Advertisement

ಐಐಟಿ ಮದ್ರಾಸ್‌ ಕಾರ್ಯಕ್ರಮದಲ್ಲಿ ಸಂಸ್ಕೃತ ಸ್ವಸ್ತಿ ಗೀತೆ: ವಿವಾದ

04:34 PM Feb 26, 2018 | udayavani editorial |

ಚೆನ್ನೈ : ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಮತ್ತು ಹಣಕಾಸು ಸಹಾಯಕ ಸಚಿವ ಪೊನ್‌ ರಾಧಾಕೃಷ್ಣನ್‌ ಭಾಗವಹಿಸಿದ್ದ ಐಐಟಿ ಮದ್ರಾಸ್‌ ಕಾರ್ಯಕ್ರಮದಲ್ಲಿ  ವಿದ್ಯಾರ್ಥಿಗಳು ಸಂಸ್ಕೃತ ಸ್ವಸ್ತಿ ಗೀತೆ ಹಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. 

Advertisement

ಬಂದರು, ಜಲಮಾರ್ಗ ಮತ್ತು ಕರಾವಳಿಗಳ ರಾಷ್ಟ್ರೀಯ ತಂತ್ರಜ್ಞಾನ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ದಿವಂಗತ ಕವಿ ಮುತ್ತುಸ್ವಾಮಿ ದೀಕ್ಷಿತರ್‌ ವಿರಚಿತ ಸುಪ್ರಸಿದ್ಧ  “ಮಹಾ ಗಣಪತಿಂ ಮನಸಾ ಸ್ಮರಾಮಿ’ ಸಂಸ್ಕೃತ ಗೀತೆಯನ್ನು  ಸ್ವಸ್ತಿ ಗೀತೆಯಾಗಿ ಹಾಡಿದರು. ಸಾಮಾನ್ಯವಾಗಿ ತಮಿಳು ನಾಡಿನ ಸರಕಾರಿ ಕಾರ್ಯಕ್ರಮಗಳಲ್ಲಿ “ತಮಿಳ್‌ ತಾಯಿ ವಳತ್ತು’ ಗೀತೆಯನ್ನು  ಸ್ವಸ್ತಿ ಗೀತೆಯಾಗಿ  ಹಾಡುವುದು ವಾಡಿಕೆ. 

”ಇದಕ್ಕೆ ವ್ಯತಿರಿಕ್ತವಾಗಿ ಸಂಸ್ಕೃತ ಗೀತೆಯನ್ನು ಹಾಡಲಾಗಿದೆ; ಈ ಮೂಲಕ ಕೇಂದ್ರವು ರಾಜ್ಯದಲ್ಲಿ ಸಂಸ್ಕೃತ ಮತ್ತು ಹಿಂದಿಯನ್ನು ಹೇರುತ್ತಿದೆ” ಎಂದು ಎಂಡಿಎಂಕೆ ಮುಖ್ಯಸ್ಥ ವೈಕೋ ಖಂಡಿಸಿದರು. 

ಆದರೆ ಐಐಟಿ ಮದ್ರಾಸ್‌ ಆಡಳಿತೆಯು ಸ್ಪಷ್ಟನೆ ನೀಡಿ, ಸ್ವಸ್ತಿ ಗೀತೆಯಾಗಿ ಯಾವ ಗೀತೆ ಹಾಡಬೇಕೆಂಬ ಬಗ್ಗೆ ಆಡಳಿತೆಯು ವಿದ್ಯಾರ್ಥಿಗಳಿಗೆ ಸೂಚನೆ ನೀಡುವ ಕ್ರಮವಿಲ್ಲ. ಇದು ಅವರ ಆಯ್ಕೆಯೇ ವಿನಾ ಆಡಳಿತೆಯದ್ದಲ್ಲ ಎಂದು ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next