Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಶೇನ್ ವಾಟ್ಸನ್ ಮತ್ತು ಅಂಬಾಟಿ ರಾಯುಡು ಅವರ ರಕ್ಷಣಾತ್ಮಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟಿಗೆ 167 ರನ್ ಪೇರಿಸಿ ಹೈದರಾಬಾದ್‌ಗೆ ಸವಾಲೊಡ್ಡಿತು. ಗುರಿ ಬೆನ್ನತ್ತಿದ ಹೈದರಾಬಾದ್ ತಂಡವು 20 ಓವರ್‌ಗಳಲ್ಲಿ 8 ವಿಕೆಟಿಗೆ 147 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಹೈದರಾಬಾದ್ ಪರ ಕೇನ್ ವಿಲಿಯಮ್ಸನ್ ಅರ್ಧಶತಕ ಸಿಡಿಸಿ ಏಕಾಂಗಿಯಾಗಿ ಹೋರಾಟ ನಡೆಸಿದರು. ವಿಲಿಯಮ್ಸನ್ ಗಳಿಕೆ 57 ರನ್.
Related Articles
ಪವರ್ ಪ್ಲೇ ಅವಧಿಯಲ್ಲಿ ಚೆನ್ನೈ ಎರಡು ವಿಕೆಟ್ ಕಳೆದುಕೊಂಡು 44 ರನ್ ಕಲೆಹಾಕಿತು. ಅಪಾಯದಲ್ಲಿದ್ದ ತಂಡಕ್ಕೆ ಶೇನ್ ವಾಟ್ಸನ್ ಮತ್ತು ಅಂಬಾಟಿ ರಾಯುಡು ಆಸರೆಯಾಗಿ ಎಚ್ಚರಿಕೆ ಆಟವಾಡತೊಡಗಿದರು. ಓವರ್‌ಗೆ ಒಂದರಂತೆ ಸಿಕ್ಸರ್, ಬೌಂಡರಿ ಬಾರಿಸುತ್ತ
ತಂಡದ ಮೊತ್ತವನ್ನು ಬೆಳೆಸತೊಡಗಿದರು. ಆದರೆ 14 ಓವರ್ ಬಳಿಕ ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗ್‌ಗೆ ಮುಂದಾದ ಶೇನ್ ವಾಟ್ಸನ್ ಮತ್ತು ಅಂಬಾಟಿ ರಾಯುಡು ಜೋಡಿಯನ್ನು 16ನೇ ಓವರ್‌ನಲ್ಲಿ ಖಲೀಲ್ ಅಹ್ಮದ್ ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಈ ಜೋಡಿಯಿಂದ 3ನೇ ವಿಕೆಟಿಗೆ 81 ರನ್ ಒಟ್ಟುಗೂಡಿತು. ರಾಯುಡು ಗಳಿಕೆ 34 ಎಸೆತಗಳಿಂದ 41 ರನ್ (3 ಬೌಂಡರಿ, 2 ಸಿಕ್ಸರ್).
Advertisement
ಧೋನಿ, ಡ್ವೇನ್ ಬ್ರಾವೊ ಮತ್ತೆ ವಿಫಲರಾಯುಡು ವಿಕೆಟ್ ಪತನದ ಬೆನ್ನಲ್ಲೆ ಶೇನ್ ವಾಟ್ಸನ್ ಟಿ. ನಟರಾಜನ್ ಅವರ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಪ್ರಯತ್ನದಲ್ಲಿ ಲಾಂಗ್ ಆಫ್ನಲ್ಲಿದ್ದ ಮನೀಷ್ ಪಾಂಡೆಗೆ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು. 