Advertisement

ಕಾಡಿದ ಬೆನ್ನು ನೋವು: ಧೋನಿ

06:30 AM Apr 17, 2018 | |

ಮೊಹಾಲಿ: ಧೋನಿ ಅವರಿಗೆ ಗಾಯದ ಸಮಸ್ಯೆ ಅಪರೂಪವಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ನೋವು ಇದ್ದರೂ ಅವರ ಅಮೋಘ ಫಿಟ್‌ನೆಸ್‌ನಿಂದಾಗಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಲು ಅವರು ಸಮರ್ಥರಾಗುತ್ತಿದ್ದರು. ಆದರೆ ಮೊಹಾಲಿಯಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಧೋನಿ ಬೆನ್ನು ನೋವಿನ ನಡುವೆಯೂ ಅಮೋಘವಾಗಿ ಆಡಿದ್ದರೂ ಕೇವಲ 4 ರನ್ನಿನಿಂದ ತಂಡಕ್ಕೆ ಗೆಲುವು ದೊರಕಿಸಿಕೊಡಲು ಅವರಿಂದ ಸಾಧ್ಯವಾಗಿರಲಿಲ್ಲ.

Advertisement

ನೋವು ತೀವ್ರಗೊಂಡ ಕಾರಣ ಮೈದಾನದಲ್ಲಿಯೇ ಅವರು ವೈದ್ಯರಿಂದ ತುರ್ತು ಚಿಕಿತ್ಸೆ ಪಡೆದುಕೊಂಡಿದ್ದರು. ಆದರೂ ಅಂತಿಮ ಓವರ್‌ನಲ್ಲಿ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶಿಸಲು ಅವರಿಂದ ಸಾಧ್ಯವಾಗದೇ ನಿರಾಶೆಗೊಳಗಾದರು. ಧೋನಿ ಅಜೇಯ 79 ರನ್‌ ಸಿಡಿಸಿದರೂ 4 ರನ್ನಿನಿಂದ ಚೆನ್ನೈ ಗೆಲುವಿನಿಂದ ದೂರ ಉಳಿಯಿತು.

ಇದೊಂದು ಕೆಟ್ಟ. ಎಷ್ಟೊಂದು ಕೆಟ್ಟದು ಎಂಬುದು ನನಗೆ ಗೊತ್ತಿಲ್ಲ ಎಂದು ಪಂದ್ಯದ ಬಳಿಕ ಧೋನಿ ನುಡಿದರು.ನೋವು ಇದ್ದರೂ ಹೇಗೆ ಚೆಂಡನ್ನು ಹೊಡೆಯುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಧೋನಿ “ದೇವರು ನನಗೆ ಸಾಕಷ್ಟು ಶಕ್ತಿ ನೀಡಿದ್ದಾರೆ. ಬ್ಯಾಟಿಂಗ್‌ ವೇಳೆ ಬೆನ್ನಿಗೆ ಹೆಚ್ಚಿನ ಬಲ ನೀಡುತ್ತಿರಲಿಲ್ಲ. ಕೈಯಿಂದಲೇ ಎಲ್ಲ ಕೆಲಸ ಮಾಡುತ್ತಿದ್ದೆ ಎಂದು ಧೋನಿ ತಿಳಿಸಿದರು.

ಇದು ಎಷ್ಟೊಂದು ಕೆಟ್ಟದು ಎಂಬುದನ್ನು ಪರಿಶೀಲಿಸಲಿದ್ದೇವೆ. ತುಂಬಾ ಕೆಟ್ಟದು ಆಗಿರಲಿಕ್ಕಿಲ್ಲ. ಬೆನ್ನು ನೋವು ತೀವ್ರವಾಗಿದೆಯೆ ಎಂಬುದನ್ನು ಪರೀಕ್ಷಿಸಬೇಕಾಗಿದೆ. ಮುಂದಿನ ಪಂದ್ಯಕ್ಕೆ ಮೂರು-ನಾಲ್ಕು ದಿನವಿರುವ ಕಾರಣ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಇದೆ ಎಂದ ಧೋನಿ ನೋವಿನ ಜತೆ ಆಡುವುದು ಕರಗತವಾಗಿದೆ. ಹಾಗಾಗಿ ಛಲದಿಂದ ಆಡುವುದನ್ನು ಕಲಿಯಬೇಕಾಗಿದೆ ಎಂದರು.

ಮುಂಬೈ ಮತ್ತು ಕೋಲ್ಕತಾ ವಿರುದ್ಧ ರೋಚಕ ಗೆಲುವು ದಾಖಲಿಸಿದ್ದ ಚೆನ್ನೈ ಮೂರನೇ ಗೆಲುವಿನತ್ತ ಹೆ‌ಜ್ಜೆ ಹಾಕಿತ್ತು. ಆದರೆ ಸ್ವಲ್ಪದರಲ್ಲಿ ಚೆನ್ನೈ ಗೆಲುವಿನಿಂದ ದೂರ ಉಳಿಯಿತು. ಪಂಜಾಬ್‌ ಗೆಲುವಿನ ನಗೆ ಚೆಲ್ಲಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next