ಮುಂಬಯಿ: ಮಂಡಿ ಸ್ನಾಯು ಸೆಳೆತಕ್ಕೆ ಸಿಲುಕಿರುವ ಕೋಲ್ಕತಾ ನೈಟ್‌ರೈಡರ್ ಬ್ಯಾಟರ್ ಅಜಿಂಕ್ಯ ರಹಾನೆ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಮಂಗಳವಾರ ಕೋಲ್ಕತಾ ಫ್ರಾಂಚೈಸಿ ತನ್ನ ಪ್ರಕಟನೆಯಲ್ಲಿ ಇದನ್ನು ತಿಳಿಸಿದೆ.
“ದ ನೈಟ್ಸ್ ಕ್ಯಾಂಪ್ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದೆ. ಬೇಗನೇ ಗುಣಮುಖರಾಗಿ’ ಎಂದು ಫ್ರಾಂಚೈಸಿ ಹಾರೈಸಿದೆ. ಇದಕ್ಕೆ ಸಂಬಂಧಿಸಿದಂತೆ ವೀಡಿಯೋ ಒಂದನ್ನು ಬಿಡುಗಡೆ ಮಾಡಿರುವ ರಹಾನೆ, “ಈ ಋತುವನ್ನು ನಾನು ಬಹಳಷ್ಟು ಆನಂದಿಸಿದೆ.
ಮುಂದಿನ ವರ್ಷ ಬಲಿಷ್ಠನಾಗಿ ಮರಳುವೆ. ಖಂಡಿತವಾಗಿಯೂ ಉತ್ತಮ ಪ್ರದರ್ಶನ ನೀಡಲಿದ್ದೇನೆ.
ಮುಂದಿನ ಪಂದ್ಯ ಗೆದ್ದು ಕೋಲ್ಕತಾ ಪ್ಲೇ ಆಫ್ ಪ್ರವೇಶಿಸಲಿ ಎಂದು ಹಾರೈಸುತ್ತೇನೆ’ ಎಂದಿದ್ದಾರೆ.
ಸದ್ಯ ಕೆಕೆಆರ್ ಒಂದು ಲೀಗ್ ಪಂದ್ಯವನ್ನಷ್ಟೇ ಆಡಲು ಬಾಕಿ ಇದೆ. ಇದು ಲಕ್ನೋ ಎದುರಿನ ಮುಖಾಮುಖಿಯಾಗಿದ್ದು, ಬುಧವಾರ ನಡೆಯಲಿದೆ.