Advertisement

IPL 2024; ನಾಯಕನಿಗೆ ನಿಷ್ಠೆ, ಆಟಗಾರರ ಗೌರವ ಮುಖ್ಯ: ಧೋನಿ ಮಾತು

10:18 AM Feb 10, 2024 | Team Udayavani |

ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ವಿಶ್ವ ಕ್ರಿಕೆಟ್ ನಲ್ಲಿ ತನ್ನ ನಾಯಕತ್ವದ ಗುಣಗಳಿಂದ ಚಿರಪರಿಚಿತ. ಟೀಂ ಇಂಡಿಯಾಗೆ ಎರಡು ವಿಶ್ವಕಪ್ ಮತ್ತು ಒಂದು ಚಾಂಪಿಯನ್ಸ್ ಟ್ರೋಫಿ ಗೆದ್ದ ನಾಯಕ ಧೋನಿ, ಖಾಸಗಿ ಕಾರ್ಯಕ್ರಮವೊಂದರಲ್ಲಿ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ.

Advertisement

“ನಿಷ್ಠೆಗೆ ಗೌರವದೊಂದಿಗೆ ಬಹಳಷ್ಟು ಸಂಬಂಧವಿದೆ. ನೀವು ಡ್ರೆಸ್ಸಿಂಗ್ ಕೋಣೆಯ ಬಗ್ಗೆ ಮಾತನಾಡುವಾಗ, ಸಹಾಯಕ ಸಿಬ್ಬಂದಿ ಅಥವಾ ಆಟಗಾರರು ನಿಮ್ಮನ್ನು ಗೌರವಿಸದ ಹೊರತು, ಆ ನಿಷ್ಠೆಯನ್ನು ಪಡೆಯುವುದು ಕಷ್ಟ,” ಎಂದು ಧೋನಿ ಹೇಳಿದ್ದಾರೆ.

“ನೀವು ಏನನ್ನು ಮಾಡುತ್ತೀರಿ ಅದು ಪ್ರಾಮುಖ್ಯತೆ ಪಡೆಯುತ್ತದೆಯೇ ಹೊರತು, ಏನನನ್ನು ಹೇಳುತ್ತೀರಿ ಅಲ್ಲ. ನೀವು ನಿಜವಾಗಿ ಏನನ್ನೂ ಮಾತನಾಡದೇ ಇರಬಹುದು ಆದರೆ ನಿಮ್ಮ ನಡವಳಿಕೆಯು ಆ ಗೌರವವನ್ನು ಗಳಿಸಬಹುದು.” ಎಂದಿದ್ದಾರೆ.

ಒಬ್ಬ ನಾಯಕನಿಗೆ ಗೌರವವು ಮಾತಿಗಿಂತ ಅವನ ಕಾರ್ಯಗಳಿಂದ ಬರುತ್ತದೆ ಎಂದು ಧೋನಿ ಹೇಳಿದರು.

“ನಾಯಕನಾಗಿ ಗೌರವವನ್ನು ಗಳಿಸುವುದು ಮುಖ್ಯ ಎಂದು ನಾನು ಯಾವಾಗಲೂ ಭಾವಿಸುತ್ತೇನೆ. ಅದು ಕುರ್ಚಿ ಅಥವಾ ಸ್ಥಾನದೊಂದಿಗೆ ಬರುವುದಿಲ್ಲ. ಅದು ನಿಮ್ಮ ನಡವಳಿಕೆಯಿಂದ ಬರುತ್ತದೆ. ಜನರು ಕೆಲವೊಮ್ಮೆ ಅಸುರಕ್ಷಿತರಾಗಿರುತ್ತಾರೆ. ಕೆಲವೊಮ್ಮೆ, ತಂಡವು ನಿಮ್ಮನ್ನು ನಂಬಿದ್ದರೂ ಸಹ, ನೀವು ನಿಜವಾಗಿ ನಿಮ್ಮನ್ನು ನಂಬದ ಮೊದಲ ವ್ಯಕ್ತಿಯಾಗಿರುತ್ತೀರಿ.  ಇದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಗೌರವವನ್ನು ಆಜ್ಞಾಪಿಸಲು ಪ್ರಯತ್ನಿಸಬೇಡಿ, ಅದನ್ನು ಗಳಿಸಿ. ಒಮ್ಮೆ ನೀವು ಆ ನಿಷ್ಠೆಯನ್ನು ಹೊಂದಿದ್ದರೆ ನಂತರ ಆಟದ ಮೇಲೂ ಪ್ರಭಾವ ಬೀರುತ್ತದೆ ” ಎಂದು ಅವರು ಹೇಳಿದರು.

Advertisement

“ಕೆಲವರು ಒತ್ತಡವನ್ನು ಆನಂದಿಸುತ್ತಾರೆ, ಮತ್ತೆ ಕೆಲವರು ಒತ್ತಡದಿಂದ ಕಷ್ಟ ಪಡುತ್ತಾರೆ. ನಾಯಕನಾಗಿ ಪ್ರತಿಯೊಬ್ಬನ ಸಾಮರ್ಥ್ಯ ಮತ್ತು ಬಲಹೀನತೆಯನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಈ ವಿಚಾರ ನಿಮಗೆ ಅರ್ಥವಾದರೆ ನೀವು ಆಟಗಾರನ ಅರವಿಗೆ ಬರದಂತೆ ಆತನ ಬಲಹೀನತೆಯ ಬಗ್ಗೆ ಕೆಲಸ ಮಾಡುತ್ತೀರಿ. ಇದು ಆಟಗಾರನಿಗೆ ಆತ್ಮವಶ್ವಾಸ ತುಂಬುತ್ತದೆ, ಅಲ್ಲದೆ ಆತನ ತನ್ನ ಬಗ್ಗೆಯೇ ಸಂದೇಹ ಪಡುವುದನ್ನು ತಡೆಯುತ್ತದೆ” ಎಂದು ಧೋನಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next