು ಮುಂದೆ ನಿಂತು ಜನನಾಯಕನನ್ನಾಗಿಸಿದ ಈ ಜನತೆಯ ಕಣ್ಣೀರನ್ನು ಒರೆಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next