ಕೊಡುವ ಪ್ರಯತ್ನವಿದು…
Advertisement
1. ಬಾಹ್ಯಾಕಾಶ ಯಾನಗೈದ ಮೊದಲ ಭಾರತೀಯ ಮಹಿಳೆ ಹಾಗೂ ಎರಡನೇ ಭಾರತೀಯ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾದವರು ಕಲ್ಪನಾ ಚಾವ್ಲಾ.2. ಹರ್ಯಾಣಾದಲ್ಲಿ ಹುಟ್ಟಿದ ಕಲ್ಪನಾ ಭರತನಾಟ್ಯ ಮತ್ತು ಸ್ಕೂಬಾ ಡೈವಿಂಗ್‌ನಲ್ಲಿ ಆಸಕ್ತಿ ಹೊಂದಿದ್ದರು.
3. ಕಲ್ಪನಾಗೆ ಹೆತ್ತವರು ಇಟ್ಟ ಹೆಸರು ಮೊಂಟೊ. ಆದರೆ, ಕಲ್ಪನಾ ಎಂಬ ಹೆಸರನ್ನು ಅವರೇ ಆಯ್ಕೆ ಮಾಡಿಕೊಂಡಿದ್ದಂತೆ.
4. ಶಾಲಾ ದಿನಗಳಲ್ಲಿ ಕರಾಟೆ, ಬ್ಯಾಡ್ಮಿಂಟನ್ ಮತ್ತು ರನ್ನಿಂಗ್ ರೇಸ್‌ನಲ್ಲೂ ಕಲ್ಪನಾ ಭಾಗವಹಿಸುತ್ತಿದ್ದರು.
5. ಚಂಡೀಗಡ್‌ನಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ ಮುಗಿಸಿದ ನಂತರ ಕಲ್ಪನಾ, ಹೆಚ್ಚಿನ ಓದಿಗಾಗಿ ಅಮೆರಿಕಕ್ಕೆ ತೆರಳಿದರು.
6. ಅಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಚ್.ಡಿಯನ್ನೂ ಮಾಡಿದರು.
7. ಅಮೆರಿಕದ ಬಾಹ್ಯಾಕಾಶ ಸಂಸ್ಥೆ- ನಾಸಾದಲ್ಲಿ ಉನ್ನತ ಹುದ್ದೆ ನಿರ್ವಹಿಸಿದ ಖ್ಯಾತಿ ಅವರದು.
8. ಸರ್ಟಿಫೈಡ್ ಫ್ಲೈಟ್ ಇನ್‌ಸ್ಟ್ರಕ್ಟರ್ (ವಿಮಾನಯಾನ ತರಬೇತುದಾರ) ಆಗಿದ್ದ ಕಲ್ಪನಾರ ಬಳಿ ಖಾಸಗಿ ವಿಮಾನ ಚಾಲನೆಯ ಪರವಾನಗಿಯೂ ಇತ್ತು.
9. ಕಲ್ಪನಾರ ಮರಣಾನಂತರ ಪತಿ ಜೀನ್ ಪಿಯರಿ ಹ್ಯಾರಿಸನ್, ಮಡದಿಯ ಕುರಿತು “ದಿ ಎಡ್ಜ್ ಆಫ್ ಟೈಮ್’ ಎಂಬ ಜೀವನಚರಿತ್ರೆ ಬರೆದಿದ್ದಾರೆ
10. ಭಾರತದ ಮೊದಲ ಹವಾಮಾನ ಉಪಗ್ರಹ, ನಾಸಾದ ಸೂಪರ್‌ಕಂಪ್ಯೂಟರ್, ಕರ್ನಾಲ್‌ನಲ್ಲಿರುವ ತಾರಾಲಯ, ಮಂಗಳ ಗ್ರಹದ ಮೇಲಿರುವ ಬೆಟ್ಟ, ಮಂಗಳ ಮತ್ತು ಗುರು ಗ್ರಹದ ಕಕ್ಷೆಗಳ ನಡುವೆ ಸೂರ್ಯನನ್ನು ಸುತ್ತುವ ಕ್ಷುದ್ರಗ್ರಹ- ಇವೆಲ್ಲವಕ್ಕೂ ಕಲ್ಪನಾ ಚಾವ್ಲಾರ ಹೆಸರು ನೀಡಲಾಗಿದೆ.