Advertisement

ಐಪಿಎಲ್‌ ಕ್ಷಣಗಣನೆ: ಇತಿಹಾಸ ಚೆನ್ನೈ ಪರ

06:14 PM Mar 26, 2022 | Team Udayavani |

2022ರ ಐಪಿಎಲ್‌ ಸಂಭ್ರಮಕ್ಕೆ ಕ್ಷಣಗಣನೆ ಮೊದಲ್ಗೊಂಡಿದೆ. ಕಳೆದ ಸಲದ ಫೈನಲಿಸ್ಟ್‌ಗಳಾದ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಕೋಲ್ಕತಾ ನೈಟ್‌ರೈಡರ್ ಇನ್ನೇನು ಕೆಲವೇ ಹೊತ್ತಿನಲ್ಲಿ ಚುಟುಕು ಕ್ರಿಕೆಟಿನ ಮಹಾಸಮರಕ್ಕಾಗಿ “ವಾಂಖೇಡೆ’ ಅಂಗಳಕ್ಕಿಳಿಯಲಿವೆ.

Advertisement

ಐಪಿಎಲ್‌ ಇತಿಹಾಸದಲ್ಲಿ ಕೆಕೆಆರ್‌ ವಿರುದ್ಧ ಚೆನ್ನೈ ನಿಚ್ಚಳ ಮೇಲುಗೈ ಹೊಂದಿರುವುದನ್ನು ಗಮನಿಸಬಹುದು. ಚೆನ್ನೈ 17, ಕೆಕೆಆರ್‌ 8 ಪಂದ್ಯ ಗೆದ್ದಿದೆ. 2021ರ ಋತುವಿನ ಎಲ್ಲ 3 ಪಂದ್ಯಗಳಲ್ಲೂ ಕೆಕೆಆರ್‌ ವಿರುದ್ಧ ಧೋನಿ ಪಡೆ ಜಯಭೇರಿ ಮೊಳಗಿಸಿತ್ತು. ಇದರಲ್ಲಿ ಫೈನಲ್‌ ಮುಖಾಮುಖೀಯೂ ಸೇರಿದೆ. ಇದಕ್ಕೂ ಮೊದಲು 2012ರ ಫೈನಲ್‌ನಲ್ಲಿ ಚೆನ್ನೈಯನ್ನು ಮಣಿಸಿಯೇ ಕೆಕೆಆರ್‌ ಮೊದಲ ಸಲ ಚಾಂಪಿಯನ್‌ ಆಗಿತ್ತು. ಚೆನ್ನೈಯಲ್ಲೇ ನಡೆದ ಈ ಪ್ರಶಸ್ತಿ ಕಾಳಗದಲ್ಲಿ ಗೌತಮ್‌ ಗಂಭೀರ್‌ ಪಡೆ 5 ವಿಕೆಟ್‌ಗಳ ಜಯ ಸಾಧಿಸಿ ಧೋನಿ ಬಳಗಕ್ಕೆ ಹ್ಯಾಟ್ರಿಕ್‌ ತಪ್ಪಿಸಿತ್ತು.

ಈ ಬಾರಿ ಎರಡೂ ತಂಡಗಳ ನಾಯಕತ್ವ ಬದಲಾಗಿದೆ. ಚೆನ್ನೈಗೆ 4 ಸಲ ಟ್ರೋಫಿ ತಂದಿತ್ತ ಮಹೇಂದ್ರ ಸಿಂಗ್‌ ಧೋನಿ ದಿಢೀರನೇ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಇವರ ಉತ್ತರಾಧಿಕಾರಿಯಾಗಿ ರವೀಂದ್ರ ಜಡೇಜ ನೇಮಕಗೊಂಡಿದ್ದಾರೆ.

ಇದನ್ನೂ ಓದಿ :ಬಜೆಟ್ ಘೋಷಣೆಗಳ ಶೀಘ್ರ ಅನುಷ್ಠಾನಕ್ಕೆ ಸಮಿತಿ ರಚಿಸಲಾಗಿದೆ : ಸಿಎಂ

ಕೆಕೆಆರ್‌ ಶ್ರೇಯಸ್‌ ಅಯ್ಯರ್‌ ಸಾರಥ್ಯ ಹೊಂದಿದೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮುನ್ನಡೆಸಿದ್ದ ಅನುಭವವುಳ್ಳ ಅಯ್ಯರ್‌ ಕೆಕೆಆರ್‌ ತಂಡವನ್ನು ಪ್ರತಿನಿಧಿಸುತ್ತಿರುವುದು ಇದೇ ಮೊದಲು.

Advertisement

ಜಡೇಜ, ಅಯ್ಯರ್‌ ಇಬ್ಬರೂ ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರರು. ಮೊದಲ ಪಂದ್ಯದಲ್ಲೇ ಮುಖಾಮುಖೀ ಆಗುತ್ತಿರುವುದು ವಿಶೇಷ. ಅಂದಹಾಗೆ ಮುಂಬಯಿಯವರಾದ ಅಯ್ಯರ್‌ಗೆ ವಾಂಖೇಡೆ “ಹೋಮ್‌ ಗ್ರೌಂಡ್‌’ ಆಗಿದೆ.

ಬನ್ನಿ, 15ನೇ ಐಪಿಎಲ್‌ ರೋಮಾಂಚನವನ್ನು ಸವಿಯಲು ಸಜ್ಜಾಗೋಣ…

Advertisement

Udayavani is now on Telegram. Click here to join our channel and stay updated with the latest news.

Next