ಹೊಸದಿಲ್ಲಿ: ಕೇವಲ ಐಪಿಎಲ್ ಮಾಧ್ಯಮ ಹಕ್ಕುಗಳ ಮಾರಾ ಟದಿಂದ ಮುಂದಿನ ಐದು ವರ್ಷಗಳ ಅವಧಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಟ್ಟಾರೆ 48,390 ಕೋಟಿ ರೂ. ಸಂಪಾದಿಸಲಿದೆ! ಇಲ್ಲಿಗೆ 2023ರಿಂದ 2027ರ ವರೆಗಿನ ಮಾಧ್ಯಮ ಹಕ್ಕುಗಳ ಮಾರಾಟ ಮುಗಿದಿದೆ. ಈಗ ಐಪಿಎಲ್ ಅಧಿಕೃತವಾಗಿ ಜಾಗತಿಕವಾಗಿ ಶ್ರೀಮಂತ ಕ್ರೀಡಾ ಲೀಗ್‌ಗಳಲ್ಲಿ 2ನೇ ಸ್ಥಾನ ಪಡೆದಿದೆ. ಅಮೆರಿಕದ ಎನ್‌ಎಫ್ಎಲ್ (ನ್ಯಾಶನಲ್ ಫುಟ್‌ಬಾಲ್ ಲೀಗ್) ಅಗ್ರಸ್ಥಾನದಲ್ಲಿದೆ.
ಸೋಮವಾರ ಐಪಿಎಲ್‌ನ ಭಾರತದ ಟೀವಿ ಮತ್ತು ಡಿಜಿಟಲ್ ನೇರಪ್ರಸಾರದ ಹಕ್ಕುಗಳು ಮಾರಾಟವಾಗಿದ್ದವು. ಮಂಗ ಳವಾರ ಪ್ಯಾಕೇಜ್ “ಸಿ’ ಅಂದರೆ ನಾನ್ ಎಕ್ಸ್‌ಕ್ಲೂಸಿವ್ ಡಿಜಿಟಲ್ ಹಕ್ಕುಗಳು, ಪ್ಯಾಕೇಜ್ “ಡಿ’ (ವಿದೇಶ ದಲ್ಲಿ ಟೀವಿ ಮತ್ತು ಡಿಜಿಟಲ್ ಪ್ರಸಾರ) ಹಕ್ಕುಗಳ ಮಾರಾಟವೂ ಮುಗಿಯಿತು. 18 ಮುಖ್ಯ ಪಂದ್ಯಗಳ ನಾನ್ ಎಕ್ಸ್‌ಕ್ಲೂಸಿವ್ ಹಕ್ಕುಗಳನ್ನು ವಯಾ ಕಾಮ್18 ಪಡೆಯಿತು. ಇದರ ಮೌಲ್ಯ 2,991.6 ಕೋಟಿ ರೂ. ಇನ್ನು ವಿದೇಶೀ ಟೀವಿ, ಡಿಜಿಟಲ್ ಹಕ್ಕುಗ ಳನ್ನು ವಯಾಕಾಮ್ 18, ಟೈಮ್ಸ್ ಇಂಟರ್ನೆಟ್ 1,300 ಕೋಟಿ ರೂ.ಗಳಿಗೆ ಪಡೆದುಕೊಂಡವು.
ಅಲ್ಲಿಗೆ ನೇರ ಪ್ರಸಾರದ ಹಕ್ಕುಗಳಿಂದ ಬಿಸಿಸಿಐ ಒಟ್ಟು ಗಳಿಸಿದ ಮೊತ್ತ 48,390 ಕೋ. ರೂ.!ಒಟ್ಟು 410 ಪಂದ್ಯಗಳು ನಡೆ ಯುತ್ತವೆ. ಒಂದು ಪಂದ್ಯಕ್ಕೆ ಬಿಸಿಸಿಐಗೆ ಸಿಗುವುದು 114 ಕೋಟಿ ರೂ. ಎನ್‌ಎಫ್ಎಲ್ ಒಂದು ಪಂದ್ಯಕ್ಕೆ 132.60 ಕೋಟಿ ರೂ. ಗಳಿಸುತ್ತದೆ. ಈ ಲೆಕ್ಕಾಚಾರದಲ್ಲಿ ಐಪಿಎಲ್ ವಿಶ್ವದ 2ನೇ ಶ್ರೀಮಂತ ಕ್ರೀಡಾ ಲೀಗ್! ಇನ್ನು ಕ್ರಿಕೆಟ್‌ನಲ್ಲಂತೂ ಐಪಿಎಲ್‌ಗೆ ಐಸಿಸಿ ಕೂಡ ಪೈಪೋಟಿ ನೀಡಲು ಸಾಧ್ಯವಿಲ್ಲ.
410 ಪಂದ್ಯ: ಮುಂದಿನ 5 ವರ್ಷ ನಡೆ ಯುವ ಒಟ್ಟು ಪಂದ್ಯಗಳ ಸಂಖ್ಯೆ.
23,575 ಕೋ.ರೂ.:ಭಾರತದಲ್ಲಿನ ಟೀವಿ ನೇರಪ್ರಸಾರಕ್ಕೆ ಡಿಸ್ನಿ ಸ್ಟಾರ್ ನೀಡುವ ಒಟ್ಟು ಮೊತ್ತ. ಪ್ರತೀ ಪಂದ್ಯಕ್ಕೆ ನೀಡುವ ಮೊತ್ತ 57.5 ಕೋಟಿ ರೂ.
20,500 ಕೋ.ರೂ.:ಭಾರತದಲ್ಲಿನ ಡಿಜಿಟಲ್ ನೇರಪ್ರಸಾರಕ್ಕೆ ವಯಾಕಾಮ್18 ನೀಡುವ ಒಟ್ಟು ಮೊತ್ತ. ಪ್ರತೀ ಪಂದ್ಯಕ್ಕೆ ನೀಡುವ ಹಣ 50 ಕೋಟಿ ರೂ.
2,991 ಕೋ.ರೂ.: ನಾನ್ ಎಕ್ಸ್‌ಕ್ಲೂಸಿವ್ ಪಂದ್ಯಗಳ ಪ್ರಸಾರಕ್ಕೆ ವಯಾಕಾಮ್18 ನೀಡುವ ಮೊತ್ತ. ಪ್ರತೀ ಪಂದ್ಯಕ್ಕೆ ನೀಡುವ ಹಣ 33.24 ಕೋಟಿ ರೂ.
1,300 ಕೋ.ರೂ.:ವಿದೇಶದಲ್ಲಿ ಟೀವಿ ಮತ್ತು ಡಿಜಿಟಲ್ ನೇರಪ್ರಸಾರಕ್ಕೆ ವಯಾಕಾಮ್18, ಟೈಮ್ಸ್ ಇಂಟರ್ನೆಟ್ ನೀಡಲಿರುವ ಮೊತ್ತ. ಪ್ರತೀಪಂದ್ಯಕ್ಕೆ ನೀಡುವ ಮೊತ್ತ3 ಕೋಟಿ ರೂ.