Advertisement

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕ ವಿಜೇತರಿಗೆ ಐಒಎ ನಗದು ಪುರಸ್ಕಾರ

09:24 PM Aug 13, 2022 | Team Udayavani |

ನವದೆಹಲಿ: ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳನ್ನು ಭಾರತೀಯ ಒಲಿಂಪಿಕ್‌ ಸಂಸ್ಥೆಯಿಂದ (ಐಒಎ) ವತಿಯಿಂದ ನಗದು ಪುರಸ್ಕಾರ ನೀಡಿ ಸಮ್ಮಾನಿಸಲಾಯಿತು.

Advertisement

ಚಿನ್ನ ಗೆದ್ದವರಿಗೆ ತಲಾ 20 ಲಕ್ಷ ರೂ., ಬೆಳ್ಳಿ ಗೆದ್ದವರಿಗೆ 10 ಲಕ್ಷ ರೂ. ಮತ್ತು ಕಂಚು ಪಡೆದವರಿಗೆ 7.5 ಲಕ್ಷ ರೂ. ನೀಡಲಾಯಿತು. ಈ ಸಮಾರಂಭದಲ್ಲಿ ಐಒಎ ಪ್ರಭಾರ ಅಧ್ಯಕ್ಷ ಅನಿಲ್‌ ಖನ್ನಾ, ಪ್ರಧಾನ ಕಾರ್ಯದರ್ಶಿ ರಾಜೀವ್‌ ಮೆಹ್ತಾ, ಕೋಶಾಧಿಕಾರಿ ಆನಂದೇಶ್ವರ್‌ ಪಾಂಡೆ ಮತ್ತು ಗೇಮ್ಸ್‌ಗೆ ಭಾರತೀಯ ತಂಡದ ಮುಖ್ಯಸ್ಥ ರಾಜೇಶ್‌ ಭಂಡಾರಿ ಉಪಸ್ಥಿತರಿದ್ದರು.

ಭಾರತೀಯ ಕ್ರೀಡಾಪಟುಗಳ ಸಾಧನೆಗೆ ಅನಿಲ್‌ ಖನ್ನಾ ಮೆಚ್ಚುಗೆ ಸೂಚಿಸಿದರು. ಶೂಟಿಂಗ್‌ ಸ್ಪರ್ಧೆ ಇಲ್ಲದಿದ್ದರೂ ಕ್ರೀಡಾಪಟುಗಳು 61 ಪದಕ ಗೆದ್ದು ನಾಲ್ಕನೇ ಸ್ಥಾನ ಪಡೆದಿರುವುದು ಶ್ರೇಷ್ಠ ಸಾಧನೆ ಎಂದವರು ಹೇಳಿದರು.

2018ರ ಗೋಲ್ಡ್‌ಕೋಸ್ಟ್‌ ಗೇಮ್ಸ್‌ನ ಶೂಟಿಂಗ್‌ನಲ್ಲಿ ಭಾರತ 16 ಪದಕ ಜಯಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next