Advertisement

Investigation: ಗೆಳೆಯನನ್ನು ಸಿಲುಕಿಸಲು ಬಾಲಕನಿಂದ ಟ್ವೀಟ್‌ ಬಾಂಬ್‌!

03:57 AM Oct 17, 2024 | Team Udayavani |

ಹೊಸದಿಲ್ಲಿ: ಕೇವಲ 3 ದಿನಗಳ ಅವಧಿಯಲ್ಲಿ ದೇಶದ ಸುಮಾರು 20 ಅಂತಾರಾಷ್ಟ್ರೀಯ ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ ಸಂದೇಶ ಬಂದಿದ್ದು ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. 4 ಕರೆಗಳ ಹಿಂದಿನ ಆರೋಪಿ ಪತ್ತೆಯಾಗಿದ್ದು, ತನಿಖೆ ಆರಂಭಿಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು.

Advertisement

ಏಕೆಂದರೆ ಈ ಕರೆಗಳನ್ನು ಮಾಡಿದ್ದು ಛತ್ತೀಸ್‌ಗಢದ ರಾಜ್‌ನಂದ್‌ಗಾವ್‌ನ ಅಪ್ರಾಪ್ತ ವಯಸ್ಕ. ಆತ ತನ್ನ ಗೆಳೆಯನ ಮೇಲಿನ ದ್ವೇಷಕ್ಕೆ ಈ ಕೃತ್ಯ ಎಸಗಿರುವುದಾಗಿ ಹೇಳಿದ್ದಾನೆ! 11ನೇ ತರಗತಿ ಅರ್ಧಕ್ಕೇ ಬಿಟ್ಟಿರುವ ಈತ ಗೆಳೆಯನೊಂದಿಗೆ ಹಣದ ವಿಚಾರವಾಗಿ ಜಗಳವಾಡಿದ್ದು, ಬಳಿಕ ಆತನನ್ನು ಹುಸಿ ಬಾಂಬ್‌ ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶದಿಂದ ಆತನ ಹೆಸರಲ್ಲಿ ಟ್ವೀಟರ್‌ ಖಾತೆ ತೆರೆದು ಅ. 14ರಂದು ನ್ಯೂಯಾರ್ಕ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ, ಮಸ್ಕತ್‌ಗೆ ಹೊರಟಿದ್ದ 2 ಹಾಗೂ ಜೆಡ್ಡಾಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್‌ ಇರುವುದಾಗಿ ಸಂದೇಶ ಕಳುಹಿಸಿದ್ದ.

ಇನ್ನೂ ಕೆಲವು ಪ್ರಕರಣಗಳು ದಾಖ ಲಾಗಿದ್ದು, ಡಾರ್ಕ್‌ವೆಬ್‌ ಮೂಲಕ ಈ ಕೃತ್ಯ ನಡೆಸಲಾಗುತ್ತಿದೆ; ಕೆಲವು ಆರೋಪಿಗಳನ್ನು ಗುರುತಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next