Advertisement

ಡೆಲ್ಲಿ ತಂಡಕ್ಕೆ  ವೋಕ್ಸ್‌ ಬದಲು ಡ್ವಾರ್ಶಿಯಸ್‌

09:59 PM Sep 13, 2021 | Team Udayavani |

ನವದೆಹಲಿ: ಐಪಿಎಲ್‌ನಿಂದ ಹಿಂದೆ ಸರಿದ ಇಂಗ್ಲೆಂಡಿನ ಆಲ್‌ರೌಂಡರ್‌ ಕ್ರಿಸ್‌ ವೋಕ್ಸ್‌ ಬದಲು ಆಸ್ಟ್ರೇಲಿಯದ ಬೆನ್‌ ಡ್ವಾರ್ಶಿಯಸ್‌ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

Advertisement

ಡ್ವಾರ್ಶಿಯಸ್‌ ಶೀಘ್ರವೇ ಯುಎಇಯ ಡೆಲ್ಲಿ ಕ್ಯಾಪಿಟಲ್ಸ್‌ ಜೈವಿಕ ಸುರಕ್ಷಾ ವಲಯವನ್ನು ಪ್ರವೇಶಿಸಲಿದ್ದಾರೆ ಎಂದು ಫ್ರಾಂಚೈಸಿ ತಿಳಿಸಿದೆ. ಈ ವರ್ಷದ ಐಪಿಎಲ್‌ ಮೊದಲರ್ಧದಲ್ಲಿ 3 ಪಂದ್ಯಗಳನ್ನಾಡಿದ್ದ ಕ್ರಿಸ್‌ ವೋಕ್ಸ್‌ 5 ವಿಕೆಟ್‌ ಉರುಳಿಸಿದ್ದರು.

ಇನ್ನೊಂದೆಡೆ 27 ವರ್ಷದ ಡ್ವಾರ್ಶಿಯಸ್‌  ಬಿಗ್‌ ಬಾಶ್‌ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ ತಂಡದ ಪರ ಆಡಿದ್ದು, 69 ಪಂದ್ಯಗಳಿಂದ 85 ವಿಕೆಟ್‌ ಕೆಡವಿದ್ದಾರೆ. ಆದರೆ ಈವರೆಗೆ ಅಂತಾರಾಷ್ಟ್ರೀಯ ಪಂದ್ಯ ಆಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next