Advertisement
ಈ ವರ್ಷವೂ ಐಪಿಎಲ್ ಉದ್ಘಾ ಟನಾ ಸಮಾರಂಭ ನಡೆದಿ ರಲಿಲ್ಲ. ಆಗಷ್ಟೇ ಪುಲ್ವಾಮಾದಲ್ಲಿ ಭಾರತ ಯೋಧರ ಮೇಲೆ ಉಗ್ರರು ಭೀಕರ ದಾಳಿ ನಡೆಸಿದ್ದರು. ಆದ್ದರಿಂದ ಐಪಿಎಲ್ ಉದ್ಘಾಟನೆಯನ್ನು ರದ್ದು ಮಾಡಿ, ಇದರಿಂದ ಉಳಿದ 20 ಕೋ.ರೂ.ಗೂ ಹೆಚ್ಚು ಮೊತ್ತವನ್ನು ಬಿಸಿಸಿಐ ಕೇಂದ್ರ ಪರಿಹಾರ ನಿಧಿಗೆ ನೀಡಿತ್ತು.
ಐಪಿಎಲ್ ಉದ್ಘಾಟನಾ ಸಮಾ ರಂಭದಲ್ಲಿ ಈಗಾಗಲೇ ಪಾಪ್ ಗಾಯಕರಾದ ಕೇಟಿ ಪೆರ್ರಿ, ಅಕಾನ್, ಪಿಟ್‌ಬುಲ್‌ರಂಥವರು ಕಾರ್ಯಕ್ರಮ ನೀಡಿದ್ದಾರೆ. ಶಾರುಖ್ ಖಾನ್, ಶಾಹಿದ್ ಕಪೂರ್, ರಣಬೀರ್ ಕಪೂರ್, ಕತ್ರಿನಾ ಕೈಫ್, ಆಲಿಯಾ ಭಟ್ ಕೂಡ ವೇದಿಕೆ ಏರಿದ್ದಾರೆ. ಜತೆಗೆ ಝಗಮಗಿಸುವ ಲೇಸರ್ ಶೋಗಳನ್ನೂ ನಡೆಸಲಾಗುತ್ತಿತ್ತು. ಇಷ್ಟೆಲ್ಲ ಮಾಡಿದರೂ, ವೀಕ್ಷಕರ ಸ್ಪಂದನೆಯೇನೂ ಹೇಳಿಕೊಳ್ಳು ವಂತಿ ರಲಿಲ್ಲ. ಆದರೂ ಪ್ರತೀ ವರ್ಷ 30 ಕೋಟಿ ರೂ. ಖರ್ಚಾಗುತ್ತಿತ್ತು. ಈ ರೀತಿ ವ್ಯರ್ಥವಾಗುವ ಹಣ ಉಳಿಸಬ ಹುದೆನ್ನುವುದು ಬಿಸಿಸಿಐ ಲೆಕ್ಕಾಚಾರ.