Advertisement
ಇಂಗ್ಲಂಡ್ ಆಟಗಾರ, ಎಡಗೈ ವೇಗದ ಎಸೆಗಾರ ಟೈಮಲ್ ಮಿಲ್ಸ್ ಅವರನ್ನು ಬೆಂಗಳೂರು ರಾಯಲ್ ಚ್ಯಾಲೆಂಜರ್ 12 ಕೋಟಿ ರೂ. ಗೆ ಖರೀದಿಸಿದ್ದು, ಬೆನ್ ಸ್ಟೋಕ್ ಬಳಿಕದ ಗರಿಷ್ಠ ದಾಖಲೆ ಮೊತ್ತಕ್ಕೆ ಆಗಿರುವ ಸೇಲ್ ಇದಾಗಿದೆ.
Related Articles
Advertisement
ವರುಣ್ ಆರೋನ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ 2.8 ಕೋಟಿ ರೂ.ಗೆ ಖರೀದಿಸಿದೆ; ಲೆಗ್ ಸ್ಪಿನ್ನರ್ ಕಣ್ì ಶರ್ಮಾ ಅವರನ್ನು ಮುಂಬಯಿ ಇಂಡಿಯನ್ಸ್ 3.2 ಕೋಟಿ ರೂ.ಗೆ ಖರೀದಿಸಿದೆ.
ಪವನ್ ನೇಗಿಯನ್ನು ಆರ್‌ಸಿಬಿ 1 ಕೋಟಿ ರೂ.ಗೆ ಖರೀದಿಸಿದೆ.
ಚೇತೇಶ್ವರ್ ಪೂಜಾರ ಮತ್ತು ಇಶಾಂತ್ ಶರ್ಮಾ ಹರಾಜಿನಲ್ಲಿ ಸೇಲಾಗದಿರುವುದು ಅಚ್ಚರಿ ಹಾಗೂ ಇರಿಸುಮುರಿಸು ಉಂಟುಮಾಡಿದೆ.
ಇದೇ ವೇಳೆ ಏಜೆಂಲಾ ಮ್ಯಾಥ್ಯೂಸ್, ಕ್ರಿಸ್ ವೋಕ್ಸ್, ಇಯಾನ್ ಮಾರ್ಗನ್, ಇಶಾಂತ್ ಶರ್ಮಾ, ಮಿಚೆಲ್ ಜಾನ್‌ಸನ್ ಮತ್ತು ಪ್ಯಾಟ್ ಕ್ಯುಮಿನ್ಸ್ ಅತ್ಯಂತ ದುಬಾರಿ ಆಟಗಾರರೆಂದು ಹರಾಜಿನಲ್ಲಿ ಪರಿಗಣಿತರಾಗಿದ್ದಾರೆ.
ವೇಗದ ಎಸೆಗಾರ ಕ್ಯಾಸಿಗೋ ರಬಾಡಾ ಅವರು ತಮ್ಮ ಮೂಲ ಬೆಲೆ 1 ಕೋಟಿ ರೂ.ಗೆ ಹರಾಜಾಗಿದ್ದಾರೆ.
ನಿಕೋಲಸ್ ಪೂರಾನ್ ಅವರು (ಮೂಲ ಬೆಲೆ 30 ಲಕ್ಷ ರೂ.) ಮುಂಬಯಿ ಇಂಡಿಯನ್ಸ್ ತಂಡದ ಪಾಲಾಗಿದ್ದಾರೆ.
ಕೋರೆ ಆ್ಯಂಡರ್‌ಸನ್ (ಮೂಲ ಬೆಲೆ 1 ಕೋಟಿ ರೂ.) ಅವರು ಡೆಲ್ಲಿ ಡ್ಯಾರ್ ಡೆವಿಲ್ಸ್ ತಂಡದ ಪಾಲಾಗಿದ್ದಾರೆ.
ವೇಗದ ಎಸೆಗಾರ ಅನಿಕೇತ್ ಚೌಧರಿ ಅವರು 2 ಕೋಟಿ ರೂ.ಗೆ ರಾಯಲ್ ಚ್ಯಾಲೆಂಜರ್ ತಂಡದ ಪಾಲಾಗಿದ್ದಾರೆ. ಇವರ ಮೂಲ ಬೆಲೆ 10 ಲಕ್ಷ ರೂ. ಆಗಿದ್ದು 20 ಪಟ್ಟು ಹೆಚ್ಚು ಬೆಲೆಗೆ ಸೇಲಾಗಿರುವುದು ಗಮನಾರ್ಹವಾಗಿದೆ.
ಸ್ಪಿನ್ನರ್ ಕೃಷ್ಣಪ್ಪ ಗೌತಮ್ 10 ಲಕ್ಷ ರೂ.ಗಳ ತಮ್ಮ ಮೂಲ ಬೆಲೆಯ ಇಪ್ಪತ್ತು ಪಟ್ಟು ಅಧಿಕ ಬೆಲೆಯಾಗಿ 2 ಕೋಟಿ ರೂ.ಗೆ ಮುಂಬಯಿ ಇಂಡಿಯನ್ ತಂಡಕ್ಕೆ ಸೇಲಾಗಿದ್ದಾರೆ.
ತಮಿಳುನಾಡಿನ ಎಡಗೈ ವೇಗದ ಎಸೆಗಾರ ಟಿ ನಟರಾಜನ್ 3 ಕೋಟಿ ರೂ.ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಗೆ ಸೇಲಾಗಿದ್ದಾರೆ.