Advertisement

ಈ ಸಲವೂ ಕಪ್‌ ಮುಂಬೈಗೆ; ಮುಂಬೈ ಮಹಾರಾಜನಿಗೆ ಒಲಿದ ಮತ್ತೊಂದು ಐಪಿಎಲ್ ಕಿರೀಟ

11:03 PM Nov 10, 2020 | mahesh |

ದುಬಾೖ: ಒಂದು ತಿಂಗಳಿಗೂ ಹೆಚ್ಚು ಕಾಲ ಕೋಟ್ಯಂತರ ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಮನೆ ಮನಸ್ಸು ಆವರಿಸಿದ್ದ 13ನೇ ಆವೃತ್ತಿ ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಟಿ20 ಕೂಟಕ್ಕೆ ಮಂಗಳವಾರ ತೆರೆ ಬಿದ್ದಿದೆ. ಐಪಿಎಲ್‌ ಇತಿಹಾಸದಲ್ಲಿ ಇದೇ ಮೊದಲ ಸಲ ಫೈನಲ್‌ ಆಡಲಿಳಿದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್‌ ರೋಹಿತ್‌ ಶರ್ಮ ನೇತೃತ್ವದ ಮುಂಬೈ ರೋಚಕ 5 ವಿಕೆಟ್ ಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ 5 ನೇ ಸಲ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡು ದಾಖಲೆ ಬರೆಯಿತು.

Advertisement

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ, ಅಯ್ಯರ್‌-ಪಂತ್‌ ಜೋಡಿಯ ಹೋರಾಟ ಹಾಗೂ ಅರ್ಧ ಶತಕದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next