Advertisement

ಐಪಿಎಲ್‌ಗೆ ಪೂರ್ಣ ಲಭ್ಯ: ವದಂತಿಗಳಿಗೆ ಕ್ಯಾಮೆರಾನ್‌ ಗ್ರೀನ್‌ ತೆರೆ

11:00 PM Jan 05, 2023 | Team Udayavani |

ಸಿಡ್ನಿ: ಆಸೀಸ್‌ ಆಲ್‌ರೌಂಡರ್‌ ಕ್ಯಾಮೆರಾನ್‌ ಗ್ರೀನ್‌ ಐಪಿಎಲ್‌ನಲ್ಲಿ ಬೌಲಿಂಗ್‌ ಮಾಡಲು ಸಾಧ್ಯವಿಲ್ಲ ಎಂಬ ವದಂತಿಗಳು ಹಬ್ಬಿವೆ. ಅದನ್ನು ಸ್ವತಃ ಗ್ರೀನ್‌ ನಿರಾಕರಿಸಿದ್ದಾರೆ.

Advertisement

ನಾನು ಮುಂಬೈ ಇಂಡಿಯನ್ಸ್‌ ತಂಡದ ಪರ ಬೌಲಿಂಗ್‌, ಬ್ಯಾಟಿಂಗ್‌ ಮಾಡಲು ಪೂರ್ಣ ಸಿದ್ಧವಿದ್ದೇನೆ. ಇಂತಹ ವದಂತಿಗಳು ಎಲ್ಲಿಂದ, ಹೇಗೆ ಹಬ್ಬಿದವು ಎಂದು ಗೊತ್ತಿಲ್ಲ ಎಂದು ಗ್ರೀನ್‌ ಸ್ಪಷ್ಟಪಡಿಸಿದ್ದಾರೆ.

ಗ್ರೀನ್‌ ಅವರು ಈ ಬಾರಿಯ ಹರಾಜಿನಲ್ಲಿ ಐಪಿಎಲ್‌ ಇತಿಹಾಸದಲ್ಲೇ 2ನೇ ಗರಿಷ್ಠ 17.5 ಕೋಟಿ ರೂ.ಗಳಿಗೆ ಮಾರಾಟವಾಗಿದ್ದಾರೆ. ಇತ್ತೀಚೆಗೆ ಪ್ರವಾಸಿ ದ.ಆಫ್ರಿಕಾ ವಿರುದ್ಧ ನಡೆದ 2ನೇ ಟೆಸ್ಟ್‌ನಲ್ಲಿ ಗ್ರೀನ್‌ ಕೈಬೆರಳಿಗೆ ಹೊಡೆತ ತಿಂದಿದ್ದರು. ಇದೇ ಹಿನ್ನೆಲೆಯಲ್ಲಿ ಅವರು ಆಡುವುದಿಲ್ಲ, ಬೌಲಿಂಗ್‌ ಮಾಡುವುದಿಲ್ಲ ಎಂದೆಲ್ಲ ವದಂತಿಗಳು ಹಬ್ಬಿದ್ದವು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next