ಕೀವ್: ರಷ್ಯಾ ಸೇನೆ ಉಕ್ರೇನನ್ನು ಬಹುತೇಕ ಹಿಡಿತಕ್ಕೆ ತೆಗೆದುಕೊಂಡಿದೆ. ಅದೇ ವೇಳೆ ಅಲ್ಲಿ ಅಂತರ್ಜಾಲ ವ್ಯವಸ್ಥೆಯೂ ಹದಗೆಟ್ಟಿದೆ. ಶೇ.87ರಷ್ಟು ಅಂತರ್ಜಾಲದ ಕಾರ್ಯ ನಿರ್ವಹಣೆ ತೀರಾ ಸಾಮಾನ್ಯವಾಗಿತ್ತು.
ಜನರು ಸರಿಯಾಗಿ ಮಾಹಿತಿ ತಿಳಿದು ಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ.
ಶುಕ್ರ ವಾರ ಮುಂಜಾನೆಗೂ ಮುನ್ನ ಉಕ್ರೇನಿನ ಮುಖ್ಯ ನೆಟ್ ಪೂರೈಕೆದಾರ ಸಂಸ್ಥೆ ಗಿಗಾ ಟ್ರಾನ್ಸ್‌ನ ಸೇವೆಯ ಲಭ್ಯತೆ ಪ್ರಮಾಣ ಕೇವಲ ಶೇ.20ಕ್ಕೆ ಇಳಿದಿತ್ತು. ಶುಕ್ರವಾರ ಮುಂಜಾನೆ ಬಳಕೆ ಜಾಸ್ತಿಯಾಯಿತು. ಒಟ್ಟಾರೆ ಬೇರೆ ಬೇರೆ ಸೇವಾದಾರರನ್ನೂ ಸೇರಿದರೆ ಅಂತರ್ಜಾಲ ಲಭ್ಯತೆ ಪ್ರಮಾಣ ಕಡಿಮೆಯಿದೆ, ವೇಗವೂ ಸಾಮಾನ್ಯವಾಗಿದೆ.
ರಾಷ್ಟ್ರೀಯ ಮಟ್ಟದ ಶೇ.87 ಬಳಕೆದಾರರನ್ನು ಪರಿಶೀಲಿಸಿದಾಗ, ಇಲ್ಲಿ ಅಂತರ್ಜಾಲದ ಗುಣಮಟ್ಟ ತೀರಾ ಕುಸಿದಿದ್ದು ಗಮನಕ್ಕೆ ಬಂದಿದೆ. ಹೀಗೆಂದು ನೆಟ್‌ಬ್ಲಾಕ್ಸ್ ಸಂಸ್ಥೆ ಹೇಳಿದೆ. ಇನ್ನೂ ಹಲವು ನಗರಗಳಲ್ಲಿ ಯಾವುದೇ ಸಮಯದಲ್ಲಿ ಪೂರ್ಣವಾಗಿ ನೆಟ್‌ವರ್ಕ್ ಕೈಕೊಡಬಹುದು ಎಂಬ ಆತಂಕದಲ್ಲಿ ಜನರಿದ್ದಾರೆ.