Advertisement
ಏನಿದು ಪ್ರಕರಣ:ನವೆಂಬರ್ 6 ರಂದು ರಮೀಂದ್ರ ಸಿಂಗ್ ಮಖಿಜಾ ಒಡೆತನದ ಮೊಬೈಲ್ ಶೋರೂಮ್ ಗೆ ಕನ್ನ ಹಾಕಿದ ಖದೀಮರು ಶೋರೂಂನಿಂದ 120ಕ್ಕೂ ಹೆಚ್ಚು ಐಫೋನ್ಗಳು ಮತ್ತು ಸುಮಾರು 150 ಹಳೆಯ ಐಫೋನ್ಗಳು, ಐಪ್ಯಾಡ್ಗಳು, ಮ್ಯಾಕ್ಬುಕ್ಗಳು ಸೇರಿದಂತೆ ಸುಮಾರು ಎರಡು ಕೋಟಿಗೂ ಅಧಿಕ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿ ಅವುಗಳನ್ನು ಮುಂಬೈ ವ್ಯಕ್ತಿಗೆ ಮಾರಾಟ ಮಾಡಿ ಬಳಿಕ ಆತ ಅವುಗಳನ್ನು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಎನ್ನಲಾಗಿದೆ.
Related Articles
Advertisement
ಪ್ರಾಥಮಿಕ ತನಿಖೆಯ ಪ್ರಕಾರ, ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಸಫಾನ್ ಖಾನ್ ಮೊಬೈಲ್ ಅಂಗಡಿ ಮಾಲೀಕ ರಮೀಂದ್ರ ಸಿಂಗ್ ಮಖಿಜಾ ಅವರ ಹಳೆಯ ಸ್ನೇಹಿತನಾಗಿದ್ದ ಎನ್ನಲಾಗಿದೆ ಈತ ನಗರದಲ್ಲಿರುವ ಮೊಬೈಲ್ ಅಂಗಡಿಗಳ ಮಾಲೀಕರ ಗೆಳೆತನ ಮಾಡಿ ಅವರ ಅಂಗಡಿಗೆ ಕನ್ನ ಹಾಕುವ ಯೋಜನೆ ಮಾಡುತ್ತಿದ್ದ ಎನ್ನಲಾಗಿದೆ. ಕದ್ದ ಮಾಲುಗಳನ್ನು ಮುಂಬೈನಲ್ಲಿರುವ ಸಮೀರ್ ಅಹಮದ್ ಶೇಖ್ ಗೆ ಮಾರಾಟ ಮಾಡುತ್ತಿದ್ದು ಆ ಬಳಿಕ ಆತ ಅದನ್ನು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಎನ್ನಲಾಗಿದೆ. ಇದೀಗ ಜೈಪುರ ಪೊಲೀಸರು ಖತರ್ನಾಕ್ ಕಳ್ಳರ ಹೆಡೆಮುರಿ ಕಟ್ಟಿದ್ದಾರೆ.