Advertisement

“ಐಪಿಎಲ್‌ ತಾಣ ನಿರ್ಧಾರವಾಗಿಲ್ಲ’

10:38 PM Mar 04, 2021 | Team Udayavani |

ಹೊಸದಿಲ್ಲಿ: ಐಪಿಎಲ್‌ 2021ರ ಆವೃತ್ತಿಯ ಹರಾಜು ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಆದರೆ ಕೂಟದ ಆರಂಭ ಮತ್ತು ಐಪಿಎಲ್‌ ತಾಣಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಐಪಿಎಲ್‌ ಫ್ರಾಂಚೈಸಿಗಳು ಗೊಂದಲದಲ್ಲಿವೆ. ಇದೀಗ ಎಲ್ಲದಕ್ಕೂ ಪರಿಹಾರ ನೀಡಲು ಐಪಿಎಲ್‌ ಆಡಳಿತ ಮಂಡಳಿ ಮುಂದಾಗಿದೆ.

Advertisement

ಈ ಬಗ್ಗೆ ಐಪಿಎಲ್‌ ಮುಖ್ಯಸ್ಥ ಬೃಜೇಶ್‌ ಪಟೇಲ್‌ ಪ್ರತಿಕ್ರಿಯೆ ನೀಡಿದ್ದು, ಫ್ರಾಂಚೈಸಿಗಳ ಗೊಂದಲಗಳಿಗೆ ಪರಿಹಾರ ನೀಡಲು ಶೀಘ್ರದಲ್ಲೇ ಸಭೆ ನಡೆಸಿ ಪಂದ್ಯಗಳ ತಾಣಗಳನ್ನು ಇತ್ಯರ್ಥಗೊಳಿಸಲಾಗುವುದು ಎಂದಿದ್ದಾರೆ.

“ಐಪಿಎಲ್‌ ಆಡಳಿತ ಮಂಡಳಿಯ ಸಭೆಯ ದಿನಾಂಕ ಇನ್ನೂ ಖಚಿತಪಡಿಸಿಲ್ಲ. ಇದು ವರ್ಚುವಲ್‌ ಸಭೆಯೂ ಆಗಬಹುದು. ಈ ಬಗ್ಗೆ ಎಲ್ಲ ಪ್ರಾಂಚೈಸಿಗಳಿಗೆ ಮಾಹಿತಿ ನೀಡುತ್ತೇವೆ. ಆದ್ದರಿಂದ ಊಹಾಪೋಹದ ಸುದ್ದಿಗಳಿಗೆ ಪ್ರಾಂಚೈಸಿಗಳು ಕಿವಿಗೊಡಬಾರದು’ ಎಂದು ಬೃಜೇಶ್‌ ಪಟೇಲ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next