Advertisement
“ಈ ವರ್ಷದ ಐಪಿಎಲ್ ಪಂದ್ಯಾವಳಿ ವರ್ಷಾಂತ್ಯದಲ್ಲಿ ನಡೆ ಯುವ ಸಾಧ್ಯತೆ ಇದೆ. ಆದರೆ ಇದರ ವೇಳಾಪಟ್ಟಿಯನ್ನು ಕಿರಿದು ಗೊಳಿಸಬೇಕಾಗಬಹುದು. ವೀಕ್ಷಕರಿಗೆ ನಿರ್ಬಂಧ ವಿಧಿಸಿದರೆ ಆಗ ಕೇವಲ 3 ಅಥವಾ 4 ತಾಣಗಳಲ್ಲಿ ಪಂದ್ಯಗಳನ್ನು ಆಯೋಜಿಸಬಹುದು’ ಎಂಬುದಾಗಿ ಐಸಿಸಿ ಕ್ರಿಕೆಟ್ ಕಮಿಟಿಯ ಅಧ್ಯಕ್ಷರೂ ಆಗಿರುವ ಕುಂಬ್ಳೆ ಹೇಳಿದರು. ಅವರು “ಕ್ರಿಕೆಟ್ ಕನೆಕ್ಟೆಡ್’ ಕಾರ್ಯಕ್ರಮದಲ್ಲಿ ಮಾತಾಡುತ್ತಿದ್ದರು.
ಇದೇ ಕಾರ್ಯಕ್ರಮದಲ್ಲಿ ಭಾಗವ ಹಿಸಿದ್ದ ಮತ್ತೋರ್ವ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್, “ಈ ವರ್ಷ ಐಪಿಎಲ್ ನಡೆಯುವ ಸಾಧ್ಯತೆ ಖಂಡಿತ ಇದೆ. ಆಗ ಪ್ರಯಾಣವನ್ನು ಮೊಟಕುಗೊಳಿಸುವ ಉದ್ದೇಶದಿಂದ 3-4 ಸ್ಟೇಡಿಯಂಗಳಿರುವ ಕೆಲವು ನಗರಗಳನ್ನು ಆರಿಸುವುದು ಒಳ್ಳೆ ಯದು. ಇದರಿಂದ ಪಂದ್ಯಾ ವಳಿಯನ್ನು ಬೇಗ ಮುಗಿಸಬಹುದು’ ಎಂದರು.
Related Articles
Advertisement