Advertisement

ಇಂಟ್ರೂಡೆರ್‌ ರೈಡ್‌ ಕಂಫ‌ರ್ಟ್‌

12:15 PM Jan 29, 2018 | Team Udayavani |

ವಿನ್ಯಾಸದಲ್ಲಿ ಯಾವುದೇ ಬೈಕ್‌ಗಳಿಗೆ ಸವಾಲೊಡ್ಡಬಲ್ಲ ಇಂಟ್ರೂಡೆರ್‌ 155ಸಿಸಿ ಸಾಮರ್ಥ್ಯ ಹೊಂದಿದೆ. ಇಂಟ್ರೂಡೆರ್‌ ಪರಿಚಯಿಸುವ ಮೂಲಕ 155ಪ್ಲಸ್‌ ಕ್ರೂಸರ್‌ ಸೆಗೆ¾ಂಟ್‌ ಬೈಕ್‌ಗಳ ತಯಾರಿಕೆಗೆ ಇದೇ ಮೊದಲ ಬಾರಿಗೆ ಪ್ರವೇಶಿಸಿರುವ ಸುಜುಕಿ ಕಂಪನಿ ತನ್ನತನ ಉಳಿಸಿಕೊಳ್ಳುವ ಪಯತ್ನ ನಡೆಸಿದೆ. 

Advertisement

ಬೈಕ್‌, ಸ್ಕೂಟರ್‌ ಕೊಳ್ಳಬೇಕಾದ ಸಂದರ್ಭದಲ್ಲಿ ಸಾಮಾನ್ಯವಾಗಿ ಬೆಲೆಗಿಂತಲೂ ವಾಹನ ಕೊಳ್ಳುವವರ ಅಭಿರುಚಿಗೇ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತದೆ. ಬಜೆಟ್‌ ಆಧರಿಸಿ ಅವರ ಆಯ್ಕೆ ಯಾವುದೆನ್ನುವುದು ನಿರ್ಧಾರವಾಗಲಿದೆ. ಗ್ರಾಹಕನ ಅಪೇಕ್ಷೆಯಂತೆ ಹಲವು ಬದಲಾವಣೆಯೊಂದಿಗೆ ಆಗಾಗ ಹೊಸ ಬೈಕ್‌ಗಳು ಪರಿಚಯವಾಗುತ್ತಲೇ ಇರುತ್ತವೆ. ಹೀಗೆ ಮರುಜೀವ ಪಡೆದಿರುವ ಬೈಕ್‌ಗಳ ಸಾಲಿನಲ್ಲಿ ಈಗ ಸುಜುಕಿ ಕಂಪನಿಯ ಇಂಟ್ರೂಡೆರ್‌ ಕೂಡ ಒಂದು.

ವಿನ್ಯಾಸದಲ್ಲಿ ಯಾವುದೇ ಬೈಕ್‌ಗಳಿಗೆ ಸವಾಲೊಡ್ಡಬಲ್ಲ ಇಂಟ್ರೂಡೆರ್‌ 155ಸಿಸಿ ಸಾಮರ್ಥ್ಯ ಹೊಂದಿದೆ. ಇಂಟ್ರೂಡೆರ್‌ ಪರಿಚಯಿಸುವ ಮೂಲಕ 155ಪ್ಲಸ್‌ ಕ್ರೂಸರ್‌ ಸೆಗೆ¾ಂಟ್‌ ಬೈಕ್‌ಗಳ ತಯಾರಿಕೆಗೆ ಇದೇ ಮೊದಲ ಬಾರಿಗೆ ಪ್ರವೇಶಿಸಿರುವ ಸುಜುಕಿ ಕಂಪನಿ ತನ್ನತನ ಉಳಿಸಿಕೊಳ್ಳುವ ಪಯತ್ನ ನಡೆಸಿದೆ. ಜನಪ್ರಿಯತೆ ಗಳಿಸಿದ ಗಿಕ್ಸರ್‌ ಬೈಕ್‌ನಲ್ಲಿ ಬಳಸಲಾದ ಎಂಜಿನ್‌ನಲ್ಲಿಯೇ ಸಣ್ಣಪುಟ್ಟ ಬದಲಾವಣೆ ಮಾಡಿ ಇಂಟ್ರೂಡೆರ್‌ ಬೈಕ್‌ ಅನ್ನು ರಸ್ತೆಗಿಳಿಸಲಾಗಿದೆ.

ಅಷ್ಟಕ್ಕೂ ಇಂಟ್ರೂಡೆರ್‌ಗೆ ಬ್ರ್ಯಾಂಡ್‌ ಸೃಷ್ಟಿ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. 1985ರಲ್ಲಿಯೇ ತಯಾರಿಕೆ ಆರಂಭಿಸಿದ್ದ ಸುಜುಕಿ 2005ರ ತನಕವೂ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿ ಇರುವಂತೆ ನೋಡಿಕೊಂಡು ಬಂದಿತ್ತು. ಈ ಅವಧಿಯಲ್ಲಿ ಹಲವು ಬಾರಿ ವಿನ್ಯಾಸದಲ್ಲಿ ಬದಲಾವಣೆ ಮಾಡಿದೆ.  ಆ ನಂತರದ ದಿನಗಳಲ್ಲಿ ತಯಾರಿಕೆ ನಿಲ್ಲಿಸಿದ್ದ ಸುಜುಕಿ ಕಂಪೆನಿ ಈಗ ಮತ್ತೆ ಭಾರತೀಯ ಗ್ರಾಹಕನ ಮನೆ ಬಾಗಿಲು ತಟ್ಟುತ್ತಿದೆ.  ಇಂಟ್ರೂಡೆರ್‌ ಬೈಕ್‌, ಗ್ಲಾಸ್‌ ಸ್ಪಾರ್ಕ್‌ ಬ್ಲ್ಯಾಕ್‌ ಹಾಗೂ ಮೆಟಾಲಿಕ್‌ ಒರ್ಟ್‌ ಗ್ರೇ ಹಾಗೂ ಮೆಟಾಲಿಕ್‌ ಬ್ಲ್ಯಾಕ್‌ ಬಣ್ಣಗಳಲ್ಲಿ ಲಭ್ಯವಿದೆ.

