ಮುಂಬೈ: ಭಾರತೀಯ ಕ್ರಿಕೆಟ್ ನ ಇಬ್ಬರು ಸ್ಟಾರ್ ಆಟಗಾರರ ಫೈಟ್ ಗೆ ಇಂದು ಐಪಿಎಲ್ ಸಜ್ಜಾಗುತ್ತಿದೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಇಂದು ವಾಂಖೆಡೆ ಮೈದಾನದಲ್ಲಿ ಎದುರು ಬದುರಾಗುತ್ತಿದ್ದಾರೆ.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದೆ. ಆರ್ಚರ್ ಬದಲು ತಂಡ ಸೇರಿರುವ ಕ್ರಿಸ್ ಜೋರ್ಡಾನ್ ಇಂದು ಮುಂಬೈ ಪರ ಪದಾರ್ಪಣೆ ಮಾಡುತ್ತಿದ್ದಾರೆ. ಆರ್ ಸಿಬಿ ತಂಡದಲ್ಲಿ ಕರ್ಣ್ ಶರ್ಮಾ ಬದಲು ವಿಜಯ್ ಕುಮಾರ್ ವೈಶಾಖ್ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.
ಎರಡೂ ತಂಡಗಳು 10 ಪಂದ್ಯಗಳಲ್ಲಿ ಐದನ್ನು ಗೆದ್ದು ಐದರಲ್ಲಿ ಮುಗ್ಗರಿಸಿವೆ. ತಲಾ 10 ಅಂಕಗಳನ್ನು ಹೊಂದಿವೆ. ರನ್ ರೇಟ್ ನಲ್ಲಿ ಆರ್ ಸಿಬಿ ತುಸು ಮೇಲಿದೆ. ಹೀಗಾಗಿ ಮಂಗಳವಾರದ ಮೇಲಾಟದಲ್ಲಿ ಗೆದ್ದವರು ಸುರಕ್ಷಿತ ವಲಯವನ್ನು ತಲುಪಲಿದ್ದಾರೆ ಎಂಬುದೊಂದು ಲೆಕ್ಕಾಚಾರ.
ಆರ್ ಸಿಬಿ-ಮುಂಬೈ ನಡುವಿನ ಮೊದಲ ಸುತ್ತಿನ ಪಂದ್ಯ ಬೆಂಗಳೂರಿನಲ್ಲಿ ನಡೆದಿತ್ತು. ಇದು ಪ್ರಸಕ್ತ ಋತುವಿನಲ್ಲಿ ಇತ್ತಂಡಗಳ ನಡುವಿನ ಮೊದಲ ಪಂದ್ಯವೂ ಆಗಿತ್ತು. ವಿರಾಟ್ ಕೊಹ್ಲಿ-ಫಾಫ್ ಡು ಪ್ಲೆಸಿಸ್ ಜೋಡಿಯ 148 ರನ್ ಜತೆಯಾಟದ ನೆರವಿನಿಂದ ಆರ್‌ಸಿಬಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು.
Related Articles
ತಂಡಗಳು:
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾ), ಇಶಾನ್ ಕಿಶನ್ (ವಿ.ಕೀ), ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ನೆಹಾಲ್ ವಧೇರಾ, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಕುಮಾರ್ ಕಾರ್ತಿಕೇಯ, ಜೇಸನ್ ಬೆಹ್ರೆಂಡಾರ್ಫ್
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿ.ಕೀ), ವನಿಂದು ಹಸರಂಗ, ಹರ್ಷಲ್ ಪಟೇಲ್, ವಿಜಯ್‌ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್ ವುಡ್