Advertisement

ಐಪಿಎಲ್‌ ಪಂದ್ಯಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳ: ಬಿಸಿಸಿಐ ಯೋಜನೆ 

11:07 PM Jun 09, 2022 | Team Udayavani |

ಹೊಸದಿಲ್ಲಿ: ಮುಂಬರುವ ಐಪಿಎಲ್‌ ಋತುಗಳಲ್ಲಿ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ಬಿಸಿಸಿಐ ಯೋಜನೆಯೊಂದನ್ನು ರೂಪಿಸಿದೆ. ಐಪಿಎಲ್‌ ನೇರ ಪ್ರಸಾರದ ಮಾಧ್ಯಮ ಹಕ್ಕುಗಳ ಹರಾಜು ನಡೆಯಲಿದ್ದು, ಬಿಡ್‌ದಾರರನ್ನು ಆಕರ್ಷಿಸಲು ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸುವುದು ಬಿಸಿಸಿಐ ಯೋಜನೆಯಾಗಿದೆ.

Advertisement

ಇದು 2023-27ರ ನಡುವಿನ ಯೋಜನೆ. ಆಗ ಪಂದ್ಯಗಳ ಸಂಖ್ಯೆ 74ರಿಂದ 84, ಬಳಿಕ 94ರ ತನಕ ಏರುವ ಸಾಧ್ಯತೆ ಇದೆ. ಈ ಬಾರಿ 2 ಹೊಸ ತಂಡಗಳ ಸೇರ್ಪಡೆಯಿಂದಾಗಿ ಪಂದ್ಯಗಳ ಸಂಖ್ಯೆ 74ಕ್ಕೆ ಏರಿತ್ತು. ಮುಂದಿನೆರಡು ಋತುಗಳಲ್ಲಿ ಇದೇ ಮಾದರಿ ಮುಂದುವರಿಯಲಿದೆ. ಆದರೆ 2025 ಹಾಗೂ 2026ರಲ್ಲಿ 84 ಪಂದ್ಯ, 2027ರಲ್ಲಿ 94 ಪಂದ್ಯ ಗಳನ್ನು ಆಡಿಸುವುದು ಬಿಸಿಸಿಐ ಯೋಜನೆ.

ಈ ಬಾರಿ ಎರಡು ಗ್ರೂಪ್‌ಗ್ಳ ಮಾದರಿ ಯಲ್ಲಿ ಪಂದ್ಯಾವಳಿ ನಡೆದಿತ್ತು (5 ಪ್ಲಸ್‌ 5). ಆಯಾ ಗ್ರೂಪ್‌ನ ತಂಡಗಳ ವಿರುದ್ಧ ತಲಾ 2 ಪಂದ್ಯ, ಇನ್ನೊಂದು ಗ್ರೂಪ್‌ನ 4 ತಂಡಗಳ ವಿರುದ್ಧ ತಲಾ ಒಂದು ಪಂದ್ಯ ಹಾಗೂ ಒಂದು ತಂಡದ ವಿರುದ್ಧ 2 ಪಂದ್ಯಗಳನ್ನು ಆಡಿಸಲಾಗಿತ್ತು. ಅಲ್ಲಿಗೆ ತಂಡವೊಂದು ಲೀಗ್‌ ಹಂತದಲ್ಲಿ 14 ಪಂದ್ಯಗಳನ್ನಾಡಿತ್ತು.

ಮುಂದಿನೆರಡು ವರ್ಷ ಇದೇ ಮಾದರಿ ಇರಲಿದೆ. 2025ರಲ್ಲೂ ಇದೇ ಮಾದರಿ, ಆದರೆ ಸಣ್ಣದೊಂದು ಬದಲಾವಣೆ ಮಾಡಲಾಗುವುದು. ಮತ್ತೂಂದು ಗ್ರೂಪ್‌ನ 3 ತಂಡಗಳ ವಿರುದ್ಧ ತಲಾ ಒಂದು ಪಂದ್ಯ, 2 ತಂಡಗಳ ವಿರುದ್ಧ ತಲಾ 2 ಪಂದ್ಯ ಆಡಬೇಕಾಗುತ್ತದೆ. ಆಗ ಲೀಗ್‌ ಹಂತದಲ್ಲಿ ಪ್ರತಿಯೊಂದು ತಂಡಕ್ಕೆ 15 ಪಂದ್ಯ ಲಭಿಸುತ್ತದೆ. ಕೂಟದ ಒಟ್ಟು ಪಂದ್ಯಗಳ ಸಂಖ್ಯೆ 74ರಿಂದ 84ಕ್ಕೆ ಏರಲಿದೆ. ಪ್ಲೇ ಆಫ್ ಮಾದರಿಯಲ್ಲಿ ಯಾವುದೇ ಬದಲಾವಣೆ ಇಲ್ಲ.

2027ರಲ್ಲಿ 90 ಲೀಗ್‌ ಪಂದ್ಯ :

Advertisement

2027ರಲ್ಲಿ ಎರಡು ಗ್ರೂಪ್‌ಗಳ ಮಾದರಿ ಇರುವುದಿಲ್ಲ. ಬದಲಾಗಿ ರೌಂಡ್‌ ರಾಬಿನ್‌ ಲೀಗ್‌ ಇರುತ್ತದೆ. ಇಲ್ಲಿ ಪ್ರತಿಯೊಂದು ತಂಡ ಉಳಿದ 9 ತಂಡಗಳೊಂದಿಗೆ ತಲಾ 2 ಪಂದ್ಯಗಳನ್ನು ಆಡಬೇಕು. ಆಗ ಲೀಗ್‌ ಪಂದ್ಯಗಳ ಸಂಖ್ಯೆ 90ಕ್ಕೆ ಏರುತ್ತದೆ. ಇಲ್ಲಿಯೂ ಪ್ಲೇ ಆಫ್ ಮಾದರಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಈ ರೀತಿ ಹಂತ ಹಂತವಾಗಿ ಮುಂದಿನೈದು ವರ್ಷಗಳ ಪಂದ್ಯಗಳ ಸಂಖ್ಯೆ 370ರ ಬದಲು 410ಕ್ಕೆ ಏರಲಿದೆ. ನೇರ ಪ್ರಸಾರದ ಹಕ್ಕುದಾರರು ಇದರಿಂದ ಹೆಚ್ಚಿನ ಲಾಭ ಪಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next