ಪವರ್‌ಫ‌ುಲ್‌ ಎಂಜಿನ್‌
4ಸ್ಟ್ರೋಕ್‌ ಸಿಂಗಲ್‌ ಸಿಲಿಂಡರ್‌ ಎಂಜಿನ್‌ನ 5ಸ್ಪೀಡ್‌ ಗೇರ್‌ಬಾಕ್ಸ್‌ ಹೊಂದಿರುವ ಇಂಟ್ರೂಡೆರ್‌ 14.59ಬಿಎಚ್‌ಪಿ ಪವರ್‌ ಹಾಗೂ 14ಎನ್‌ಎಂ ಟಾರ್ಕ್‌ನೊಂದಿಗೆ 155ಸಿಸಿ ಸಾಮರ್ಥ್ಯ ಹೊಂದಿದೆ. ಏರ್‌ಕೂಲ್ಡ್‌ ಎಂಜಿನ್‌ ಅಳವಡಿಸಿರುವುದರಿಂದ ಸಹಜವಾಗಿ ಎಂಜಿನ್‌ ಸಲೀಸಾಗಿ ಕಾರ್ಯನಿರ್ವಹಿಸುತ್ತದೆ.

Advertisement

ಅತ್ಯಾಧುನಿಕ ಸುರಕ್ಷತೆ
ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ ಅಳವಡಿಸಲಾಗಿದೆ.  ಬ್ರೇಕ್‌ ಬಳಕೆ ಮಾಡುವಾಗ ಜಾಗ್ರತೆ ಬಹಳ ಮುಖ್ಯ. ಇದಲ್ಲದೇ, ಎಬಿಎಸ್‌ ವ್ಯವಸ್ಥೆ ಕೂಡ ಹೊಂದಿದೆ. ಮುಂಭಾಗದ ಸಸ್ಪೆನನ್‌ ಟೆಲಿಸ್ಕಾಪಿಕ್‌ ಆಗಿದ್ದು, ಹಿಂಭಾಗದಲ್ಲಿ ಸ್ವಿಂಗ್‌ ಆರ್ಮ್ ಮಾದರಿಯದ್ದಾಗಿದೆ. 

ಬೆಂಗಳೂರಿನಲ್ಲಿ ಶೋರೂಂ ಬೆಲೆ: 1.05 ಲಕ್ಷ ರೂ.
ಪ್ರತಿ ಲೀಟರ್‌ಗೆ ಮೈಲೇಜ್‌: 44 ಕಿ.ಮೀ.

ಹೇಗಿದೆ ಇಂಟ್ರೂಡೆರ್‌?
– ಕರ್ಬ್ ವೇಟ್‌ 148 ಕೆ.ಜಿ.
– ಉದ್ದ 2130ಮಿ.ಮೀ./ ಅಗಲ 805ಮಿ.ಮೀ./ ಎತ್ತರ 1095ಮಿ.ಮೀ.
– ಗ್ರೌಂಡ್‌ ಕ್ಲಿಯರೆನ್ಸ್‌ 170ಮಿ.ಮೀ.
– ಇಂಧನ ಶೇಖರಣೆ: ಗರಿಷ್ಠ 11 ಲೀ.

ಬೈಕ್‌, ಸ್ಕೂಟರ್‌ಗಳ ಬೆಲೆ ಹೆಚ್ಚಳ?
ಏಪ್ರಿಲ್‌ ವೇಳೆಗೆ ಹೊಸ ಬೈಕ್‌ ಹಾಗೂ ಸ್ಕೂಟರ್‌ಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಆ ಹೊಸ ಬೆಲೆಗೆ  ಗ್ರಾಹಕರನ್ನು ಮಾನಸಿಕವಾಗಿ ಸಿದ್ಧಗೊಳಿಸಲು ಕಂಪನಿ ಈಗಾಗಲೇ ತಯಾರಿ ಆರಂಭಿಸಿದೆ. ಕಾಂಬಿ ಬ್ರೇಕಿಂಗ್‌ ಸಿಸ್ಟಮ್‌ ಹಾಗೂ ಎಬಿಎಸ್‌ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿರುವ ಸರ್ಕಾರ, ಏಪ್ರಿಲ್‌ 1ರಿಂದಲೇ ಇದು ಜಾರಿಗೆ ಬರಬೇಕೆಂದು ಹೇಳಿದ್ದರಿಂದ ದ್ವಿಚಕ್ರ ವಾಹನ ಕಂಪನಿಗಳು ಅನಿವಾರ್ಯವಾಗಿ ಬೆಲೆ ಹೆಚ್ಚಿಸುವ ಎಲ್ಲಾ ಸಾಧ್ಯತೆಗಳಿವೆ.

ಗಣಪತಿ ಅಗ್ನಿಹೋತ್ರಿ ಅಂತಲೇ ಇರಲಿ…

Advertisement

Udayavani is now on Telegram. Click here to join our channel and stay updated with the latest news.

Next