Advertisement
ದೇಶದ ತನಿಖಾ ವ್ಯವಸ್ಥೆಯಲ್ಲಿ ಸ್ವಾಯತ್ತ ಮತ್ತು ಅತ್ಯುನ್ನತ ತನಿಖಾ ಸಂಸ್ಥೆಯಾ ಗಿರುವ ಸಿಬಿಐನಲ್ಲಿ ಪ್ರಕರಣಗಳ ವಿಲೇವಾರಿ ಇಷ್ಟೊಂದು ವಿಳಂಬಗತಿಯಲ್ಲಿ ಸಾಗುತ್ತಿ ರುವುದು ಯಾರಿಗೂ ಶೋಭೆಯಲ್ಲ. ದೇಶದ ಯಾವುದೇ ರಾಜ್ಯದಲ್ಲಿ ಭ್ರಷ್ಟಾಚಾರದ ಬೃಹತ್ ಪ್ರಕರಣಗಳು ವರದಿಯಾದಾಗಲೆಲ್ಲ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸ ಬೇಕೆಂಬ ಆಗ್ರಹ ಕೇಳಿಬರುತ್ತದೆ.
Related Articles
Advertisement
ಈ ಕಾರಣದಿಂದಾಗಿಯೇ ಸಿಬಿಐ ಕೂಡ ಭ್ರಷ್ಟರು ಮತ್ತು ಅಪರಾಧಿಗಳ ಪಾಲಿಗೆ ಬೆದರು ಗೊಂಬೆಯಾಗಿ ಮಾರ್ಪಡುವಂತಾಗಿದೆ. ತ್ವರಿತಗತಿಯಲ್ಲಿ ತನಿಖಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದರ ಜತೆಯಲ್ಲಿ ಅಪರಾಧಿಗೆ ಶೀಘ್ರ ಶಿಕ್ಷೆಯಾಗಬೇಕು ಎಂಬ ಉದ್ದೇಶದಿಂದ ಪ್ರಕರಣಗಳನ್ನು ಸಿಬಿಐಗೆ ವಹಿಸುತ್ತ ಬರಲಾಗುತ್ತಿದೆಯಾದರೂ ಸಿಬಿಐ ಇಷ್ಟೊಂದು ಭಾರೀ ಸಂಖ್ಯೆಯ ಪ್ರಕರಣಗಳನ್ನು ಬಾಕಿ ಉಳಿಸಿಕೊಂಡಿರುವುದನ್ನು ನೋಡಿದಾಗ ಜನರ ನಿರೀಕ್ಷೆ ಹುಸಿಯಾದಂತೆ ತೋರುತ್ತಿದೆ.
ದಶಕದ ಹಿಂದೆ ಸಿಬಿಐ ಸಾಕಷ್ಟು ವಿವಾದಕ್ಕೀಡಾಗಿತ್ತಲ್ಲದೆ ಆಡಳಿತಾರೂಢ ಪಕ್ಷಗಳು ಸಿಬಿಐಯನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊ ಳ್ಳುತ್ತಿದ್ದು ಅದು ಪಂಜರದ ಗಿಣಿಯಾಗಿ ಮಾರ್ಪಟ್ಟಿದೆ ಎಂದು ಸುಪ್ರೀಂ ಕೋರ್ಟ್ ಕಟು ಮಾತಿನಲ್ಲಿ ಸಿಬಿಐ ಕಾರ್ಯವೈಖರಿಯ ಬಗೆಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಆದರೆ ಈಗ ಸಿಬಿಐ ತನ್ನ ನಿಧಾನಗತಿಯ ತನಿಖಾ ಪ್ರಕ್ರಿಯೆಯಿಂದ ಸುದ್ದಿಯಲ್ಲಿದೆ.
ಸಿಬಿಐ ಮೇಲಣ ಜನರ ವಿಶ್ವಾಸವನ್ನು ವೃದ್ಧಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ತತ್‌ಕ್ಷಣ ಕಾರ್ಯಪ್ರವೃತ್ತವಾಗಬೇಕಿದೆ. ಸಿಬಿಐಗೆ ಅಗತ್ಯ ಸಂಖ್ಯೆಯ ಸಿಬಂದಿಯನ್ನು ನೇಮಿಸುವುದರ ಜತೆಯಲ್ಲಿ, ತ್ವರಿತಗತಿಯ ನ್ಯಾಯಾಲಯಗಳನ್ನು ಸ್ಥಾಪಿಸಿ, ಪ್ರಕರಣಗಳ ಕ್ಷಿಪ್ರ ವಿಲೇವಾರಿಗೆ ಅನುವು ಮಾಡಿಕೊಡಬೇಕು. ಇದೇ ವೇಳೆ ರಾಜ್ಯ ಸರಕಾರಗಳು ಕೂಡ ಸಿಬಿಐಗೆ ಒಪ್ಪಿಸಲಾಗುವ ಪ್ರಕರಣಗಳ ತನಿಖೆಗೆ ಪೂರ್ಣ ಪ್ರಮಾಣದ ಸಹಕಾರ ನೀಡಬೇಕು. ಸಿಬಿಐ ಕೂಡ ತನ್ನ ಹೊಣೆಗಾರಿಕೆ ಮತ್ತು ಜನತೆ ತನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಒಂದಿಷ್ಟು ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು. ಇವೆಲ್ಲವೂ ಸಾಧ್ಯವಾದಾಗ ಮಾತ್ರ ಸಿಬಿಐ ತನ್ನ ಗತವೈಭವವನ್ನು ಕಂಡುಕೊಳ್ಳಲು ಸಾಧ್ಯ.