ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ 2023 (ಐಪಿಎಲ್ 2023) ಫೈನಲ್ ನ ರಾತ್ರಿ ಅಹಮದಾಬಾದ್‌ನಲ್ಲಿ ಬಿಸಿಸಿಐ ವರ್ಣರಂಜಿತ ಕಾರ್ಯಕ್ರಮ ನಡೆಸಲು ಯೋಜಿಸಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್‌ಗೆ ಮುಂಚಿತವಾಗಿ, ಸಮಾರೋಪ ಸಮಾರಂಭ ನಡೆಯಲಿದೆ. ರಾಪರ್ ಮತ್ತು ಗಾಯಕ ಡಿವೈನ್ ಮತ್ತು ನ್ಯೂಕ್ಲಿಯಾ ಅವರು ಕಾರ್ಯಕ್ರಮ ನೀಡಲಿದ್ದಾರೆ.
ಮುಂದಿನ ಭಾನುವಾರ ಎಂದರೆ ಮೇ 28ರಂದು ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಈ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಸಮಾರೋಪ ಸಮಾರಂಭದಲ್ಲಿ ಟಾಸ್ ಗೆ ಮೊದಲು ಕೆಲವು ಪ್ರದರ್ಶನಗಳು ನಡೆಯುತ್ತವೆ, ಇನ್ನು ಕೆಲವು ಇನ್ನಿಂಗ್ಸ್ ವಿರಾಮದ ಸಮಯದಲ್ಲಿ ನಡೆಯಬಹುದು ಎಂದು ವರದಿಯಾಗಿದೆ.
ಇದನ್ನೂ ಓದಿ:ರಾಮನಗರ: Election ಸಮಯದಲ್ಲಿ ಕೊಟ್ಟ ಕುಕ್ಕರ್ ಸಿಡಿದು ಬಾಲಕಿಗೆ ಗಂಭೀರ ಗಾಯ
ಕೆಲವು ವರದಿಗಳ ಪ್ರಕಾರ, ನಟ ರಣವೀರ್ ಸಿಂಗ್, ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಸಮಾರೋಪ ಸಮಾರಂಭದಲ್ಲಿ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಐಪಿಎಲ್ ಟ್ವೀಟ್ ಮಾಡಿದಂತೆ ಭಾರತೀಯ ರಾಪರ್ ನ್ಯೂಕ್ಲಿಯಾ ಮತ್ತು ಗಾಯಕ ಕಿಂಗ್ ಸಂಜೆ 6 ರಿಂದ ಪ್ರದರ್ಶನ ನೀಡಲಿದ್ದಾರೆ. ನಂತರ, ಐಪಿಎಲ್ ನ ಮಧ್ಯ ಇನಿಂಗ್ಸ್ ವಿರಾಮದ ಸಮಯದಲ್ಲಿ ಗಾಯಕಿ ಜೋನಿತಾ ಗಾಂಧಿ ಮತ್ತು ರಾಪರ್ ಡಿವೈನ್ ಭಾಗವಹಿಸುವಿಕೆಯನ್ನು ಸಂಘಟಕರು ಖಚಿತಪಡಿಸಿದರು.