Advertisement
ಐಪಿಎಲ್‌ಗೆ ಭದ್ರತೆ ಒದಗಿಸುವುದು ಅಸಾಧ್ಯವಾದ ಕಾರಣ ಹಾಗೂ ಕೆಲವೇ ದಿನಗಳ ಹಿಂದಷ್ಟೇ ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಬಸ್ ಮೇಲೆ ಭಯೋತ್ಪಾದಕ ದಾಳಿ ನಡೆದುದರಿಂದ ಈ ಕೂಟ ಭಾರತದಲ್ಲಿ ನಡೆಯುವ ಯಾವ ಸಾಧ್ಯತೆಯೂ ಇರಲಿಲ್ಲ. ಆದರೆ ಹೇಗಾದರೂ ಈ ಪಂದ್ಯಾವಳಿಯನ್ನು ಒಂದೇ ವರ್ಷಕ್ಕೆ ನಿಲ್ಲಿಸದೆ ಹೇಗಾದರೂ ಮಾಡಿ ನಡೆಸಲೇಬೇಕೆಂದು ಬಿಸಿಸಿಐ ಹಠತೊಟ್ಟ ಪರಿಣಾಮ ದ್ವಿತೀಯ ಐಪಿಎಲ್ ದಕ್ಷಿಣ ಆಫ್ರಿಕಾದತ್ತ ಮುಖ ಮಾಡಿತು. ಜತೆಗೆ ಯಶಸ್ವಿಯಾಗಿ ನಡೆಯಿತು.
Related Articles
ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ 7 ವಿಕೆಟಿಗೆ 165 ರನ್ ಪೇರಿಸಿದರೆ, ಚೆನ್ನೈ 7 ವಿಕೆಟ್ ನಷ್ಟಕ್ಕೆ 146 ರನ್ ಮಾಡಿ ಶರಣಾಯಿತು.
Advertisement
ಮುಂಬೈ ಸರದಿಯಲ್ಲಿ ನಾಯಕ ತೆಂಡುಲ್ಕರ್ ಅವರದೇ ಹೆಚ್ಚಿನ ಗಳಿಕೆ. ಸ್ಫೋಟಕ ಆಟಗಾರ ಸನತ್ ಜಯಸೂರ್ಯ ಜತೆ ಆರಂಭಿಕನಾಗಿ ಇಳಿದ ಅವರು 59 ರನ್ ಮಾಡಿ ಅಜೇಯರಾಗಿ ಉಳಿದರು (49 ಎಸೆತ, 7 ಬೌಂಡರಿ). ಇದು ಈ ಪಂದ್ಯದ ಏಕೈಕ ಅರ್ಧ ಶತಕವಾಗಿತ್ತು. ಈ ಸಾಧನೆಗಾಗಿ ಸಚಿನ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು.
ಕೇವಲ 14 ಎಸೆತಗಳಿಂದ 35 ರನ್ ಸಿಡಿಸಿದ ಅಭಿಷೇಕ್ ನಾಯರ್ ಮತ್ತೋರ್ವ ಪ್ರಮುಖ ಸ್ಕೋರರ್. ಮುಂಬೈ ಸರದಿಯ ಮೂರೂ ಸಿಕ್ಸರ್ ಇವರಿಂದ ಸಿಡಿಯಲ್ಪಟ್ಟಿತು. ಜಯಸೂರ್ಯ 26, ಶಿಖರ್ ಧವನ್ 22 ರನ್ ಮಾಡಿದರು.
