Advertisement

BJPಯ ಎಲ್ಲ ಹಗರಣಗಳ ತನಿಖೆ: M.B. ಪಾಟೀಲ್‌

01:08 AM Jun 04, 2023 | Team Udayavani |

ಕೊಪ್ಪಳ: ಹಿಂದಿನ ಬಿಜೆಪಿ ಸರಕಾರದ ಅವಧಿ ಯಲ್ಲಿ ನಡೆದಿರುವ ಎಲ್ಲ ಹಗರಣಗಳನ್ನು ತನಿಖೆ ಮಾಡಲಾಗುವುದು ಎಂದು ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್‌ ಹೇಳಿದರು.

Advertisement

ನಗರದ ಗವಿಮಠಕ್ಕೆ ಭೇಟಿ ನೀಡಿ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳಿಂದ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಚುನಾವಣ ಪೂರ್ವದಲ್ಲಿ ನಾವು ಹೇಳಿದಂತೆ ಬಿಜೆಪಿಯ 40 ಪರ್ಸೆಂಟ್‌ ಹಗರಣ, ಕೋವಿಡ್‌ ವೇಳೆ ಹಗರಣ ಹಾಗೂ ಪಿಎಸ್‌ಐ ಹಗರಣವನ್ನು ನಿಶ್ಚಿತವಾಗಿ ತನಿಖೆ ಮಾಡುತ್ತೇವೆ. ಪ್ರಸ್ತುತ ಗ್ಯಾರಂಟಿ ಯೋಜನೆಗಳ ಬಗ್ಗೆ ಒತ್ತು ನೀಡಿದ್ದೇವೆ. ಇನ್ನೂ ಸಮಯವಿದೆ. ಅವರ ಎಲ್ಲ ಹಗರಣ ತನಿಖೆ ಮಾಡಲಿದ್ದೇವೆ ಎಂದರು.

ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅವರಿಗೆ ಪ್ರಹ್ಲಾದ ಜೋಶಿ ವಿರುದ್ಧ ಎಂಪಿ ಟಿಕೆಟ್‌ ನೀಡುವ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು. ಶೆಟ್ಟರ್‌ ಸೇರಿದಂತೆ ಸವದಿ ಅವರಿಗೂ ಪಕ್ಷ ಸೂಕ್ತ ಸ್ಥಾನಮಾನ ಕೊಟ್ಟೇ ಕೊಡುತ್ತದೆ. ಅದರಲ್ಲಿ ಎರಡು ಮಾತಿಲ್ಲ. ಗ್ಯಾರಂಟಿ ಯೋಜನೆಗಳನ್ನು ಗ್ಯಾರಂಟಿಯಾಗಿ ಜಾರಿ ಮಾಡಲಿದ್ದೇವೆ. ವಾರ್ಷಿಕ ವಿದ್ಯುತ್‌ ಬಳಕೆ ಮಾಡುವ ಆಧಾರದಲ್ಲಿ ಅವರಿಗೆ 200 ಯೂನಿಟ್‌ ಉಚಿತ ವಿದ್ಯುತ್‌ ಕೊಡುತ್ತಿದ್ದೇವೆ. ಇದನ್ನು ಕೆಲವರು ಗೊಂದಲ ಮಾಡುತ್ತಿದ್ದಾರೆ. ಇದರಿಂದ ಅವರಿಗೇನೂ ಪ್ರಯೋಜನ ಆಗಲ್ಲ ಎಂದರು.

ಸಿಎಂ ಆಯ್ಕೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್‌ ಸಿದ್ದರಾಮಯ್ಯ ಸಿಎಂ, ಡಿ.ಕೆ.ಶಿವಕುಮಾರ ಡಿಸಿಎಂ ಎಂದು ಸ್ಪಷ್ಟವಾಗಿ ಹೇಳಿದೆ. ಅದನ್ನೇ ನಾನು ಸಿದ್ದರಾಮಯ್ಯ ಪೂರ್ಣಾವಧಿ  ಮುಖ್ಯಮಂತ್ರಿ ಆಗಲಿದ್ದಾರೆ ಎಂದಿದ್ದೇನೆ ಅಷ್ಟೇ. ಜಿಲ್ಲೆಯಲ್ಲಿ ಕೈಗಾರಿಕೆಗಳಿಂದ ಧೂಳು ಹೊರ ಸೂಸುವುದು ಹಾಗೂ ಜನ, ಜಾನುವಾರುಗಳಿಗೆ ಹಾನಿ ಕುರಿತು ಅ ಧಿಕಾರಿಗಳ ಜತೆ ಮಾತನಾಡುತ್ತೇನೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿ ಕಾರಿಗಳಿಗೂ ಈ ಬಗ್ಗೆ ಸೂಚನೆ ನೀಡುತ್ತೇನೆ. ರಾಜ್ಯದಲ್ಲಿ ಯಾವ ಕೈಗಾರಿಕೆಗಳು ಭೂಮಿಯನ್ನು ಪಡೆದು ಬಳಕೆ ಮಾಡಿಲ್ಲವೋ ಅದೆಲ್ಲವನ್ನು ಮಾಹಿತಿ ತರಿಸಲು ಅ ಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜೂ.10ರೊಳಗಾಗಿ ಮಾಹಿತಿ ನೀಡಲು ಸೂಚನೆ ನೀಡಿದ್ದು, ಯಾರು ಭೂಮಿ ಬಳಕೆ ಮಾಡಿಲ್ಲ ಎನ್ನುವ ಕುರಿತು ಪ್ರತಿ ಕೇಸ್‌ ಬಗ್ಗೆ ಅಧ್ಯಯನ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next