Advertisement

ಸೋಲಿನ ಸುಳಿಯಲ್ಲಿರುವ SRH ತಂಡಕ್ಕೆ ಬಿಗ್‌ ಶಾಕ್:‌ IPLನಿಂದ ಹೊರಬಿದ್ದ ಖ್ಯಾತ ಆಲ್‌ ರೌಂಡರ್‌

12:26 PM Apr 27, 2023 | Team Udayavani |

ನವದೆಹಲಿ: ಈ ಬಾರಿ ಐಪಿಎಲ್‌ ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸ್ಟಾರ್‌ ಆಲ್‌ ರೌಂಡರ್‌ ಆಟಗಾರರೊಬ್ಬರ ಗಾಯದ ಸಮಸ್ಯೆ ಇದೀಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Advertisement

ವಾಷಿಂಗ್ಟನ್ ಸುಂದರ್ ಅವರು ಗಾಯದ ಸಮಸ್ಯೆಯಿಂದ ಐಪಿಎಲ್‌ ಉಳಿದ ಪಂದ್ಯದಿಂದ ಹೊರ ಬಿದ್ದಿದ್ದಾರೆ.

ಆರಂಭಿಕ ಪಂದ್ಯಗಳಲ್ಲಿ ಅಷ್ಟಾಗಿ ಕಮಾಲ್‌ ಮಾಡದ ಸುಂದರ್‌, ಕಳೆದ ಡೆಲ್ಲಿ ಪಂದ್ಯದಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ನಿಂದ ಮೋಡಿ ಮಾಡಿದ್ದರು. ಇನ್ನೇನು ತಮ್ಮ ಲಯ ಕಂಡುಕೊಂಡರು ಎನ್ನುವಾಗಲೇ ಅವರಿಗೆ (Hamstring injury) ಮಂಡಿರಜ್ಜು ಗಾಯವಾಗಿದ್ದು,ಇದರಿಂದ ಅವರು ಐಪಿಎಲ್‌ ನ ಉಳಿದ ಭಾಗಕ್ಕೆ ಅವರು ಲಭ್ಯವಾಗುವುದಿಲ್ಲ ಎಂದು ಸನ್‌ರೈಸರ್ಸ್ ಹೈದರಾಬಾದ್ ತಂಡ ಅವರ ಗಾಯದ ಬಗ್ಗೆ ಅಪ್ಡೇಟ್‌ ನೀಡಿದೆ.

ಈ ಬಾರಿ ಅವರು 7 ಪಂದ್ಯವನ್ನಾಡಿದ್ದು, 60 ರನ್‌ ಗಳಿಸಿ 3 ವಿಕೆಟ್‌ ಗಳನ್ನು ಪಡೆದಿದ್ದರು. ಸಿಎಸ್‌ ಕೆ ವಿರುದ್ಧದ ಸೋಲಿನ ಬಳಿಕ ಹೈದರಾಬಾದ್‌ ತಂಡದ ಮುಖ್ಯ ತರಬೇತುದಾರ ಬ್ರಿಯಾನ್ ಲಾರಾ ವಾಷಿಂಗ್ಟನ್‌ ನಮ್ಮ ತಂಡದ ಮುಖ್ಯ ಆಲ್‌ ರೌಂಡರ್‌ ಎಂದು ಹೇಳಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next