Advertisement

IPL 2023: ರಾಹುಲ್‌ ಬದಲು ಕರುಣ್‌ ನಾಯರ್‌

01:22 AM May 07, 2023 | Team Udayavani |

ಲಕ್ನೋ: ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ ಅನುಭವಿ ಬ್ಯಾಟರ್‌ ಕರುಣ್‌ ನಾಯರ್‌ ಅವರನ್ನು ಸೇರಿಸಿಕೊಳ್ಳಲಾಗಿದೆ. ಇದರೊಂದಿಗೆ ಕನ್ನಡಿಗ ಕೆ.ಎಲ್‌. ರಾಹುಲ್‌ ಅವರಿಂದ ತೆರವಾದ ಸ್ಥಾನಕ್ಕೆ ಮತ್ತೋರ್ವ ಕನ್ನಡಿಗನೇ ಆಯ್ಕೆಯಾದಂತಾಯಿತು.

Advertisement

ಕಳೆದ ಡಿಸೆಂಬರ್‌ನಲ್ಲಿ ನಡೆದ ಮಿನಿ ಹರಾಜಿನಲ್ಲಿ ಕರುಣ್‌ ನಾಯರ್‌ ಮಾರಾಟವಾಗದೆ ಉಳಿದಿದ್ದರು. ಇದೀಗ ಐಪಿಎಲ್‌ನಲ್ಲಿ ಮತ್ತೂಂದು ಅವಕಾಶ ಎದುರಾಗಿದೆ. ರವಿವಾರ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ವಿರುದ್ದದ ಪಂದ್ಯಕ್ಕೂ ಮುನ್ನ ಕರುಣ್‌ ನಾಯರ್‌ ಲಕ್ನೋ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಕರುಣ್‌ ನಾಯರ್‌ ಈವರೆಗೆ 76 ಪಂದ್ಯಗಳನ್ನು ಆಡಿದ್ದು, 1,496 ರನ್‌ ಗಳಿಸಿದ್ದಾರೆ. ಕಳೆದ ವರ್ಷ ರಾಜಸ್ಥಾನ್‌ ರಾಯಲ್ಸ್‌ ತಂಡದಲ್ಲಿದ್ದರು. ಆದರೆ ಹೆಚ್ಚಿನ ಅವಕಾಶ ಲಭಿಸಿರಲಿಲ್ಲ.

ಕೆ.ಎಲ್‌. ರಾಹುಲ್‌ ಸ್ಥಾನ ತುಂಬಲು ಕರುಣ್‌ ನಾಯರ್‌ ಸೇರಿ ದಂತೆ ನಾಲ್ವರು ರೇಸ್‌ನಲ್ಲಿದ್ದರು. ಉಳಿದವರೆಂದರೆ ಪಂಜಾಬ್‌ನ ಗುರುಕೀರತ್‌ ಸಿಂಗ್‌ ಮಾನ್‌, ಕೇರಳದ ಯುವ ಆಟಗಾರ ಮೊಹಮ್ಮದ್‌ ಅಜರುದ್ದೀನ್‌ ಮತ್ತು ಆರಂಭಿಕನೇ ಆಗಿರುವ ಅಭಿಮನ್ಯು ಈಶ್ವರನ್‌

Advertisement

Udayavani is now on Telegram. Click here to join our channel and stay updated with the latest news.

Next