Advertisement

ಐಪಿಎಲ್‌ ಫೈನಲ್‌ ರಾತ್ರಿ 8 ಗಂಟೆಗೆ ಆರಂಭ

11:54 PM May 19, 2022 | Team Udayavani |

ಹೊಸದಿಲ್ಲಿ: ಅಹ್ಮದಾಬಾದ್‌ನ “ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿ ಮೇ 29ರ ರವಿವಾರ ನಡೆಯಲಿರುವ ಐಪಿಎಲ್‌ ಫೈನಲ್‌ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.

Advertisement

ಪಂದ್ಯದ ಆರಂಭಕ್ಕೂ ಮೊದಲು ವರ್ಣರಂಜಿತ ಸಮಾರೋಪ ಸಮಾರಂಭವೊಂದನ್ನು ಏರ್ಪಡಿಸಲು ನಿರ್ಧರಿಸಿದ್ದೇ ಅರ್ಧ ಗಂಟೆ ವಿಳಂಬಕ್ಕೆ ಕಾರಣ.

ಸಮಾರೋಪ ಸಮಾರಂಭ 6.30ಕ್ಕೆ ಮೊದಲ್ಗೊಂಡು 7.20ರ ತನಕ ನಡೆಯಲಿದೆ ಎಂದು ತಿಳಿದು ಬಂದಿದೆ. ಟಾಸ್‌ ಸಮಯ 7.30. ಐಪಿಎಲ್‌ ಮಂಡಳಿ ಸಭೆಯಲ್ಲಿ ಇದನ್ನು ನಿರ್ಧರಿಸಲಾಯಿತು. ಮುಕ್ತಾಯ ಸಮಾರಂಭದಲ್ಲಿ ಬಾಲಿವುಡ್‌ ಸೆಲೆಬ್ರಿಟಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ.

ಬಿಸಿಸಿಐ ಬುಧವಾರವಷ್ಟೇ ಐಪಿಎಲ್‌ ಪಂದ್ಯಗಳನ್ನು ಮತ್ತೆ ರಾತ್ರಿ 8 ಗಂಟೆಗೆ ಆರಂಭಿಸುವ ಕುರಿತು ಪ್ರಸ್ತಾವಿಸಿತ್ತು. ಮೊದಲ 10 ವರ್ಷಗಳ ಕಾಲ (2008-2017) ಇದೇ ಸಮಯಕ್ಕೆ ಪಂದ್ಯ ಆರಂಭವಾಗುತ್ತಿತ್ತು. ಆದರೆ “ಸ್ಟಾರ್‌ ನ್ಪೋರ್ಟ್ಸ್’ನ ಒತ್ತಾಸೆಯಿಂದಾಗಿ ಪಂದ್ಯ ಅರ್ಧ ಗಂಟೆ ಬೇಗ ಮೊದಲ್ಗೊಳ್ಳುತ್ತಿದೆ. ಮತ್ತೆ 8 ಗಂಟೆಗೆ ಪಂದ್ಯ ಆರಂಭಿಸುವ ಬಿಸಿಸಿಐ ಪ್ರಸ್ತಾವವನ್ನು ಸ್ಟಾರ್‌ ನ್ಪೋರ್ಟ್ಸ್ ಸಮ್ಮತಿಸೀತೇ ಎಂಬುದು ಇಲ್ಲಿನ ಪ್ರಶ್ನೆ.

Advertisement

Udayavani is now on Telegram. Click here to join our channel and stay updated with the latest news.

Next