ಬೆಂಗಳೂರು: ಈ ತಿಂಗಳ 31ಕ್ಕೆ ಐಪಿಎಲ್ ಭರ್ಜರಿಯಾಗಿ ಆರಂಭವಾಗಲಿದೆ. ಏ.2ಕ್ಕೆ ನಗರದ ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ನಡೆಯಲಿದೆ.
ಬೆಂಗಳೂರು ಚರಣ ಇಲ್ಲಿಂದಲೇ ಆರಂಭವಾಗಲಿದೆ. ಇದರ ನಡುವೆ ಐಪಿಎಲ್ ಕಳೆಗಟ್ಟಿಸುವ ಯತ್ನಕ್ಕೆ ನೇರಪ್ರಸಾರ ವಾಹಿನಿ ಸ್ಟಾರ್ ಸ್ಪೋರ್ಟ್ಸ್ ಕೈಹಾಕಿದೆ.
ಮಾ. 26ರಂದು ಬೆಂಗಳೂರು ನಗರಗಳ ಆಯ್ದಭಾಗಗಳಲ್ಲಿ ಐಪಿಎಲ್ ಟ್ರೋಫಿ ಯಾತ್ರೆ ನಡೆಯಲಿದೆ. ಬೆಳಗ್ಗೆ 5ರಿಂದ 11, ಮಧ್ಯಾಹ್ನ 1ರಿಂದ 3, ಸಂಜೆ 5ರಿಂದ ರಾತ್ರಿ 8, ರಾತ್ರಿ 9ರಿಂದ 11ರವರೆಗೆ ವಿವಿಧ ಕಡೆಗಳಲ್ಲಿ ಐಪಿಎಲ್ ಟ್ರೋಫಿಯನ್ನು ಸಾರ್ವಜನಿಕರು ನೋಡಬಹುದು.
ನೈಸ್ ರಸ್ತೆ, ಜಯನಗರದ ಮೈಯಾಸ್, ಫೋರಂ ನೆಕ್ಸಸ್ ಮಾಲ್‌ಗಳಲ್ಲಿ ಟ್ರೋಫಿಯ ಪ್ರದರ್ಶನವಿರುತ್ತದೆ. ಈಗಾಗಲೇ ಐಪಿಎಲ್ ಗುಂಗಿನಲ್ಲಿ ತುಂಬಿಕೊಂಡಿರುವ ಜನರಿಗೆ, ಸುಂದರವಾಗಿ ಅಲಂಕರಿಸಿರುವ ಮಾರ್ಗಗಳಲ್ಲಿ ಟ್ರೋಫಿಯನ್ನು ನೋಡುವ ಅವಕಾಶ ಎದುರಿಗಿದೆ.