42 ರನ್‌ಗಳಿಸಿದ ಅವರು ಕೇವಲ 8 ರನ್‌ಗಳ ಅಂತರದಿಂದ ಅರ್ಧಶತಕದಿಂದ ವಂಚಿತರಾದರು. ಧೋನಿ (21), ವಿಂಡೀಸ್ ಆಲ್‌ರೌಂಡರ್ ಡ್ವೇನ್ ಬ್ರಾವೊ (0) ಈ ಪಂದ್ಯದಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದರು. ಜಡೇಜ ಅಜೇಯರಾಗಿ ಉಳಿದು 25 ರನ್ ಸೂರೆಗೈದರು. ಹೈದರಾಬಾದ್ ಪರ ಸಂದೀಪ್ ಶರ್ಮ 19 ರನ್ ಬಿಟ್ಟುಕೊಟ್ಟು 2 ವಿಕೆಟ್ ಉರುಳಿಸಿದರು. ಉಳಿದಂತೆ ಟಿ. ನಟರಾಜನ್, ಖಲೀಲ್ ಅಹ್ಮದ್ ತಲಾ ಎರಡು ವಿಕೆಟ್ ಪಡೆದರು. ಕಳೆದ ಪಂದ್ಯಗಳಲ್ಲಿ ಮಿಂಚಿದ್ದ ಅಫ್ಘಾನ್ ಸಿನ್ನರ್ ರಶೀದ್ ಖಾನ್ ಅವರ ಸ್ಪಿನ್ ಮೋಡಿ ಈ ಪಂದ್ಯದಲ್ಲಿ ಕೈಹಿಡಿಯಲಿಲ್ಲ 4 ಓವರ್ ಎಸೆದು ವಿಕೆಟ್ ಲೆಸ್ ಎನಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ಸ್ಯಾಮ್ ಕರನ್ ಬಿ ಸಂದೀಪ್ 31
ಫಾ ಡು ಪ್ಲೆಸಿಸ್ ಸಿ ಬೇರ್‌ಸ್ಟೊ ಬಿ ಸಂದೀಪ್ 0
ಶೇನ್ ವಾಟ್ಸನ್ ಸಿ ಪಾಂಡೆ ಬಿ ನಟರಾಜನ್ 42
ರಾಯುಡು ಸಿ ವಾರ್ನರ್ ಬಿ ಖಲೀಲ್ 41
ಧೋನಿ ಸಿ ವಿಲಿಯಮ್ಸನ್ ಬಿ ನಟರಾಜನ್ 21
ಜಡೇಜ ಔಟಾಗದೆ 25
ಡ್ವೇನ್ ಬ್ರಾವೊ ಬಿ ಖಲೀಲ್ 0
ದೀಪಕ್ ಚಹರ್ ಔಟಾಗದೆ 2 ಇತರ 5
ಒಟ್ಟು ( 20 ಓವರ್‌ಗಳಲ್ಲಿ 6 ವಿಕೆಟಿಗೆ) 167
ವಿಕೆಟ್ ಪತನ: 1-10, 2-35, 3-116, 4-120, 5-152, 6-152. ಬೌಲಿಂಗ್
ಸಂದೀಪ್ ಶರ್ಮ 4-0-19-2
ಖಲೀಲ್ ಅಹ್ಮದ್ 4-0-45-2
ನದೀಮ್ 4-0-29-0
ಟಿ. ನಟರಾಜನ್ 4-0-41-2
ರಶೀದ್ ಖಾನ್ 4-0-30-0 ಹೈದರಾಬಾದ್
ವಾರ್ನರ್ ಸಿ ಮತ್ತು ಬಿ ಕರನ್ 9
ಬೇರ್‌ಸ್ಟೊ ಬಿ ಜಡೇಜ 23
ಮನೀಷ್ ಪಾಂಡೆ ರನೌಟ್ 4
ವಿಲಿಯಮ್ಸನ್ ಸಿ ಠಾಕೂರ್ ಬಿ ಶರ್ಮ 57
ಪ್ರಿಯಂ ಗರ್ಗ್ ಸಿ ಜಡೇಜ ಬಿ ಶರ್ಮ 16
ವಿಜಯ್ ಶಂಕರ್ ಸಿ ಜಡೇಜ ಬಿ ಬ್ರಾವೊ 12
ರಶೀದ್ ಖಾನ್ ಹಿಟ್ ವಿಕೆಟ್ 14
ನದೀಮ್ ಸಿ ಮತ್ತು ಬಿ 5
ಸಂದೀಪ್ ಶರ್ಮ ಔಟಾಗದೆ 1
ಟಿ. ನಟರಾಜನ್ ಔಟಾಗದೆ 0 ಇತರ 6
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 147
ವಿಕೆಟ್ ಪತನ: 1-23, 2-27, 3-59, 4-99, 5-117, 6-126, 7-146, 8-146. ಬೌಲಿಂಗ್
ದೀಪಕ್ ಚಹರ್ 4-0-28-0
ಸ್ಯಾಮ್ ಕರನ್ 3-0-18-1
ರವೀಂದ್ರ ಜಡೇಜ 3-0-21-1
ಶಾದೂìಲ್ ಠಾಕೂರ್ 2-0-10-1
ಕರಣ್ ಶರ್ಮ 4-0-37-2
ಡ್ವೇನ್ ಬ್ರಾವೊ 3-0-25-2
ಪಿಯೂಷ್ ಚಾವ್ಲಾ 1-0-8-0