ಚೆನ್ನೈ ಚೇಸಿಂಗ್ ವೈಫಲ್ಯಚೆನ್ನೈ ದ್ವಿತೀಯ ಎಸೆತದಲ್ಲೇ ಪಾರ್ಥಿವ್ ಪಟೇಲ್ ಅವರನ್ನು ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಸುರೇಶ್ ರೈನಾ ಕೂಡ ನಿಲ್ಲಲಿಲ್ಲ. 18 ನ್ನಿಗೆ 2 ವಿಕೆಟ್ ಉರುಳಿದ ಬಳಿಕ ಹೇಡನ್ (44) ಮತ್ತು ಫ್ಲಿಂಟಾಫ್ (24) ಸೇರಿಕೊಂಡು 52 ರನ್ ಜತೆಯಾಟ ನಡೆಸಿ ಚೆನ್ನೈಗೆ ಮೇಲುಗೈ ಒದಗಿಸಿದರು. ಆದರೆ 10 ಓವರ್‌ಗಳ ಬಳಿಕ ಮುಂಬೈ ಬೌಲಿಂಗ್ ಬಿಗಿಗೊಂಡಿತು. ಚೆನ್ನೈ ರನ್ನಿಗಾಗಿ ಪರದಾಡುವ ಜತೆಗೆ ವಿಕೆಟ್ ಉಳಿಸಿಕೊಳ್ಳುವಲ್ಲೂ ವಿಫಲವಾಯಿತು. ನಾಯಕ ಧೋನಿ ಕೊನೆಯ ಓವರ್ ತನಕ ನಿಂತು ಹೋರಾಟ ಸಂಘಟಿಸಿದರೂ ಪ್ರಯೋಜನವಾಗಲಿಲ್ಲ. ಸ್ಕೋರ್ ಪಟ್ಟಿ
ಮುಂಬೈ ಇಂಡಿಯನ್ಸ್
ಸನತ್ ಜಯಸೂರ್ಯ ಸಿ ಹೇಡನ್ ಬಿ ತುಷಾರ 26
ಸಚಿನ್ ತೆಂಡುಲ್ಕರ್ ಔಟಾಗದೆ 59
ಶಿಖರ್ ಧವನ್ ಸಿ ಧೋನಿ ಬಿ ಗೋನಿ 22
ಜೆಪಿ ಡ್ಯುಮಿನಿ ಸಿ ಮತ್ತು ಬಿ ಗೋನಿ 9
ಡ್ವೇನ್ ಬ್ರಾವೊ ಸಿ ಹೇಡನ್ ಬಿ ಜೋಗಿಂದರ್ 5
ಅಭಿಷೇಕ್ ನಾಯರ್ ಸಿ ತುಷಾರ ಬಿ ಓರಮ್ 35
ಹರ್ಭಜನ್ ಸಿಂಗ್ ರನೌಟ್ 4
ಜಹೀರ್ ಖಾನ್ ಸಿ ಅಶ್ವಿನ್ ಬಿ ಫ್ಲಿಂಟಾಫ್ 2
ಪಿಣಾಲ್ ಶಾ ಔಟಾಗದೆ 0
ಇತರ 3
ಒಟ್ಟು (7 ವಿಕೆಟಿಗೆ) 165
ವಿಕೆಟ್ ಪತನ: 1-39, 2-82, 3-95, 4-102, 5-148, 6-157, 7-161.
ಬೌಲಿಂಗ್:
ಮನ್‌ಪ್ರೀತ್ ಗೋನಿ 4-0-32-2
ತಿಲನ್ ತುಷಾರ 4-0-32-1
ಆ್ಯಂಡ್ರೂÂ ಫ್ಲಿಂಟಾಫ್ 4-0-44-1
ಜೇಕಬ್ ಓರಮ್ 4-0-30-1
ಜೋಗಿಂದರ್ ಶರ್ಮ 4-0-25-1
ಚೆನ್ನೈ ಸೂಪರ್ ಕಿಂಗ್ಸ್
ಪಾರ್ಥಿವ್ ಪಟೇಲ್ ಸಿ ತೆಂಡುಲ್ಕರ್ ಬಿ ಮಾಲಿಂಗ 0
ಮ್ಯಾಥ್ಯೂ ಹೇಡನ್ ಸಿ ಜಹೀರ್ ಬಿ ಜಯಸೂರ್ಯ 44
ಸುರೇಶ್ ರೈನಾ ಸಿ ರಾಜೆ ಬಿ ಬ್ರಾವೊ 8
ಆ್ಯಂಡ್ರೂÂ ಫ್ಲಿಂಟಾಫ್ ಸಿ ಮತ್ತು ಬಿ ಹರ್ಭಜನ್ 24
ಎಂ.ಎಸ್. ಧೋನಿ ಬಿ ಮಾಲಿಂಗ 36
ಜೇಕಬ್ ಓರಮ್ ಸಿ ಶಾ ಬಿ ಜಯಸೂರ್ಯ 8
ಎಸ್. ಬದರೀನಾಥ್ ಸಿ ಬ್ರಾವೊ ಬಿ ಮಾಲಿಂಗ 0
ಜೋಗಿಂದರ್ ಶರ್ಮ ಔಟಾಗದೆ 16
ತಿಲನ್ ತುಷಾರ ಔಟಾಗದೆ 1
ಇತರ 9
ಒಟ್ಟು (7 ವಿಕೆಟಿಗೆ) 146
ವಿಕೆಟ್ ಪತನ: 1-0, 2-18, 3-70, 4-89, 5-101, 6-109, 7-144.
ಬೌಲಿಂಗ್:
ಲಸಿತ ಮಾಲಿಂಗ 4-0-15-3
ಜಹೀರ್ ಖಾನ್ 4-0-34-0
ಡ್ವೇನ್ ಬ್ರಾವೊ 4-0-27-1
ರೋಹನ್ ರಾಜೆ 1-0-15-0
ಹರ್ಭಜನ್ ಸಿಂಗ್ 3-0-15-1
ಸನತ್ ಜಯಸೂರ್ಯ 4-0-34-2
ಪಂದ್ಯಶ್ರೇಷ್ಠ: ಸಚಿನ್ ತೆಂಡುಲ್ಕರ್