Advertisement

ಮರೋಳ ನೀರಾವರಿ ಯೋಜನೆ ತನಿಖೆ ನಡೆಸಿ

06:00 PM Jan 01, 2022 | Team Udayavani |

ಹುನಗುಂದ: ಮರೋಳ ಏತ ನೀರಾವರಿ ಎರಡನೆಯ ಹಂತದ ಹನಿ ನೀರಾವರಿ ಯೋಜನೆ ಸಂಪೂರ್ಣ ವಿಫಲವಾಗಿದೆ. ಅದಕ್ಕೆ ಮರುಜೀವ ನೀಡಲು ಕಾಮಗಾರಿಯ ಸಂಪೂರ್ಣ ತನಿಖೆ ಮಾಡಿಸುವಂತೆ ಬೆಳಗಾವಿ ಅಧಿವೇಶನದಲ್ಲಿ ಸಿಎಂ ಮತ್ತು ನೀರಾವರಿ ಸಚಿವರಿಗೆ ಒತ್ತಾಯಿಸಲಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

Advertisement

ಶುಕ್ರವಾರ ಪಟ್ಟಣದ ಬಸವ ಮಂಟಪದಲ್ಲಿ ರೈತರ ಸಹಭಾಗಿತ್ವದೊಂದಿಗೆ ಹಮ್ಮಿಕೊಂಡಿದ್ದ ಜೈವಿಕ ಇಂಧನ ಉತ್ಪಾದನೆ ಹಾಗೂ ಸಾವಯವ ಕೃಷಿ ಕಾರ್ಯಾಗಾರ ಮತ್ತು ಸದಸ್ಯತ್ವ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಜೈವಿಕ ಇಂಧನ ಉತ್ಪಾದನೆಯಲ್ಲಿ ತೊಡಗಿಕೊಳ್ಳುವುದು ಅವಶ್ಯವಿದೆ. ಅದರ ಜತೆಗೆ ಸಾವಯವ ಕೃಷಿಯ ಕಡೆಗೆ ರೈತರು ಹೆಚ್ಚಿನ ಒಲವು ತೋರಬೇಕಿದೆ.

ಕಬ್ಬು ವಾರ್ಷಿಕ ಬೆಳೆಯಾಗಿದ್ದು, ತಾಲೂಕಿನ ರೈತರು ಕಬ್ಬು ಹೆಚ್ಚಾಗಿ ಬೆಳೆಯಲು ಹೊರಟಿರುವ ಇದರ ಫಸಲಿಗೆ ವರ್ಷಗಟ್ಟಲೆ ಕಾಯಬೇಕಾದ ಸ್ಥಿತಿಯಿದೆ. ಅದಕ್ಕೆ ಪರ್ಯಾಯವಾಗಿ ಅಲ್ಪಾವಧಿ ಬೆಳೆಯಾದ ನೇಪಿಯರ್‌ ಹುಲ್ಲು ಬೆಳೆಸುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು ಎಂದರು.

ರೈತರ ಆದಾಯ ಹೆಚ್ಚಿಸುವ ಮತ್ತು ವಿನೂತನ ಬೆಳೆಯನ್ನು ಉತ್ಪಾದನೆಯ ಉದ್ದೇಶದಿಂದ ಎಂಸಿಎಲ್‌ ಮತ್ತು ಎಂಪಿಒ ಕಂಪನಿ ಸಹಭಾಗಿತ್ವದಲ್ಲಿ ಕಂಪನಿ ಪ್ರಾರಂಭಿಸುತ್ತಿದೆ. ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕಂಪನಿಯ ಸದಸ್ಯತ್ವ ಪಡೆಯುವ ಮೂಲಕ ನೇಪಿಯರ್‌ ಹುಲ್ಲು ಬೆಳೆಸಿ ಆದಾಯವನ್ನು ಹೆಚ್ಚಿಸಿಕೊಳ್ಳುವ ಮೂಲಕ 2030ರ ವೇಳೆಗೆ ದೇಶದ ಪ್ರತಿಯೊಬ್ಬರು ಸ್ವಾವಲಂಬಿ ಜೀವನ ಸಾಗಿಸುವಂತಾಗಲಿ ಎಂದರು.

ಎಂಸಿಎಲ್‌ ಮತ್ತು ಎಂಪಿಒ ಮುಖ್ಯಸ್ಥ ಡಾ| ಎಂ.ಜೆ.ಗೌಡರ ಮಾತನಾಡಿ, ನೇಪಿಯರ್‌ ಹುಲ್ಲು ಬೆಳೆಯು ರೈತರ ಅದಾಯದಲ್ಲಿ ದುಪ್ಪಟ್ಟು ಮಾಡುವ ಬೆಳೆ ಇದಾಗಿದೆ.ಎಕರೆ 120ರಿಂದ 150 ಟನ್‌ ಬೆಳೆಯಬಹುದು. ರೈತರಿಗೆ ಆದಾಯ ಹೆಚ್ಚಿಸಬಹುದು. ಈ ಬೆಳೆಗೆ ಕಂಪನಿಯಿಂದ ಬೀಜ, ಗೊಬ್ಬರ ಪೂರೈಸಿ ಅದಕ್ಕೆ ತಾಂತ್ರಿಕ ಸಲಹೆ ನೀಡಲಾಗುವುದು ಎಂದರು.

Advertisement

ಚಿತ್ತರಗಿ ಸಂಸ್ಥಾನಮಠ ಇಳಕಲ್ಲದ ಗುರುಮಹಾಂತ ಶ್ರೀ ಮತ್ತು ಶಿರೂರದ ಮಹಾಂತ ತೀರ್ಥದ ಡಾ| ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತೋಟಗಾರಿಕೆ ಇಲಾಖೆ ಕುಲಪತಿ ಡಾ| ಕೆ.ಎಂ.ಇಂದಿರೇಶ, ತೋಟಗಾರಿಕೆ ವಿವಿಯ ಶಿಕ್ಷಣ ನಿರ್ದೇಶಕ ಡಾ| ಎಂ.ಎಸ್‌.ಕುಲಕರ್ಣಿ, ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಡಾ| ಎಸ್‌. ಶಶಿಕುಮಾರ, ಡಾ| ಭಾರತಿ ಮೇಟಿ, ಗುರುಲಿಂಗಪ್ಪ ಬಗಲಿ, ಕೃಷಿ ಎ.ಡಿ. ಸಿದ್ದಣ್ಣ ಪಟ್ಟಿಹಾಳ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next