Advertisement
ಈ ಮಾತು ಸಾಮಾನ್ಯ ಸಂದರ್ಭ ಗಳಲ್ಲಿ ಬಹುತೇಕರಿಗೆ ಹಾಸ್ಯಾಸ್ಪದ ಎನಿಸಿದ್ದಿದೆ. ಆದರೆ ಕೋವಿಡ್ ಬಿಕ್ಕ ಟ್ಟಿನ ಸಂದರ್ಭದಲ್ಲಿ ಈ ಮಾತಿನ ಹಿಂದಿನ ಮರ್ಮವೇನು ಎಂಬುದು ಅನೇಕರಿಗೆ ಅರಿವಾಗಿದೆ. ಉಳಿತಾಯ ಮಾಡಬೇಕು ಎಂಬ ಮಾತಿಗೆ ತತ್‌ಕ್ಷಣಕ್ಕೆ ಎದುರಾಗುವ ಪ್ರಶ್ನೆ, ಎಲ್ಲಿ ಉಳಿತಾಯ ಮಾಡಬೇಕು?, ಎಷ್ಟು ಉಳಿತಾಯ ಮಾಡಬೇಕು? ಎಂಬುದು. ತಿಂಗಳ ಆದಾಯದ ಶೇ.20ರಷ್ಟನ್ನಾದರೂ ನಿಶ್ಚಿತವಾಗಿ ಉಳಿತಾಯ ಮಾಡಲು ಸಾಧ್ಯವಾದರೆ ಒಳ್ಳೆಯದು ಎನ್ನುತ್ತಾರೆ ತಜ್ಞರು.
ಹಣವನ್ನು ಠೇವಣಿ ರೂಪದಲ್ಲಷ್ಟೇ ಇರಿಸಿದರೆ ಕಾಲಕ್ರಮೇಣ ಹಣದ ಮೌಲ್ಯವೇ ಕಡಿಮೆ ಆಗಿ ಬಿಡ ಬಹುದು. ಹಾಗಾಗಿ ಹಣದುಬ್ಬರ ಪ್ರಮಾಣಕ್ಕಿಂತ ಹೆಚ್ಚಿನ ಲಾಭ ತಂದು ಕೊಡುವ ಸಾಮರ್ಥ್ಯವಿರುವ ಈಕ್ವಿಟಿಗ ಳಲ್ಲಿ ಹೂಡಿಕೆ ಮಾಡುವುದು ಉತ್ತಮ. ವಯಸ್ಸನ್ನು ಆಧರಿಸಿ ಹೂಡಿಕೆ
ಸದಾ ಏರಿಳಿತ ಕಾಣುವ ಷೇರು ಮಾರುಕಟ್ಟೆಯಲ್ಲಿ ಎಷ್ಟು ಹಣ ಹೂಡಿಕೆ ಮಾಡುವುದು ಸೂಕ್ತ ಎಂಬುದು ಸಾಮಾನ್ಯ ಪ್ರಶ್ನೆ. ಇದು ವ್ಯಕ್ತಿಯ ವಯಸ್ಸನ್ನು ಆಧರಿಸಿರುತ್ತದೆ. ವ್ಯಕ್ತಿಯ ಈಗಿನ ವಯಸ್ಸನ್ನು 100ರಿಂದ ಕಳೆದಾಗ ಎಷ್ಟು ಮೊತ್ತ ಸಿಗುತ್ತದೆಯೋ, ಅಷ್ಟು ಪ್ರಮಾಣದ ಹಣವನ್ನು ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ. ಉದಾಹರಣೆಗೆ ವ್ಯಕ್ತಿಯೊಬ್ಬನಿಗೆ ಈಗ 30 ವರ್ಷ ವಯಸ್ಸು ಎಂದಾದಲ್ಲಿ, ಆತ ತನ್ನ ಒಟ್ಟು ಉಳಿತಾಯದಲ್ಲಿ ಶೇ.70ರಷ್ಟನ್ನು ಈಕ್ವಿಟಿಗಳ ಮೇಲೆ ಹೂಡಿಕೆ ಮಾಡಬಹುದು.
Related Articles
Advertisement
ನೇರ ಹೂಡಿಕೆ ಎಚ್ಚರ ಅಗತ್ಯಹಣಕಾಸು ಸೇವೆಗಳನ್ನು ಒದಗಿಸುತ್ತಿರುವ ಕೆಲವು ಆ್ಯಪ್ ಅತ್ಯಂತ ಸುಲಭವಾಗಿ, ಮನೆ ಯಲ್ಲಿ ಕುಳಿತೇ ಡಿಮ್ಯಾಟ್ ಖಾತೆ ತೆರೆ ಯುವ, ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡುವ ಸೌಲಭ್ಯ ನೀಡುತ್ತಿವೆ. ಇದು ನೇರ ವಾಗಿ ಷೇರುಗಳಲ್ಲಿ ಹೂಡಿಕೆ ಮಾಡುವ ಆಸೆಯನ್ನು ಹಲವರಲ್ಲಿ ಹುಟ್ಟಿಸಬಹುದು. ಆದರೆ ಕಂಪೆನಿಗಳ ಶಕ್ತಿ-ದೌರ್ಬಲ್ಯಗಳನ್ನು ಖು¨ªಾಗಿ ಅರ್ಥ ಮಾಡಿ ಕೊಳ್ಳುವ ಶಕ್ತಿ ಇಲ್ಲದಿದ್ದರೆ ಷೇರುಗಳಲ್ಲಿ ನೇರ ಹೂಡಿಕೆ ಬೇಡವೇ ಬೇಡ. ಮ್ಯೂಚುವಲ್ ಫಂಡ್‌ಗಳ ಮೂಲಕ ಷೇರುಗಳಲ್ಲಿ ಹೂಡಿಕೆ ಹೆಚ್ಚು ಸುರಕ್ಷಿತ. ಮ್ಯೂಚುವಲ್ ಫಂಡ್‌ಗಳನ್ನು ನಿರ್ವಹಿಸುವವರು, ಪ್ರತೀ ಕಂಪೆನಿಯ ಶಕ್ತಿ- ದೌರ್ಬಲ್ಯಗಳನ್ನು ಅರ್ಥ ಮಾಡಿಕೊಂಡು ಹಣ ಹೂಡಿಕೆ ಮಾಡಿ ಗರಿಷ್ಠ ಲಾಭವನ್ನು ತಂದು ಕೊಡುವ ಹೊಣೆ ಹೊತ್ತಿ ರುತ್ತಾರೆ. ಹಾಗಾಗಿ ಷೇರು ಮಾರುಕಟ್ಟೆಯ ಏರಿಳಿತಗಳ ಅರಿವು ಇಲ್ಲ ದವರಿಗೆ ನೇರವಾಗಿ ಷೇರು ವಹಿವಾಟು ಸೂಕ್ತ ವಲ್ಲ ಎಂಬುದು ತಜ್ಞರ ಕಿವಿಮಾತು.