Advertisement

ದೀಪಕ್‌ ಚಹರ್‌ರನ್ನು ತಬ್ಬಿಹಿಡಿದ ಧೋನಿ!

11:22 PM Oct 08, 2021 | Team Udayavani |

ದುಬೈ: ಗುರುವಾರ ನಡೆದ ಚೆನ್ನೈ ಕಿಂಗ್ಸ್‌-ಪಂಜಾಬ್‌ ಕಿಂಗ್ಸ್‌ ನಡುವಿನ ಐಪಿಎಲ್‌ ಪಂದ್ಯದ ವೇಳೆ ಚೆನ್ನೈ ವೇಗಿ ದೀಪಕ್‌ ಚಹರ್‌, ತಮ್ಮ ಪ್ರಿಯತಮೆಗೆ ಪ್ರೇಮ ನಿವೇದನೆ ಮಾಡಿದ್ದರು. ಅದು ದೊಡ್ಡ ಸುದ್ದಿಯಾಗಿತ್ತು.

Advertisement

ಆದರೆ ಅದಾದ ನಂತರದ ಬೆಳವಣಿಗೆಗಳು ಸುದ್ದಿಯಾಗಿರಲಿಲ್ಲ. ಈ ಪಂದ್ಯ ಮುಗಿದ ಮೇಲೆ ಆಟಗಾರರೆಲ್ಲ ಹೋಟೆಲ್‌ ಕೊಠಡಿಗೆ ತೆರಳಿದರು. ಅಲ್ಲಿ ಚಹರ್‌ ಮತ್ತವರ ಗೆಳತಿ ಜಯಾ ಭಾರದ್ವಾಜ್‌ ಕೇಕ್‌ ಕತ್ತರಿಸುವುದಕ್ಕೆ ಸಿದ್ಧತೆಯಾಗಿತ್ತು. ಕೇಕ್‌ ಕತ್ತರಿಸಿದ ಮೇಲೆ ಚಹರ್‌ರನ್ನು ಧೋನಿ ಬಿಗಿಯಾಗಿ ಹಿಂದಿನಿಂದ ಹಿಡಿದುಕೊಂಡಿದ್ದಾರೆ, ಮುಂದಿನಿಂದ ಅವರ ಕಾಲನ್ನು ಕೆ.ಗೌತಮ್‌ ಹಿಡಿದು ಎತ್ತಿದರು.

ಈ ವೇಳೆ ಎಲ್ಲರೂ ಚಹರ್‌ ಮೇಲೆ ಏನೇನೋ ಸುರಿದು, ಕೇಕನ್ನು ಮೆತ್ತಿದರು. ಈ ವೇಳೆ ಆದ ವಿಚಿತ್ರವೇಷದೊಂದಿಗೆ ಚಹರ್‌ ಪ್ರೇಮನಿವೇದನೆ ಪ್ರಕರಣ ಸುಖಾಂತ್ಯವಾಯಿತು!

ಇದನ್ನೂ ಓದಿ:ಉಪ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗೆ ಜನ ಮತ: ಸಿದ್ದರಾಮಯ್ಯ

Advertisement

Udayavani is now on Telegram. Click here to join our channel and stay updated with the latest news.

Next