Advertisement

Maruti Suzuki Epic New:ಮಾರುತಿ ಸುಜುಕಿ ಎಪಿಕ್‌ ನ್ಯೂಸ್ವಿಫ್ಟ್ ನ 500 ಕಾರುಗಳ ಡೆಲಿವರಿ

04:43 PM Jun 01, 2024 | Team Udayavani |

ಉದಯವಾಣಿ ಸಮಾಚಾರ 
ಬೆಂಗಳೂರು: ಮಾರುತಿ ಸುಜುಕಿ ಅರೆನಾ ಡೀಲರ್‌ ಶಿಪ್ಸ್‌ ಬಿಡುಗಡೆಯಾದ ಮಾರುತಿ ಸುಜುಕಿಯ ಎಪಿಕ್‌ ನ್ಯೂ ಸ್ವಿಫ್ಟ್ ನ 500 ಕಾರುಗಳನ್ನು ಡೆಲಿವರಿ ಮಾಡಿದೆ. ಈ ಸಾಧನೆಯು ಭಾರತೀಯ ಗ್ರಾಹಕರಲ್ಲಿ ಈ ವಿನೂತನ ಕಾರಿನ ಬಗ್ಗೆ ಭಾರಿ ಬೇಡಿಕೆ ಮತ್ತು ಜನಪ್ರಿಯತೆ ಸೃಷ್ಟಿಯಾಗಿರುವುದನ್ನು ಸೂಚಿಸುತ್ತದೆ.

Advertisement

ಇದನ್ನೂ ಓದಿ:Cyber fraud: ವಾಟ್ಸಾಪ್ ಟ್ರೇಡಿಂಗ್ ವಂಚನೆಯಲ್ಲಿ 9.09 ಕೋಟಿ ರೂ ಕಳೆದುಕೊಂಡ ಉದ್ಯಮಿ

ಮಾರುತಿ ಸುಜುಕಿ ಡೀಲರ್‌ಶಿಪ್ಸ್‌ಗಳು ಡೆಲಿವರಿ ಮಾಡಿರುವ 500 ಕಾರುಗಳಲ್ಲಿ ಶೇ. 36 ಕಾರುಗಳು ಜೆಡ್‌- ವೇರಿಯಂಟ್‌ನ ಕಾರುಗಳಾಗಿವೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಎಪಿಕ್‌ ನ್ಯೂ ಸ್ವಿಫ್ಟ್‌ ನ ಡೆಲಿವರಿ ಆಗಿರುವುದು 19 ವರ್ಷಗಳ ಪರಂಪರೆಯನ್ನು ಹೊಂದಿರುವ ಸಂಸ್ಥೆಯ ಕಾರಿನ ಬಗ್ಗೆಗಿನ ಸ್ವೀಕಾರಾರ್ಹತೆಯ ದ್ಯೋತಕವಾಗಿದೆ. ಸ್ವಿಫ್ಟ್ ತನ್ನ ಹೊಸ ಅವತಾರದಲ್ಲಿ ಸ್ಫೋರ್ಟಿ ಡಿಸೈನ್‌ಗೆ ಒತ್ತು ನೀಡಿ ಕಲಾತ್ಮಕವಾಗಿ ಕಾರನ್ನು ರೂಪಿಸಿದೆ.

ಸುಧಾರಿತ ಜೆಡ್‌-ಸರಣಿಯ ಇಂಜಿನ್‌ ಅತ್ಯುತ್ತಮ ಡ್ರೈವಿಂಗ್‌ ಅನುಭವ, ಪ್ರತಿ ಲೀಟರ್‌ಗೆ 25.75 ಕಿಮೀ ಇಂಧನ ಕ್ಷಮತೆಯನ್ನು ಒದಗಿಸುತ್ತದೆ. ಮಾರುತಿ ಸುಜುಕಿಗೆ ಸುರಕ್ಷತೆಯು ಆದ್ಯತೆಯ ವಿಷಯವಾಗಿದ್ದು ಆರು ಏರ್‌ಬ್ಯಾಗ್‌ಗಳು, ಇಎಸ್‌ಪಿ, ಹಿಲ್‌ ಹೋಲ್ಡ್‌ ಅಸಿಸ್ಟ್‌ ಮುಂತಾದ ಆಧುನಿಕ ಸುರಕ್ಷಾ ಕ್ರಮಗಳನ್ನು ಅಳವಡಿಸಲಾಗಿದೆ. 6.49 ಲಕ್ಷ ರೂ (ಎಕ್ಸ್‌-ಶೋರೂಮ್‌) ಗಳ ಆರಂಭಿಕ ದರದೊಂದಿಗೆ ಎಪಿಕ್‌ ನ್ಯೂ ಸ್ವಿಫ್ಟ್ ಲಭ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next