Advertisement
ನಿಮಗಿರುವ ಕಡಿಮೆ ಸಂಬಳದಲ್ಲಿಯೂ ನೀವು ಕೋಟ್ಯಾಧಿಪತಿ ಆಗಬಹುದು. ಹೌದು ಸರ್ಕಾರವು ನಿಮಗೊಂದು ಉತ್ತಮವಾದ ಒಂದು ಅವಕಾಶವನ್ನು ಒದಗಿಸಿಕೊಡುತ್ತಿದೆ. ಎನ್ ಪಿ ಎಸ್ ಯೋಜನೆ ಆರಂಭಿಸಿದೆ. ಇದರಿಂದ ಜನರು ಸ್ವಲ್ಪ ಹಣವನ್ನು ಠೇವಣಿ ಮಾಡುವುದರ ಮೂಲಕ ನಿವೃತ್ತಿ ಹೊಂದಿದ ನಂತರ ಈ ಹಣವನ್ನು ಮರಳಿ ಪಡೆಯಬಹುದಾಗಿದೆ.
Related Articles
Advertisement
ಈಗ ನೀವು ಎನ್ ಪಿಎಸ್ ಮೂಲಕ ಕೋಟ್ಯಾಧಿಪತಿಯಾಗಲು ಬಯಸಿದರೆ, ಸುಲಭ ಮಾರ್ಗವಿದೆ. ಸ್ವಲ್ಪ ನಾವು ಸ್ಮಾರ್ಟ ಆಗಿ ಇರುವುದು ಕೂಡ ಅಗತ್ಯವಿದೆ.
ನಿಮಗೆ 20 ವರ್ಷ ವಯಸ್ಸಾಗಿದೆ ಎಂದು ಭಾವಿಸೋಣ. ನೀವು ದಿನಕ್ಕೆ 74 ರೂಗಳನ್ನು ಉಳಿಸುವ ಮೂಲಕ ಎನ್ ಪಿ ಎಸ್ ನಲ್ಲಿ ಹೂಡಿಕೆ ಮಾಡಿದರೆ, ಅಂದರೆ ತಿಂಗಳಿಗೆ 2230 ರೂಗಳನ್ನು ಠೇವಣಿ ಹೂಡಿದರೇ, ನೀವು ಇದನ್ನು ಮಾಡಲು ಹಿಂಜರಿಯಬೇಕೆಂದಿಲ್ಲ. ಇದರಿಂದ ಈಗ ನಿಮಗೆ ಶೇಕಡಾ. 9 ರಷ್ಟು ಲಾಭ ಪಡೆಯಬಹುದು. ಆದ್ದರಿಂದ ನೀವು ನಿವೃತ್ತರಾದಾಗ, ನಿಮ್ಮ ಒಟ್ಟು ಪಿಂಚಣಿ ಸಂಪತ್ತು 1.03 ಕೋಟಿ ರೂಪಾಯಿ ಆಗಿರುತ್ತದೆ.
ಓದಿ : ದೇಶದಲ್ಲಿ ಕೋವಿಡ್ ಮಹಾಸ್ಪೋಟ : 24 ಗಂಟೆಗಳಲ್ಲಿ 3 ಲಕ್ಷ ದಾಟಿದ ಪ್ರಕರಣಗಳು
ಇನ್ನು, ನೀವು ಈ ಎಲ್ಲಾ ಹಣವನ್ನು ಒಮ್ಮೆಗೇ ಹಿಂಪಡೆಯಲು ಸಾಧ್ಯವಿಲ್ಲ, ನೀವು ಅದರಲ್ಲಿ ಶೇ.60 ರಷ್ಟು ಹಿಂಪಡೆಯಬಹುದು, ಉಳಿದ ಶೇಕಡಾ. 40 ರಷ್ಟು ವರ್ಷಾಶನ ಯೋಜನೆಯಲ್ಲಿ ಹಾಕಬೇಕು, ಇದರಿಂದ ನೀವು ಪ್ರತಿ ತಿಂಗಳು ಪಿಂಚಣಿ ಪಡೆಯಬಹುದಾಗಿದೆ.
ಓದಿ : ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಂಸದ ಎಸ್.ಬಿ. ಸಿದ್ನಾಳ್ ನಿಧನ