ಹೊಸದಿಲ್ಲಿ: ಈ ಸಲದ ಐಪಿಎಲ್‌ಗೂ ಕೊರೊನಾ ಭೀತಿ ಎದುರಾಗಿದೆ. ಹೀಗಾಗಿ ಇದನ್ನು ಭಾರತದಲ್ಲಿ ನಡೆಸಲು ಸಾಧ್ಯವೇ ಅಥವಾ ಮತ್ತೆ ವಿದೇಶದತ್ತ ಮುಖ ಮಾಡಲಿದೆಯೇ ಎಂಬ ಪ್ರಶ್ನೆ ಕಾಡತೊಡಗಿದೆ.
ಈ ಕುರಿತು ಬಿಸಿಸಿಐ ಮೂಲವೊಂದು ಹೇಳಿಕೆ ನೀಡಿದ್ದು, “ಕೂಟದ ಮೊದಲ ಆಯ್ಕೆ ಭಾರತವೇ ಆಗಿರುತ್ತದೆ. ಆದರೆ ವಿದೇಶಿ ಆಯ್ಕೆಯನ್ನೂ ಪರಿಗಣಿಸಲಾಗುತ್ತದೆ’ ಎಂದಿದೆ.
“ಐಪಿಎಲ್ ಮೆಗಾ ಹರಾಜಿಗೆ ನಮ್ಮ ಮೊದಲ ಆದ್ಯತೆ. ಆತಿಥ್ಯದ ಆಯ್ಕೆಯೇನಿದ್ದರೂ ಅನಂತರ. ಏನಿದ್ದರೂ ಭಾರತದಲ್ಲೇ ಈ ಪಂದ್ಯಾವಳಿ ನಡೆಸಲು ನಮ್ಮ ಗರಿಷ್ಠ ಪ್ರಯತ್ನ ಸಾಗಲಿದೆ.
ಇದನ್ನೂ ಓದಿ:ಇಂಡಿಯಾ ಓಪನ್ ಬ್ಯಾಡ್ಮಿಂಟನ್: ಹಿಂದೆ ಸರಿದ ಇಂಗ್ಲೆಂಡ್
Related Articles
ಅಕಸ್ಮಾತ್ ಇದು ಸಾಧ್ಯವಾಗದೇ ಇದ್ದರೆ ವಿದೇಶಿ ಆಯ್ಕೆಯನ್ನು ಪರಿಗಣಿಸಬೇಕಾಗುತ್ತದೆ’ ಎಂದು ಬಿಸಿಸಿಐ ಮೂಲದಿಂದ ತಿಳಿದು ಬಂದಿದೆ.