Advertisement

iPhone: ಉತ್ಪಾದನೆ 5 ಪಟ್ಟು ಹೆಚ್ಚಳ?

12:39 AM Sep 25, 2023 | Pranav MS |

ಹೊಸದಿಲ್ಲಿ: ಖ್ಯಾತ ಮೊಬೈಲ್‌ ತಯಾರಕ ಸಂಸ್ಥೆ ಆ್ಯಪಲ್‌ ಮುಂದಿನ 4-5 ವರ್ಷಗಳಲ್ಲಿ ಭಾರತದಲ್ಲಿ ತನ್ನ ಉತ್ಪಾದನೆಯನ್ನು ಐದು ಪಟ್ಟು ಹೆಚ್ಚಿಸಲು ಯೋಜಿಸಿದೆ. ಅಂದರೆ, 3.32 ಲಕ್ಷ ಕೋಟಿ ರೂ. ಮೌಲ್ಯದ ಉತ್ಪನ್ನವನ್ನು ಉತ್ಪಾದಿಸಲು ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Advertisement

ಈಗಾಗಲೇ ಭಾರತದಲ್ಲಿ ಉತ್ಪಾದನೆ ಆರಂಭಿಸಿರುವ ಆ್ಯಪಲ್‌ ಭವಿಷ್ಯದಲ್ಲಿ ಹೂಡಿಕೆಯನ್ನು ಮತ್ತಷ್ಟು ಹೆಚ್ಚಿಸುವುದಾಗಿ ಭರವಸೆ ನೀಡಿತ್ತು. ಕಳೆದ ಆರ್ಥಿಕ ವರ್ಷದಲ್ಲಿ 7 ಶತಕೋಟಿ ಡಾಲರ್‌ ಮೌಲ್ಯದ ಉತ್ಪಾದನೆಯ ಗಡಿ ದಾಟಿರುವುದಾಗಿಯೂ ತಿಳಿಸಿತ್ತು. ಇದೀಗ ಈ ಮೌಲ್ಯವನ್ನು ಮುಂದಿನ 5 ವರ್ಷದಲ್ಲಿ 40 ಶತಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿ ಹೊಂದಿದೆ. ಅಲ್ಲದೇ, ಮುಂದಿನ ವರ್ಷದಿಂದ ಆ್ಯಪಲ್‌ ಐಫೋನ್‌ಗಳು ಮಾತ್ರವಲ್ಲದೇ, ಭಾರತದಲ್ಲೇ ಆ್ಯಪಲ್‌ ಏರ್‌ಪಾಡ್‌ಗಳನ್ನೂ ಉತ್ಪಾದಿಸಲು ಸಿದ್ಧತೆ ನಡೆಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next