Advertisement

ಭಾರತದಲ್ಲೇ ಐಪಿಎಲ್‌: ಬಿಸಿಸಿಐ ಭರವಸೆ

06:55 AM Dec 20, 2018 | |

ಹೊಸದಿಲ್ಲಿ: ಮುಂದಿನ ವರ್ಷ ಭಾರತದಲ್ಲಿ ನಡೆಯುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಐಪಿಎಲ್‌ ಕೂಟದ ಕೆಲವು ಪಂದ್ಯಗಳು ವಿದೇಶದಲ್ಲಿ ನಡೆಯಲಿವೆ ಎಂಬ ಸುದ್ದಿ ಇದೆ. ಆದರೆ ಬಿಸಿಸಿಐ ಮಾತ್ರ ಇಡೀ ಕೂಟ ಭಾರತದಲ್ಲೇ ನಡೆಯಲಿದೆ ಎಂಬ ವಿಶ್ವಾಸದಲ್ಲಿದೆ.

Advertisement

“ಇಡೀ ಐಪಿಎಲ್‌ ಕೂಟವನ್ನು ಭಾರತದಲ್ಲೇ ನಡೆಸಲು ಎಲ್ಲ ಪ್ರಯತ್ನ ನಡೆಸಲಾಗುವುದು. ಯಾವ ಪಂದ್ಯವನ್ನೂ ಬೇರೆಡೆ ನಡೆಸುವುದು ನಮ್ಮ ಉದ್ದೇಶವಲ್ಲ’ ಎಂಬುದಾಗಿ ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ ತಿಳಿಸಿದ್ದಾರೆ.

ಬಿಸಿಸಿಐ ಇನ್ನೂ ಐಪಿಎಲ್‌ ವೇಳಾಪಟ್ಟಿ ಪ್ರಕಟಿಸಿಲ್ಲ. 2019ರ ಸಾರ್ವತ್ರಿಕ ಚುನಾವಣೆಯ ದಿನಾಂಕ ಪ್ರಕಟವಾದ ಬಳಿಕ ಐಪಿಎಲ್‌ ವೇಳಾಪಟ್ಟಿ ಪ್ರಕಟಿಸಲು ನಿರ್ಧರಿಸಿದೆ. ಎಪ್ರಿಲ್‌ ಅಥವಾ ಮೇ ಆರಂಭದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಮೇ 30ರಿಂದ ಜು. 14ರ ತನಕ ಇಂಗ್ಲೆಂಡ್‌ನ‌ಲ್ಲಿ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ನಡೆಯಲಿರುವುದರಿಂದ ಮಾರ್ಚ್‌ ಕೊನೆಯ ವಾರದಿಂದ ಮೇ ತಿಂಗಳ ಎರಡನೇ ವಾರದೊಳಗೆ ಐಪಿಎಲ್‌ ಪಂದ್ಯಾವಳಿಯನ್ನು ಮುಗಿಸಬೇಕಾದ ಒತ್ತಡ ಬಿಸಿಸಿಐ ಮೇಲಿದೆ. 2009ರ ಲೋಕಸಭಾ ಚುನಾವಣೆಯ ವೇಳೆ ಐಪಿಎಲ್‌ ಕೂಟವನ್ನು ದಕ್ಷಿಣ ಆಫ್ರಿಕಾಕ್ಕೆ ವರ್ಗಾಯಿಸಿದ್ದನ್ನು ನೆನಪಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next