ಮುಂಬಯಿ: ಭಾರತೀಯ ರಿಸರ್ವ್ ಬ್ಯಾಂಕ್‌ನ ಮೂರು ದಿನಗಳ ಸಾಲ ನೀತಿ ಪರಿಶೀಲನ ಸಭೆ (ಎಂಪಿಸಿ) ಸೋಮವಾರದಿಂದ ಬುಧವಾರದ ವರೆಗೆ ಮುಂಬಯಿಯಲ್ಲಿ ನಡೆಯಲಿದೆ. ಈ ಸಭೆಯಲ್ಲಿಯೂ ಬಡ್ಡಿದರವನ್ನು ಶೇ.0.25 ಏರಿಕೆ ಮಾಡುವ ಸಾಧ್ಯತೆಗಳು ಇವೆ.
Advertisement
2023ನೇ ಸಾಲಿನ ಮೊದಲ ಎಂಪಿಸಿ ಸಭೆ ಇದಾಗಲಿದೆ. ಬ್ಯಾಂಕ್ ಆಫ್ ಇಂಗ್ಲೆಂಡ್ ಕೂಡ ಕೆಲವು ದಿನಗಳ ಹಿಂದೆ ಶೇ.0.5, ಅಮೆರಿಕದ ಫೆಡರಲ್ ರಿಸರ್ವ್ ಶೇ.0.25 ಬಡ್ಡಿ ದರ ಏರಿಕೆ ಮಾಡಿತ್ತು. ಅದಕ್ಕೆ ಪೂರಕವಾಗಿ ಆರ್‌ಬಿಐನ ನಿರ್ಧಾರವೂ ಇರಲಿದೆ ಎನ್ನಲಾಗುತ್ತಿದೆ. ದೇಶದಲ್ಲಿ ಏರಿಕೆಯಾಗುತ್ತಿರುವ ಹಣದುಬ್ಬರ ದರ ವರ್ಷಾಂತ್ಯಕ್ಕೆ ಶೇ.5ರಿಂದ ಶೇ.5.5ರ ಪ್ರಮಾಣದಲ್ಲಿ ಇರುವ ಸಾಧ್ಯತೆಗಳಿವೆ.