Advertisement

ಕಿಂಗ್ಸ್ ಇಲೆವೆನ್ ಪಂಜಾಬ್ ಇನ್ಮುಂದೆ ‘ಪಂಜಾಬ್ ಕಿಂಗ್ಸ್’

04:45 PM Feb 17, 2021 | Team Udayavani |

ನವ ದೆಹಲಿ :  ಐ ಪಿ ಎಲ್ 14ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಇನ್ನು ಒಂದು ದಿನ ಬಾಕಿ ಇರುವಾಗಲೇ ಕಿಂಗ್ಸ್ ಇಲೆವೆನ್ ಪಂಜಾಬ್ ನ ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಪಂಜಾಬ್ ಕಿಂಗ್ಸ್ ಎಂದು ಮರು ನಾಮಕರಣ ಮಾಡಿರುವುದರೊಂದಿಗೆ ತಂಡದ ಹೊಸ ಲಾಂಛನ(ಲೋಗೊ)ವನ್ನು ಬಿಡುಗಡೆ ಮಾಡಿದ್ದಾರೆ.

Advertisement

ಓದಿ : ‘ಸದ್ಯ ಕನ್ನಡ ಸಿನಿಮಾದಲ್ಲಿ ನಟಿಸೋಲ್ಲ’… ಹಳೇ ಟ್ವೀಟ್ ಗೆ ತೆಪೆ ಹಚ್ಚಿದ ಶೃತಿ ಹಾಸನ್  

ತಂಡದ ಹೊಸ ಹೆಸರು ಮತ್ತಷ್ಟು ಅಭಿಮಾನಿಗಳನ್ನು ಸಂಪಾದಿಸಲಿದೆ ಮತ್ತು ಅವರಿಗೆ ಹತ್ತಿರವಾಗಲಿದೆ ಎಂದು ಪ್ರಾಂಚೈಸಿಗಳು ಹೇಳಿದ್ದಾರೆ. ಅಭಿಮಾನಿಗಳ ಪ್ರೋತ್ಸಾಹದಿಂದ ಐ ಪಿ ಎಲ್ ನಲ್ಲಿ ಸಮರ್ಥವಾಗಿ ವಿರೋಧಿ ತಂಡವನ್ನು ಎದುರಿಸಲು ಸಾಧ್ಯವಾಗಿದೆ. ಇನ್ನು ಮುಂದೆಯೂ ಕೂಡ ಅಭಿಮಾನಿಗಳ ಪ್ರೋತ್ಸಾಹ ನಮ್ಮೊಂದಿಗಿರಲಿದೆ ಎಂದು ಫ್ರಾಂಚೈಸಿಗಳು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಕಳೆದ ಆವೃತ್ತಿಯಲ್ಲಿ 14 ಪಂದ್ಯಗಳನ್ನು ಎದುರಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ (ಪಂಜಾಬ್ ಕಿಂಗ್ಸ್) ಕೇವಲ ಆರು ಪಂದ್ಯಗಳನ್ನು ಗೆಲ್ಲುವುದರ ಮೂಲಕ ಆರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.

ಬಾಲಿವುಡ್ ಖ್ಯಾತ ನಟಿ ಪ್ರೀತಿ ಜಿಂಟಾ, ಮೊಹಿತ್ ಬುರ್ಮನ್ ಹಾಗೂ ನೆಸ್ ವಾಡಿಯಾ ಅವರೊಂದಿಗೆ ಪ್ರಾಂಚೈಸಿಯನ್ನು ಹೊಂದಿದ್ದಾರೆ.

Advertisement

“ಮರುನಾಮಕರಣದಿಂದಾಗಿ ತಂಡಕ್ಕೆ ಮತ್ತಷ್ಟು ಬಲ ಬರಲಿದೆ. ತಂಡದ ಹೊಸ ಲಾಂಛನದಲ್ಲಿ ಸಿಂಹ ಧೈರ್ಯದ ಸಂಕೇತವಾಗಿ ಇದೆ” ಎಂದು ಪ್ರಾಂಚೈಸಿಗಳು ಹೇಳಿದ್ದಾರೆ.

ಇನ್ನು, “ಪಂಜಾಬ್ ಕಿಂಗ್ಸ್” ವಿಕಸನಗೊಂಡ ಬ್ರ್ಯಾಂಡ್ ನೇಮ್ ಆಗಿದೆ. ಕೋರ್ ಬ್ರ್ಯಾಂಡ್ ನ್ನು ಸೃಷ್ಟಿಸಿಕೊಳ್ಳಲು ಇದು ಸರಿಯಾದ ಸಮಯ ಎಂದು ನಾವು ಅರ್ಥೈಸಿಕೊಂಡಿದ್ದೇವೆ. ಬ್ರ್ಯಾಂಡ್ ಐಡೆಂಟಿಟಿ ಬದಲಾಗುತ್ತಿರುವುದು ಬ್ರ್ಯಾಂಡ್ ಬದಲಾಗುತ್ತಿದೆ ಎಂದರ್ಥವಲ್ಲ. ತಂಡದ ಹೊಸ ಲಾಂಛನವು ಬ್ರ್ಯಾಂಡ್ ನ ಚೈತನ್ಯ ಮತ್ತು ಜೀವಂತಿಕೆಯನ್ನು ಹೆಚ್ಚಿಸುತ್ತದೆ. ಈ ಹೊಸತನದಿಂದಾಗಿ ಉಳಿದ ಎಲ್ಲಾ ತಂಡಗಳ ನಡುವೆ ನಾವು ಭಿನ್ನವಾಗಿ, ವಿಶೇಷವಾಗಿ ಕಾಣಿಸಲಿದ್ದೇವೆ ಎಂದು ಪಂಜಾಬ್ ಕಿಂಗ್ಸ್ ತಂಡದ ಸಿ ಇ ಒ ಸತೀಶ್ ಮೆನನ್ ಅಭಿಪ್ರಾಯ ಪಟ್ಟಿದ್ದಾರೆ.

ಓದಿ :  ಉತ್ತರ ಪ್ರದೇಶ : ಶಾಲಾ ತರಗತಿಗಳು ಆರಂಭವಾದರೂ ಶೇ.10ರಷ್ಟು ಮಾತ್ರ ಹಾಜರಾತಿ..!

Advertisement

Udayavani is now on Telegram. Click here to join our channel and stay updated with the latest news.

Next