Advertisement

ಚಕ್ರಬಡ್ಡಿ ಮನ್ನಾಕ್ಕಾಗಿ ಗ್ರಾಹಕರು ಅರ್ಜಿ ಹಾಕಬೇಕಾಗಿಲ್ಲ! ವಿತ್ತ ಸಚಿವಾಲಯ ಸ್ಪಷ್ಟನೆ

07:15 PM Oct 29, 2020 | sudhir |

ನವದೆಹಲಿ: ಮಾರ್ಚ್‌ 1ರಿಂದ ಆಗಸ್ಟ್‌ 31 ನಡುವಿನ ಮೊರೊಟೋರಿಯಂ ಅವಧಿಯಲ್ಲಿನ ಚಕ್ರಬಡ್ಡಿ ಮನ್ನಾ ಸೌಲಭ್ಯಕ್ಕಾಗಿ ಯಾವ ಸಾಲ ಗ್ರಾಹಕರು ಅರ್ಜಿ ಹಾಕಬೇಕಾಗಿಲ್ಲ. ಅರ್ಹ ಫ‌ಲಾನುಭವಿಗಳ ಖಾತೆಗೆ ಬ್ಯಾಂಕುಗಳಿಂದ ಆಟೋ ಕ್ರೆಡಿಟ್‌ ಆಗಲಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ಹೇಳಿದೆ.

Advertisement

ಈ ಸಂಬಂಧ ಹಣಕಾಸು ಸಚಿವಾಲಯ 20 ಪ್ರಶ್ನೋತ್ತರಗಳನ್ನು ಸಿದ್ಧಪಡಿಸಿ ವೆಬ್ ಸೈಟ್‌ ನಲ್ಲಿ ಹಾಕಿದೆ. ಈ ಪ್ರಕಾರವಾಗಿ, ಯಾವುದೇ ಗ್ರಾಹಕರು ತಮಗೆ ಮೊರೊ ಟೋರಿಯಂ ಅವಧಿಯ ಚಕ್ರ ಬಡ್ಡಿ ಮನ್ನಾದ ಸೌಲಭ್ಯ ನೀಡಿ ಎಂದು ಅರ್ಜಿ ಸಲ್ಲಿಸಬೇಕಾಗಿಲ್ಲ, ಹಾಗೆಯೇ ಬ್ಯಾಂಕುಗಳಿಗೂ ಸುತ್ತಬೇಕಾಗಿಲ್ಲ. ಅರ್ಹ ಫ‌ಲಾನುಭವಿಗಳನ್ನು ಆರಿಸಲಿರುವ ಬ್ಯಾಂಕುಗಳು ಅವರ ಖಾತೆಗಳಿಗೆ ಜಮಾ ಮಾಡಲಿವೆ ಎಂದು ಹೇಳಿದೆ. ಜತೆಗೆ, ಮೊರೊ ಟೋರಿಯಂ ಸೌಲಭ್ಯ ಪಡೆಯದೇ ಇರುವವರಿಗೂ ಈ ಸೌಲಭ್ಯ ಅನ್ವಯವಾಗಲಿದೆ ಎಂದು ಹೇಳಿದೆ.

ಕ್ರಿಸಿಲ್‌ನ ವರದಿ ಪ್ರಕಾರ ಶೇ.75 ಸಾಲಗಾರರು ಈ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ. ಇದರಿಂದ ಕೇಂದ್ರ ಸರ್ಕಾರಕ್ಕೆ 7,500 ಕೋಟಿ ರೂ. ಹೊರೆಯಾಗಲಿದೆ ಎಂದು ಹೇಳಿದೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರ ಭೂಮಿ ಖರೀದಿ ಕಾನೂನು: ಪಿಡಿಪಿ ಪ್ರತಿಭಟನೆ, ಹಲವರ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next