Advertisement

ಲೀಗ್‌ ಪಂದ್ಯಗಳಿಗೆ ಇಂದು ತೆರೆ: ಏಕಕಾಲಕ್ಕೆ ಎರಡು ಪಂದ್ಯ

09:27 PM Oct 07, 2021 | Team Udayavani |

ಅಬುಧಾಬಿ/ದುಬೈ: ಪ್ಲೇಆಫ್ ಪ್ರವೇಶಿಸಲಿರುವ ನಾಲ್ಕನೇ ತಂಡ ಯಾವುದು ಎಂಬ ಕುತೂಹಲದೊಂದಿಗೆ 2021ನೇ ಐಪಿಎಲ್‌ ಪಂದ್ಯಾವಳಿಯ ಲೀಗ್‌ ಮುಖಾಮುಖಿಗೆ ಶುಕ್ರವಾರ ತೆರೆ ಬೀಳಲಿದೆ.

Advertisement

ಮುಂಬೈ-ಹೈದರಾಬಾದ್‌ ಹಾಗೂ ಬೆಂಗಳೂರು-ಡೆಲ್ಲಿ ಮುಖಾಮುಖಿ ಆಗಲಿವೆ. ಈ ಪಂದ್ಯಗಳು ಮೂಲ ವೇಳಾಪಟ್ಟಿಗೆ ವ್ಯತಿರಿಕ್ತವಾಗಿ ಏಕಕಾಲಕ್ಕೆ ಆರಂಭವಾಗಲಿವೆ. ಐಪಿಎಲ್‌ ಇತಿಹಾಸದಲ್ಲಿ ಎರಡು ಪಂದ್ಯಗಳು ಒಂದೇ ವೇಳೆಗೆ ಮೊದಲ್ಗೊಳ್ಳುತ್ತಿರುವುದು ಇದೇ ಮೊದಲು. ಇಲ್ಲಿನ 4 ತಂಡಗಳಲ್ಲಿ ಮುಂಬೈಗೆ ಮಾತ್ರ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಪ್ಲೇಆಫ್ ಪ್ರವೇಶಿಸಬೇಕಾದರೆ ಅದು ಹೈದರಾಬಾದ್‌ ವಿರುದ್ಧ ನಾನಾ ಲೆಕ್ಕಾಚಾರದೊಂದಿಗೆ ದೊಡ್ಡ ಅಂತರದಲ್ಲಿ ಗೆಲ್ಲಬೇಕಾದ ಒತ್ತಡವಿದೆ.

ಆರ್‌ಸಿಬಿ-ಡೆಲ್ಲಿ ಈಗಾಗಲೇ ಮುಂದಿನ ಸುತ್ತು ಪ್ರವೇಶಿಸಿ ನಿರಾಳವಾಗಿವೆ. ಕೊಹ್ಲಿ ಪಡೆಯ ದ್ವಿತೀಯ ಸ್ಥಾನದ ಕನಸನ್ನು ಬುಧವಾರ ರಾತ್ರಿ ಹೈದರಾಬಾದ್‌ ಛಿದ್ರಗೊಳಿಸಿದ್ದರಿಂದ ಉಳಿದೊಂದು ಕುತೂಹಲವೂ ಹೊರಟು ಹೋಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next