Advertisement
ಬಲಿಷ್ಠ ತಂಡಗಳ ನಡುವಣ ಈ ಮುಖಾಮುಖಿ ಐಪಿಎಲ್ ಅಭಿಮಾನಿಗಳಿಗೆ ರಸದೌತಣ ನೀಡುವುದರಲ್ಲಿ ಸಂಶಯವಿಲ್ಲ. ಇತ್ತೀಚಿನ ಹೆಡ್ ಟು ಹೆಡ್ ಇತಿಹಾಸ ಕೂಡ ಮುಂಬೈ ಪರವಾಗಿದೆ. ರೋಹಿತ್ ಶರ್ಮ ಮುನ್ನಡೆಯ ತವರಿನ ತಂಡ ಚೆನ್ನೈ ವಿರುದ್ಧ ಕಳೆದ 5 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಜಯಿಸಿದೆ. ಒಟ್ಟಾರೆಯಾಗಿ ಅಪ್ರಚಲಿತ ಚಾಂಪಿಯನ್ಸ್ ಟಿ20 ಮುಖಾಮುಖಿ ಸೇರಿದಂತೆ ಮುಂಬೈ ತಂಡ ಚೆನ್ನೈ ವಿರುದ್ಧ 14-12 ಗೆಲುವಿನ ದಾಖಲೆ ಹೊಂದಿದೆ. ಹೀಗಾಗಿ ಮುಂಬೈಗೆ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಅವಕಾಶ ಹೆಚ್ಚಿದೆ. ಇದರೊಂದಿಗೆ ಚೆನ್ನೈ ತಂಡದ ಪ್ರದರ್ಶನದಲ್ಲಿ ಯಾವುದೇ ಅನುಮಾನ ಬೇಡ. ಎಲ್ಲ ವಿಭಾಗಗಳಲ್ಲೂ ಸಂಘಟಿತ ಪ್ರದರ್ಶನ ನೀಡುತ್ತಿರುವ ಚೆನ್ನೈ ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈಗಿಂತ ಒಂದು ಹೆಜ್ಜೆ ಮುಂದಿದೆ.
ಸೂಪರ್ ಕಿಂಗ್ಸ್ ತಂಡ ಬ್ಯಾಟಿಂಗ್ ಆಳ ಹಾಗೂ ಸ್ಪಿನ್ ಬೌಲಿಂಗ್‌ನಲ್ಲಿ ಬಲಿಷ್ಠವಾಗಿ ದ್ದರೆ ಆಕ್ರಮಣಕಾರಿ ಬೌಲಿಂಗ್‌ನಲ್ಲಿ ಮುಂಬೈ ಬಲಿಷ್ಠವಾಗಿದೆ. ಚೆನ್ನೈ ತಂಡದ ಸಂಘಟಿತ ಪ್ರದರ್ಶನ
ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಚೆನ್ನೈ ಬಲಿಷ್ಠವಾಗಿದೆ. ಬ್ಯಾಟಿಂಗ್ ನಲ್ಲಿ ಧೋನಿ, ವಾಟ್ಸನ್, ರೈನಾ, ಕೇದರ್ ಜಾದವ್ ಉತ್ತಮ ಫಾರ್ಮ್ ಕಂಡುಕೊಂಡಿ ದ್ದಾರೆ. ಸ್ಪಿನ್ ವಿಭಾಗದಲ್ಲಿ ಹರ್ಭಜನ್, ಜಡೇಜ ಮತ್ತು ಇಮ್ರಾನ್ ತಾಹಿರ್ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಾಗಿದ್ದಾರೆ. ಸಂಕಷ್ಟ ಬಂದಾಗ ಒಬ್ಬ ಆಟಗಾರ ತಂಡದ ಕೈ ಹಿಡಿಯುತ್ತಾರೆ ಎಂಬುದಕ್ಕೆ ರಾಜಸ್ಥಾನ ವಿರುದ್ಧದ ಪಂದ್ಯವೇ ಸಾಕ್ಷಿ. ಹೀಗಾಗಿ 3 ಪಂದ್ಯಗಳನ್ನು ಗೆದ್ದಿರುವ ಚೆನ್ನೈನಲ್ಲಿ ಆತ್ಮವಿಶ್ವಾಸ ಹೆಚ್ಚಿದೆ.
Related Articles
ಮುಂಬೈ ಸ್ಟಾರ್ ಆಟಗಾರರನ್ನು ಒಳಗೊಂಡಿ ದ್ದರೂ ಕಳೆದ 3 ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ . ಆರಂಭಿಕರಾದ ರೋಹಿತ್-ಕ್ವಿಂಟನ್ ಡಿ ಕಾಕ್ ಅವರನ್ನೇ ತಂಡ ನೆಚ್ಚಿಕೊಂಡಿದೆ. ಉಳಿದ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ನೆರವಾಗುವ ಅಗತ್ಯವಿದೆ. ಬೌಲಿಂಗ್‌ನಲ್ಲಿ ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ ಅವರ ಮೇಲೆ ಅವಲಂಬಿತವಾಗಿದೆ. ಪೊಲಾರ್ಡ್, ಬೆನ್ ಕಟ್ಟಿಂಗ್, ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ಸಿಡಿದರೆ ಮುಂಬೈಗೆ ಗೆಲುವು ಖಚಿತ. ಸ್ವಿನ್ ವಿಭಾಗದಲ್ಲಿ ಮಾತ್ರ ಮುಂಬೈ ಹಿಂದಿದೆ.
Advertisement